ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾ: ಸಂಕಷ್ಟದಲ್ಲಿ ಭಾರತೀಯ ನರ್ಸ್‌ಗಳು

Last Updated 29 ಜುಲೈ 2014, 11:09 IST
ಅಕ್ಷರ ಗಾತ್ರ

ನವದೆಹಲಿ(ಐಎಎನ್‌ಎಸ್): ಇತ್ತೀಚೆಗೆ ಯುದ್ಧ ಪೀಡಿತ ಇರಾಕ್‌ನಲ್ಲಿ ಸಿಲುಕಿಕೊಂಡಿದ್ದ ನರ್ಸ್‌ಗಳನ್ನು  ತವರಿಗೆ ಕರೆತಂದ  ಬೆನ್ನಲ್ಲೇ ಲಿಬಿಯಾದಲ್ಲಿರುವ ಭಾರತೀಯ ಮೂಲದ ನರ್ಸ್‌ಗಳು ಕೂಡ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಮಂಗಳವಾರ ವರದಿಯಾಗಿದೆ.

ಕಳೆದ ಎರಡು ವಾರಗಳಿಂದ  ಅಲ್ಲಿನ ಸರ್ಕಾರ ಮತ್ತು ಇಸ್ಲಾಮಿಕ್ ಪಡೆಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ರಾಜಧಾನಿ ತ್ರಿಪೋಲಿ ಮತ್ತು ಬೆಂಗ್ಹಾಜ್ಹಿಯಲ್ಲಿ 150ಕ್ಕೂ ಹೆಚ್ಚು ನಾಗರಿಕರು ಹತ್ಯೆಯಾಗಿದ್ದಾರೆ. ಈ ನಡುವೆ ಬಂಡುಕೋರರು  ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿರುವುದರಿಂದ ನರ್ಸ್‌ಗಳು ತಮ್ಮನ್ನು ರಕ್ಷಿಸುವಂತೆ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದಾರೆ.

ಲಿಬಿಯಾದಲ್ಲಿರುವ ಭಾರತೀಯ ರಾಯಭಾರಿ ಅಜರ್ ಎ.ಹೆಚ್. ಖಾನ್  ಅವರು ತ್ರಿಪೋಲಿಯಲ್ಲಿರುವ ಭಾರತೀಯ ದಾದಿಯರನ್ನು ಭೇಟಿ ಮಾಡಿ ಅವರ ಸುರಕ್ಷತೆ ಬಗ್ಗೆ ಭರವಸೆ ನೀಡಿದ್ದಾರೆ.

‘ಇಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ ನಾವು ದಾದಿಯರೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ’ ಎಂದು ಖಾನ್ ಅವರು ತಿಳಿಸಿದ್ದಾರೆ.
ತ್ರಿಪೋಲಿಯ ಎರಡು ಆಸ್ಪತ್ರೆಗಳಲ್ಲಿ 430 ಭಾರತೀಯ ದಾದಿಯರಿದ್ದು, 88 ಜನ ಮಾತ್ರ ಸಹಾಯಕ್ಕಾಗಿ ಭಾರತೀಯ ದೂತವಾಸವನ್ನು ಸಂಪರ್ಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT