ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕಾರ್ಯಕರ್ತೆಯರಿಂದ ‘ನೋಟಾ’

Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಅವಕಾಶ ಹಾಗೂ ಸೌಲಭ್ಯ ವಂಚಿತ 50 ಲಕ್ಷ ಲೈಂಗಿಕ ಕಾರ್ಯಕರ್ತೆಯರು ಈ ಬಾರಿಯ ಲೋಕ­ಸಭಾ ಚುನಾವಣೆಯಲ್ಲಿ ಮತ­ದಾನದ ವೇಳೆ ತಮ್ಮ ಪ್ರತಿಭಟನೆಯ ಅಸ್ತ್ರವಾಗಿ ‘ನೋಟಾ’ (ಯಾವ ಅಭ್ಯ­ರ್ಥಿಗೂ ಮತವಿಲ್ಲ) ವನ್ನು ಬಳಸಲು ಗಂಭೀರ ಚಿಂತನೆ ನಡೆಸಿದ್ದಾರೆ.

‘ಸ್ವಾತಂತ್ರ್ಯ ಸಿಕ್ಕಿದಾಗಿನಿಂದಲೂ ಎಲ್ಲಾ ರಾಜಕೀಯ ಪಕ್ಷಗಳು ಲೈಂಗಿಕ ಕಾರ್ಯ­ಕರ್ತೆ­ಯರನ್ನು  ಕಡೆಗಣಿಸಿವೆ. ಅಭಿ­ವೃದ್ಧಿ­ಯ  ಆಶ್ವಾಸನೆ  ನೀಡುತ್ತಿ­ದ್ದಾರೆ ಹೊರತು ಯಾವುದನ್ನೂ ಈಡೇರಿಸಿಲ್ಲ. ಅವುಗಳು ಕೇವಲ ಭರವ­ಸೆ­­ಗಳಾಗಿಯೇ ಉಳಿ­ಯು­ತ್ತಿವೆ. ಇದ­ರಿಂದ ಆಕ್ರೋಶಗೊಂಡಿರುವ ನಾವು ‘ನೋಟಾ’ ಬಳಕೆಗೆ ಮುಂದಾಗಿದ್ದೇವೆ’ ಎಂದು ಅಖಿಲ ಭಾರತೀಯ ಲೈಂಗಿಕ ಕಾರ್ಯ­ಕರ್ತೆಯರ ಸಂಘದ (ಎಐಎನ್‌­ಎಸ್‌­ಡಬ್ಲ್ಯೂ) ಅಧ್ಯಕ್ಷೆ ಭಾರತಿ ಡೇ ತಿಳಿಸಿದ್ದಾರೆ.

16 ರಾಜ್ಯಗಳಲ್ಲಿರುವ ಲೈಂಗಿಕ ಕಾರ್ಯಕರ್ತೆಯರ ಪರವಾಗಿ ಅಖಿಲ ಭಾರತೀಯ ಲೈಂಗಿಕ ಕಾರ್ಯ­ಕರ್ತೆಯರ ಸಂಘದ (ಎಐಎನ್‌­ಎಸ್‌­ಡಬ್ಲ್ಯೂ) ಕೆಲಸ ಮಾಡುತ್ತಿದೆ. ಇತರ ಸಣ್ಣ ಸಂಸ್ಥೆಗಳಿಗೂ ಇದು ಪೋಷಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

‘ಶೇ 80ರಷ್ಟು ಕಾರ್ಯ­ಕರ್ತೆ­ಯರು ಹಾಗೂ ಅವರ ಕುಟುಂಬ ಸದಸ್ಯರು ಮತದಾನದ ಗುರುತಿನ ಚೀಟಿಯನ್ನು ಹೊಂದಿದ್ದಾರೆ. ಈ ಮೂಲಕ ನಾವು ಎಷ್ಟು ಮತ ಹೊಂದಿದ್ದೇವೆ ಎಂದು ಊಹಿ­ಸಬಹುದು. ನಾವು ಅಲ್ಪಸ­ಂಖ್ಯಾ­ತ­ರಾದರೂ, ನಮ್ಮ ಮತ­ಗಳು ಅಗಾಧ ಬದಲಾವಣೆ ತರಬಲ್ಲದು’ ಎಂಬ ವಿಶ್ವಾಸ ಅವರದು.

ಲೈಂಗಿಕ ಕಾರ್ಯಕರ್ತೆಯರಿಗೆ ಅಗತ್ಯ­ವಾದ ಸೌಲಭ್ಯ ಹಾಗೂ ಯೋಜನೆಗಳ ಬಗ್ಗೆ ರಾಜಕೀಯ ಪಕ್ಷಗಳಿಗೆ ಪತ್ರ ಬರೆದು ತಮ್ಮ ಚುನಾವಣಾ ಪ್ರಣಾಳಿ­ಕೆಯಲ್ಲಿ ಸೇರಿಸಿ ಕೊಳ್ಳುವಂತೆ ಮನವಿ ಮಾಡಲಾ­ಗಿತ್ತು. ಆದರೆ ಇದರಿಂದ ಏನೂ ಪ್ರಯೋಜನ­ವಾಗಿಲ್ಲ ಎಂದು ಎಐಎನ್‌­ಎಸ್‌­ಡಬ್ಲ್ಯೂ ಸಂಘಟನಾ ಅಧಿಕಾರಿ ಅಮಿತ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಪತ್ರದಲ್ಲಿ ಲೈಂಗಿಕ ಕಾರ್ಯ ಕರ್ತರಿಗೆ ಪಿಂಚಣಿ,  ಅಕ್ರಮ ಸಾಗಣೆ ನಿರ್ಬಂಧ ಕಾಯ್ದೆಯ ರದ್ದು ಹಾಗೂ ಕಾರ್ಯ­ಕರ್ತೆಯರ ಕೆಲಸವನ್ನು ಕಾನೂ­ನಾ­ತ್ಮಕ­ಗೊಳಿಸಿ, ಅವರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಬೇಡಿಕೆ ಸಲ್ಲಿಸಿದ್ದರು.

‘ಸಮಾಜದ ಅಭಿವೃದ್ಧಿಯಲ್ಲಿ ಲೈಂಗಿಕ ಕಾರ್ಯಕರ್ತೆಯರ ಪಾಲು ಇದೆ. ಅವ­ರಿಂದಾಗಿ ಸಮಾಜದಲ್ಲಿ ಅತ್ಯಾ­ಚಾರ­ಗಳ ಸಂಖ್ಯೆ ಕಡಿಮೆ­ಯಾ­ಗಿದೆ. ಒಂದು ವೇಳೆ ಅವರಿಲ್ಲ­ದಿದ್ದರೆ ಅತ್ಯಾಚಾರಗಳ ಸಂಖ್ಯೆ ದ್ವಿಗುಣ­ವಾಗುತ್ತಿತ್ತು’ ಎಂದು ಸಮಾಜ­ದಲ್ಲಿ ಲೈಂಗಿಕ ಕಾರ್ಯ­ಕರ್ತೆ­ಯರ ಪ್ರಾಮು­ಖ್ಯತೆ­ಯನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT