ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖಕ ಎಚ್.ಆರ್. ರಾಮಕೃಷ್ಣ ಅಭಿಮತ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ವಿಜ್ಞಾನಕ್ಕೆ ಸಂಬಂಧಿತ ಲೇಖನಗಳಿಗೆ ಸಾಹಿತ್ಯ ಮತ್ತು ತತ್ವಶಾಸ್ತ್ರದ ಲೇಪ ಹಚ್ಚುವ ಮೂಲಕ ಓದುಗರನ್ನು ಆಕರ್ಷಿಸುವಂತೆ ಮಾಡುವುದು ದೊಡ್ಡ ಸವಾಲು. ಈ ಸವಾಲನ್ನು ಎಂ.ಆರ್.ನಾಗರಾಜು ಅವರು  ಪುಸ್ತಕಗಳ ಮೂಲಕ  ಸರಳವಾಗಿಸಿದ್ದಾರೆ~ ಎಂದು ಲೇಖಕ ಪ್ರೊ.ಎಚ್.ಆರ್.ರಾಮಕೃಷ್ಣರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸರಸ ಸಂವಹನ ಸಮಿತಿಯು ನಗರದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಲ್ಲಿ ಭಾನುವಾರ ಆಯೋಜಿಸಿದ್ದ ಲೇಖಕ ಪ್ರೊ.ಎಂ.ಆರ್.ನಾಗರಾಜು ಅವರ `ಸರಸ ಸಂವಹನ~ ಮತ್ತು `ಓ ನನ್ನ ನೆನಪ~ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

`ವೈಜ್ಞಾನಿಕ ವಿಚಾರಗಳನ್ನು ಮಂಡಿಸುವಾಗ ಜೀವನ ಪ್ರೀತಿ ಬತ್ತಬಾರದು. ಬದುಕಿನ ಪ್ರತಿ ಎಳೆಯಲ್ಲೂ ಅಡಕಗೊಂಡಿರುವ ವಿಜ್ಞಾನ ಮತ್ತು ಪ್ರೀತಿ ಮಿಳಿತಗೊಳಿಸಿ ಓದುಗರಿಗೆ ನೀಡುವುದು ಒಂದು ಕಲೆ. ಇದನ್ನು ಪರಿಪೂರ್ಣವಾಗಿ ಅಳವಡಿಸಿಕೊಳ್ಳುವತ್ತ ಯುವ ಲೇಖಕರು ಚಿಂತನೆ ನಡೆಸಬೇಕು~ ಎಂದು ಸಲಹೆ ನೀಡಿದರು.

`ಸಾಮರಸ್ಯದ ಬದುಕಿಗೆ ಸರಸ ಮತ್ತು ವಿಜ್ಞಾನವೆರೆಡು ಅಗತ್ಯವಿದೆ. ಈ ವಿಷಯವನ್ನು ಲೇಖಕರು ಕೃತಿಗಳಲ್ಲಿ ಬಹಳ ಸೊಗಸಾಗಿ ತಿಳಿಸಿದ್ದಾರೆ~ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಗೌರವ  ಕಾರ್ಯದರ್ಶಿ ಡಾ.ವಸುಂಧರಾ ಭೂಪತಿ, ` ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ವಿಜ್ಞಾನ ಸಾಹಿತ್ಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದ್ದು, ಸೃಜನಶೀಲತೆಯ ಕೊರತೆಯೇ ಕಾರಣವೆಂದು ಹೇಳಲಾಗುತ್ತಿದೆ. ವೈಚಾರಿಕ ವಿಚಾರಗಳ ಜತೆಯಲ್ಲಿ ಸೃಜನಶೀಲತೆಯಿರುವುದನ್ನು ವಿಜ್ಞಾನ ಲೇಖನಗಳಲ್ಲಿ ಗಮನಿಸಬೇಕು~ ಎಂದು ಹೇಳಿದರು.

ಪತ್ರಕರ್ತ ನಾಗೇಶ್ ಹೆಗಡೆ ಮಾತನಾಡಿ, `ವಿಜ್ಞಾನಕ್ಕೆ ಸಂಬಂಧಪಟ್ಟ ವಿಚಾರಗಳು ವಿವಿಧ ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ಸಂವಹನ ನಡೆಯುವ ಅಗತ್ಯವಿದೆ. ಇದರೊಂದಿಗೆ ವಿಜ್ಞಾನ ಕ್ಷೇತ್ರದ ಮಾಹಿತಿ ಒದಗಿಸುವಲ್ಲಿ ಉತ್ತಮ ಸಂವಹನಕಾರರ ಕೊರತೆಯನ್ನು ಎದುರಿಸುತ್ತಿದ್ದೇವೆ~ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ. ಎ.ಕೃಷ್ಣಭಟ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT