ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೀಟರ್‌ ಹಾಲಿಗೆ ಕೇವಲ ₨ 7!

ತಿ. ನರಸೀಪುರ ರೈತರನ್ನು ವಂಚಿಸಿದ ‘ಮೈಮುಲ್‌’: ಕ್ರಮಕ್ಕೆ ಸೂಚನೆ
Last Updated 1 ಏಪ್ರಿಲ್ 2015, 20:57 IST
ಅಕ್ಷರ ಗಾತ್ರ

ಮೈಸೂರು: ಲೀಟರ್‌ ನಂದಿನಿ ಹಾಲನ್ನು ಗ್ರಾಹಕರಿಗೆ ಕನಿಷ್ಠ ₨ 30 ದರದಲ್ಲಿ ಮಾರಾಟ ಮಾಡುವ ಮೈಸೂರು, ಚಾಮರಾಜನಗರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಮೈಮುಲ್‌) ಹೈನುಗಾರರಿಗೆ ₨ 7 ಪಾವತಿಸಿದ ಪ್ರಕರಣ ತಿ.ನರಸೀಪುರ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. ಅತ್ಯಂತ ಕಡಿಮೆ ದರ ಪಾವತಿಸಿ ರೈತರನ್ನು ವಂಚಿಸಿರುವುದನ್ನು ಪ್ರಶ್ನಿಸಿರುವ ಪಶುಸಂಗೋಪನಾ ಇಲಾಖೆಯ ಕಾರ್ಯದರ್ಶಿ ಹರ್ಷ ಗುಪ್ತ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುಲು ಸೂಚಿಸಿದ್ದಾರೆ.

ತಿ. ನರಸೀಪುರ ತಾಲ್ಲೂಕಿನ ಹೊಸ ಕೆಂಪಯ್ಯನಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘ ಹೈನುಗಾರರಿಗೆ ಮೂರು ವರ್ಷದಿಂದ ಈ ದರ ನೀಡಿದೆ. ಹಾಲಿನ ಗುಣಮಟ್ಟ ತೀರಾ ಕಳಪೆಯಾಗಿದೆ ಎಂಬ ಕಾರಣ ನೀಡಿ ರೈತರನ್ನು ಮೋಸಗೊಳಿ
ಸಿದ್ದು ವಿವಾದಕ್ಕೆ ಕಾರಣವಾಗಿದೆ. ಕನಿಷ್ಠ ₨ 19 ಪಾವತಿಸಿ ಹಾಲು ಖರೀದಿಸಬೇಕು ಎಂಬ ಕರ್ನಾಟಕ ಹಾಲು ಮಹಾಮಂಡಳದ ಆದೇಶವನ್ನು ‘ಮೈಮುಲ್‌’ ಉಲ್ಲಂಘಿಸಿದೆ. ಇಡೀ ಪ್ರಕರಣಕ್ಕೆ ಗ್ರಾಮದ ಹಾಲು ಉತ್ಪಾದಕರ ಸಂಘವನ್ನು ಹೊಣೆ ಮಾಡಿ ಗ್ರಾಮಸ್ಥರ ಅಸಮಾಧಾನಕ್ಕೂ ಗುರಿಯಾಗಿದೆ.

ಏನಿದು ಪ್ರಕರಣ? ತಿ. ನರಸೀಪುರ ತಾಲ್ಲೂಕಿನ ರಾಯರ ಹುಂಡಿ ಹಾಗೂ ಇಂಡವಾಳು ಗ್ರಾಮದ ರೈತರು ಹಲವು ವರ್ಷಗಳಿಂದ ಹಳೆ ಕೆಂಪಯ್ಯನಹುಂಡಿಗೆ ಹಾಲು ಸರಬರಾಜು ಮಾಡುತ್ತಿದ್ದರು. ಈ ಎರಡೂ ಗ್ರಾಮದ ರೈತರು ಇಲ್ಲಿಗೆ ಹಾಲು ಸರಬರಾಜು ಮಾಡದಂತೆ ‘ಮೈಮುಲ್‌’ ನಿರ್ಬಂಧಿಸಿದ ಪರಿಣಾಮ 2012ರಿಂದ ಹೊಸ ಕೆಂಪಯ್ಯನಹುಂಡಿಯ ಹಾಲು ಉತ್ಪಾದಕರ ಸಂಘಕ್ಕೆ ಹಾಲು ಹಾಕತೊಡಗಿದರು.

ಆದರೆ, ಇಲ್ಲಿ ಸಮಯಕ್ಕೆ ಸರಿಯಾಗಿ ಹಣ ಪಾವತಿ ಆಗುತ್ತಿರಲಿಲ್ಲ. ರೈತರಿಗೆ ನೀಡಿದ ಖರೀದಿ ದರವನ್ನೂ ಪುಸ್ತಕದಲ್ಲಿ ನಮೂದಿಸುತ್ತಿರಲಿಲ್ಲ. ‘ಮೈಮುಲ್‌’ನ ಪಶು ಆಹಾರ ಕೂಡ ಲಭ್ಯವಾಗುತ್ತಿರಲಿಲ್ಲ. ಪ್ರತಿ ಲೀಟರ್‌ ಹಾಲಿಗೆ ಆಗಾಗ ₨ 7 ಪಾವತಿ ಮಾಡುವುದು ಇಲ್ಲಿ ಸಾಮಾನ್ಯವಾಗಿತ್ತು. ಇದನ್ನು ಪ್ರಶ್ನಿಸಿದ ರೈತರನ್ನು ಹಾಲಿನ ಗುಣಮಟ್ಟ ಕಳಪೆಯಾಗಿದೆ ಎಂಬ ಕಾರಣ ನೀಡಿ ಸಾಗ ಹಾಕಲಾಗುತ್ತಿತ್ತು. ಜನವರಿ, ಫೆಬ್ರುವರಿ ತಿಂಗಳಲ್ಲಿ ಸತತವಾಗಿ ಕನಿಷ್ಠ ದರ ಪಾವತಿಸಿರುವು
ದನ್ನು ಪ್ರಶ್ನಿಸಿ ರಾಯರಹುಂಡಿಯ ಪಿ.ಆರ್‌. ಆನಂದ್‌  ಕರ್ನಾಟಕ ಹಾಲು ಮಹಾಮಂಡಳ ಹಾಗೂ ಪಶುಸಂಗೋ
ಪನಾ ಇಲಾಖೆಗೆ ದೂರು ನೀಡಿದ್ದರು.

ಪರೀಕ್ಷಾ ಮಾಪನವೇ ಇಲ್ಲ! ರೈತರು ಸರಬರಾಜು ಮಾಡುತ್ತಿದ್ದ ಹಾಲನ್ನು ಪರೀಕ್ಷಿಸುವ ‘ಲ್ಯಾಕ್ಟೋಮೀಟರ್‌’ ಅನ್ನು ಸಂಘ ಹೊಂದಿಲ್ಲ. ನಿತ್ಯ ಸಂಗ್ರಹವಾಗುವ 60ರಿಂದ 70 ಲೀಟರ್‌ ಹಾಲನ್ನು ಶೀತಲೀಕರಣ ಕೇಂದ್ರದಲ್ಲಿ ಪರೀಕ್ಷಿಸಲಾ

ಗುತ್ತಿತ್ತು. ಇದಕ್ಕೆ ಅನುಗುಣವಾಗಿ ಎಲ್ಲ ರೈತರಿಗೆ ದರ ನಿಗದಿಪಡಿಸಲಾಗುತ್ತಿತ್ತು. ನಿಗದಿತ (ಎಸ್‌ಎನ್‌ಎಫ್‌ 8.5, ಫ್ಯಾಟ್‌ 3.5) ಪ್ರಮಾಣಕ್ಕಿಂತ ಕಡಿಮೆ ಗುಣಮಟ್ಟದ ಹಾಲು ಶೀತಲೀಕರಣ ಕೇಂದ್ರ ತಲುಪುತ್ತಿದ್ದ ಪರಿಣಾಮ ಪ್ರತಿ ಲೀಟರ್‌ ಹಾಲಿಗೆ ₨ 7 ದರ ನೀಡಲಾಗುತ್ತಿತ್ತು. ಗರಿಷ್ಠ ₨ 22 ಹಾಗೂ ಕನಿಷ್ಠ ₨ 19 ಖರೀದಿ ದರವನ್ನು ಕಡ್ಡಾಯವಾಗಿ ಉತ್ಪಾ
ದಕರಿಗೆ ನೀಡಬೇಕು ಎಂಬ ಕೆಎಂಎಫ್‌ ನಿಯಮಕ್ಕೆ ಇದು ವಿರುದ್ಧವಾಗಿರುವುದನ್ನು ಸ್ವತಃ ‘ಮೈಮುಲ್‌’ ಒಪ್ಪಿಕೊಂಡಿದೆ.

ಮೊಕದ್ದಮೆಗೆ ಶಿಫಾರಸು: ಈ ಕುರಿತು ಮೈಮುಲ್‌ನಿಂದ ವರದಿ ಪಡೆದು ಪರಿಶೀಲಿಸಿದ ಪಶುಸಂಗೋಪನಾ ಇಲಾಖೆಯ ಕಾರ್ಯದರ್ಶಿ ಹರ್ಷ ಗುಪ್ತ , ರೈತರಿಗೆ ಅತಿ ಕಡಿಮೆ ದರ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಲಿ
ನಲ್ಲಿ ಎಸ್‌ಎನ್‌ಎಫ್‌ ಪ್ರಮಾಣ 8.4 ಇದೆ ಎಂಬ ಒಂದೇ ಕಾರಣಕ್ಕೆ ಉತ್ಪಾದಕರಿಗೆ ಅನ್ಯಾಯವಾಗುವಂತಹ ಬೆಲೆ ಪಾವತಿಸಿರುವುದು ಅಕ್ಷಮ್ಯ. ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಹಾಲಿನ ನ್ಯಾಯವಾದ ಬೆಲೆಯನ್ನು ಮರುಪಾವತಿ ಮಾಡಿ, ವಂಚಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ನಡೆದಿವೆಯೇ ಎಂದು ಪರಿಶೀಲಿಸಬೇಕು. ಎಸ್‌ಎನ್‌ಎಫ್‌ ಪ್ರಮಾಣ 8.5 ಹಾಗೂ ಫ್ಯಾಟ್‌ 3.5ಕ್ಕಿಂತ ಕಡಿಮೆ ಇರಬಾರದು ಎಂದು ಕಡ್ಡಾಯ ಮಾಡಬಾರದು ಎಂದು ಮೈಮುಲ್‌ಗೆ ಸೂಚಿಸಿದ್ದಾರೆ.

‘ಲ್ಯಾಕ್ಟೋಮೀಟರ್‌’ನಲ್ಲಿ ಗುಣಮಟ್ಟ ಪರೀಕ್ಷಿಸಲು ಸೂಚಿಸಿದ್ದು, ತಪ್ಪಿತಸ್ಥ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಲು ಸ್ಥಳೀಯ ಸಂಘಕ್ಕೆ ಸೂಚಿಸಲಾಗಿದೆ.
ಆನಂದರಾಜ್‌,ವ್ಯವಸ್ಥಾಪಕ, ‘ಮೈಮುಲ್‌’

ಈ ಪ್ರಮಾದಕ್ಕೆ ಸ್ಥಳೀಯ ಸಂಘವನ್ನು ಮಾತ್ರ ಹೊಣೆ ಮಾಡುವುದು ತಪ್ಪು. ನಿಯಮ ಉಲ್ಲಂಘಿಸಿ ರೈತರಿಗೆ ಕನಿಷ್ಠ ದರ ಪಾವತಿಸಿದ್ದರೂ ‘ಮೈಮುಲ್‌’ ಅಧಿಕಾರಿಗಳು ಸುಮ್ಮನಿದ್ದರು.
ಪಿ.ಆರ್‌. ಆನಂದ, ರಾಯರಹುಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT