ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ: ಮೂವರ ಸೆರೆ

Last Updated 10 ಫೆಬ್ರುವರಿ 2016, 20:02 IST
ಅಕ್ಷರ ಗಾತ್ರ

ಬೆಂಗಳೂರು: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೋರಮಂಗಲ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. 

‘ಭಾನುವಾರ ರಾತ್ರಿ ಕೋರಮಂಗಲ ಸಮೀಪದ ಬಿಡಿಎ ಕಾಂಪ್ಲೆಕ್ಸ್ ಬಳಿ ಯುವಕರು ತನಗೆ  ಲೈಂಗಿಕ ಕಿರುಕುಳ ನೀಡಿದರೆಂದು ಆರೋಪಿಸಿ 20 ವರ್ಷದ ಯುವತಿ ದೂರು ಕೊಟ್ಟಿದ್ದರು. ಆ ದೂರಿನ ಅನ್ವಯ ಕ್ರಮ ತೆಗೆದುಕೊಳ್ಳಲಾಗಿದೆ. ಬಂಧಿತರಿಗೂ ಯುವತಿಗೂ ನಾಲ್ಕೈದು ತಿಂಗಳಿನಿಂದ ಪರಿಚಯವಿತ್ತು’ ಎಂದು ಪೊಲೀಸರು ಹೇಳಿದ್ದಾರೆ.

ಆ ದಿನ ರಾತ್ರಿ ಕಾರಿನಲ್ಲಿ ಬಿಡಿಎ ಕಾಂಪ್ಲೆಕ್ಸ್ ಬಳಿ ಬಂದ ಆರೋಪಿಗಳು, ‘ಸ್ನೇಹಿತನೊಬ್ಬ ನಿನ್ನ ಜತೆ ಮಾತನಾಡಬೇಕಂತೆ’ ಎಂದು ಯುವತಿಯನ್ನು ಕರೆದಿದ್ದರು. ಪರಿಚಯ ಇದ್ದ ಕಾರಣ ಅವರು ವಾಹನ ಹತ್ತಿದ್ದರು. ಆಗ ಆರೋಪಿಗಳು ಮೈ–ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅಲ್ಲದೆ ಈ ವಿಷಯ ಬಹಿರಂಗಪಡಿಸಿದರೆ ಮಾಧ್ಯಮಗಳಿಗೆ ತಿಳಿಸಿ ಮಾನ ಕಳೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು
ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT