ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈವ್‌ ಕಿಚನ್‌ ಊಟದ ಗಮ್ಮತ್ತು

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನಗರದಲ್ಲಿ ರಿಯಲ್‌ ಎಸ್ಟೇಟ್‌ ಹೊರತುಪಡಿಸಿದರೆ ವೇಗವಾಗಿ ಬೆಳೆಯುತ್ತಿರುವ ಇನ್ನೊಂದು ಉದ್ದಿಮೆಯೆಂದರೆ ಹೋಟೆಲ್‌ ಕ್ಷೇತ್ರ. ಈ ಉದ್ಯಮ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ, ಪ್ರತಿ ಎರಡ್ಮೂರು ತಿಂಗಳಲ್ಲಿ ಒಂದೆರಡು ಐಷಾರಾಮಿ ತಾರಾ ಹೋಟೆಲ್‌ಗಳು ತಲೆ ಎತ್ತುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಐಬಿಐಎಸ್‌ ಬೆಂಗಳೂರು ಸಿಟಿ ಸೆಂಟರ್‌ನ ‘ಸ್ಪೈಸ್‌ ಇಟ್‌’ ರೆಸ್ಟೋರೆಂಟ್‌.
ಅಕರ್‌ ಸಮೂಹಕ್ಕೆ ಸೇರಿದ ಈ ರೆಸ್ಟೋರೆಂಟ್‌ ಫ್ರಾನ್ಸ್‌ ಮೂಲದ್ದು. ಬೆಂಗಳೂರಿನಲ್ಲಿ ಆರಂಭಗೊಂಡಿರುವುದು ಇದರ
ಎರಡನೆಯ ಶಾಖೆ.

ಇದು ಮಲ್ಟಿಕ್ವಿಸಿನ್‌ ರೆಸ್ಟೋರೆಂಟ್‌ ಆಗಿದೆ. ‘ಲೈವ್‌ ಕಿಚನ್‌’ ಇದರ ವಿಶೇಷತೆ. ಗ್ರಾಹಕರು ರೆಸ್ಟೋರೆಂಟ್‌ನ ಯಾವುದೇ ಭಾಗದಲ್ಲಿ ಕೂತರೂ ಅಡುಗೆ ಸಿದ್ಧಪಡಿಸುವುದನ್ನು ಕಣ್ಣಾರೆ ನೋಡಬಹುದು ಆ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರಣಕ್ಕಾಗಿಯೇ ಇದಕ್ಕೆ ‘ಲೈವ್‌ ಕಿಚನ್‌’ (ಅಡುಗೆ ನೋಡಬಹುದಾದ ಸ್ಥಳ) ಎಂದು ಹೆಸರಿಸಲಾಗಿದೆ. ಇಲ್ಲಿ ೮೦ ಜನ ಒಟ್ಟಿಗೆ ಊಟ ಮಾಡಬಹುದು. ಒಳವಿನ್ಯಾಸವೂ ಆಕರ್ಷಕವಾಗಿದೆ. ‘ನಿಮಗೆ ಇಷ್ಟವಾಗುವ ಆಹಾರ ತಿಳಿಸಿ, ನಾವು ನಿಮಗೆ ಮಾಡಿಕೊಡುತ್ತೇವೆ’ (ಯೂ ಕ್ರಿಯೇಟ್‌, ವಿ ಕುಕ್‌) ಇದರ ಘೋಷವಾಕ್ಯ. ಜಗತ್ತಿನ ಯಾವುದೇ ಮೂಲೆಯಲ್ಲಿ ಸಿಗುವ ಖಾದ್ಯದ ಬಗ್ಗೆ ಬೇಡಿಕೆ ಸಲ್ಲಿಸಿದರೆ ಇಲ್ಲಿನ ಬಾಣಸಿಗರು ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸುವ ಚಾಕಚಾಕ್ಯತೆ ಹೊಂದಿದ್ದಾರೆ. ಬೀಫ್‌ ಸಲುವಾಗಿಯೇ ಪ್ರತ್ಯೇಕ ಶೆಫ್‌, ಅಡುಗೆ ಮನೆ ಇದೆ. ಲಿಕ್ಕರ್‌ಗೆ ಪರವಾನಗಿ ಸಿಗಬೇಕಿದೆ.

ಗ್ರೇಟ್‌ ಇಂಡಿಯನ್‌ ಬ್ರೇಕ್‌ಫಾಸ್ಟ್‌, ಲಂಚ್‌/ಡಿನ್ನರ್‌ ಬಫೆ ಹಾಗೂ ಪ್ರತ್ಯೇಕವಾಗಿಯೂ ಬೇಡಿಕೆ ಸಲ್ಲಿಸಬಹುದು. ಬೆಳಿಗ್ಗೆ ನಾಲ್ಕು ಗಂಟೆಯಿಂದಲೇ ನಾಷ್ಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮಧ್ಯಾಹ್ನದ ಊಟದಲ್ಲಿ ತಲಾ ಎರಡು ವೆಜ್‌ ಹಾಗೂ ನಾನ್‌ವೆಜ್‌ ಸ್ಟಾರ್ಟರ್‌್ಸ, ಮೇನ್‌ ಕೋರ್ಸ್‌ನಲ್ಲಿ ತಲಾ ನಾಲ್ಕು ವೆಜ್‌ ಹಾಗೂ ನಾನ್‌ವೆಜ್‌, ರಾತ್ರಿ ಭೋಜನದಲ್ಲಿ ತಲಾ ಮೂರು ವೆಜ್‌/ನಾನ್‌ವೆಜ್‌ ಸ್ಟಾರ್ಟರ್‌್ಸ ಹಾಗೂ ಏಳು ಸಸ್ಯಹಾರ, ನಾಲ್ಕು ರೀತಿಯ ಮಾಂಸದ ಆಹಾರಕ್ಕೆ ವ್ಯವಸ್ಥೆ ಇದ್ದು, ಜೊತೆಗೆ ಲೈವ್‌ ಕೌಂಟರ್‌ ಕೂಡ ಇರುತ್ತದೆ.

ಕೋಲ್ಕತ್ತ ಮೂಲದ ಕಾರ್ಯನಿರ್ವಾಹಕ ಬಾಣಸಿಗ ದೀಪಕ್‌ ಅಧಿಕಾರಿ ಸೇರಿದಂತೆ ೧೩ ಜನ ನುರಿತ ಸಿಬ್ಬಂದಿ ಇದ್ದಾರೆ. ದೇಶದ ವಿವಿಧ ಭಾಗಗಳ ತಾರಾ ಹೋಟೆಲ್‌ಗಳಲ್ಲಿ ಕೆಲಸ ನಿರ್ವಹಿಸಿರುವ ದೀಪಕ್‌ ಅವರಿಗೆ ಈ ಕ್ಷೇತ್ರದಲ್ಲಿ ೧೧ ವರ್ಷಗಳ ಅನುಭವ ಇದೆ.
‘ಮಹಾರಾಷ್ಟ್ರ, ಗೋವಾದ ಆಹಾರ ಶೈಲಿಯಿಂದ ಪ್ರಭಾವಿತನಾಗಿದ್ದೇನೆ. ಸಮುದ್ರ ಆಹಾರ ನನ್ನ ಸಿಗ್ನೇಚರ್‌ ಡಿಶ್‌.  ಅದರಲ್ಲೂ ಫಿಶ್‌ ಕರಿ ಅಂದರೆ ನನಗಿಷ್ಟ.  ಇನ್ನುಳಿದಂತೆ ಭಾರತದ ವಿವಿಧ ಪ್ರಾಂತಗಳ ಖಾದ್ಯವನ್ನು ಮಾಡಬಲ್ಲೆ’ ಎನ್ನುತ್ತಾರೆ ದೀಪಕ್‌.

‘ತಾಜಾ ಆಹಾರವನ್ನು ಗ್ರಾಹಕರ ಸಮ್ಮುಖದಲ್ಲೇ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ಲೈವ್‌ ಕಿಚನ್‌ ಮಾಡಿದ್ದೇವೆ. ಇಲ್ಲಿ ಯಾವುದನ್ನೇ ಆಗಲಿ ಮುಚ್ಚಿಡಲು ಸಾಧ್ಯವಿಲ್ಲ. ಗ್ರಾಹಕರು ಆಗಿಂದಾಗ್ಗೆ ತಮ್ಮಿಷ್ಟದ ಖಾದ್ಯಗಳಿಗೆ ಬೇಡಿಕೆ ಸಲ್ಲಿಸಿದರೆ ಅವರ ಎದುರಲ್ಲೇ ಮಾಡಿಕೊಡುತ್ತೇವೆ. ಉದಾಹರಣೆಗೆ, ಮೀನಿನಲ್ಲಿ ಶುಂಠಿ ಮತ್ತು ಹುಳಿ ಕಡಿಮೆ ಬೇಕು ಎಂದು ತಿಳಿಸಿದರೆ, ನಿಮ್ಮ ಟೇಸ್ಟ್‌ಗೆ ಅನುಗುಣವಾಗಿಯೇ  ಮಾಡಿ ಬಡಿಸುತ್ತೇವೆ’ ಎಂದರು.

‘೯೦ಕ್ಕೂ ಹೆಚ್ಚು ದೇಶಗಳಲ್ಲಿ ನಮ್ಮ ಅಕರ್‌ ಸಮೂಹಕ್ಕೆ ಸೇರಿರುವ ರೆಸ್ಟೋರೆಂಟ್‌ಗಳಿವೆ. ಎಲ್ಲದರಲ್ಲೂ ಅಥೆಂಟಿಕ್‌ ಕ್ವಿಸಿನ್‌ ದೊರೆಯುತ್ತದೆ. ಎಂದೂ ನಾವು ಗುಣಮಟ್ಟದ ವಿಷಯದಲ್ಲಿ ರಾಜಿಯಾಗಿಲ್ಲ. ಅದೇ ನಮ್ಮ ವಿಶೇಷತೆ. ಇತರೆ ಹೋಟೆಲ್‌ಗಳಿಗೆ ಹೋಲಿಸಿದರೆ ನಮ್ಮ ಬಫೆಯ ದರ ಕೂಡ ಕಡಿಮೆ’ ಎಂದು  ಹೇಳಿ ದೀಪಕ್‌ ಕಿಚನ್‌ ಕಡೆಗೆ ಮುಖ ಮಾಡಿದರು.


ರೆಸ್ಟೋರೆಂಟ್‌–‘ಸ್ಪೈಸ್‌ ಇಟ್‌’

*ಸ್ಥಳ–ಐಬಿಐಎಸ್‌ ಬೆಂಗಳೂರು ಸಿಟಿ ಸೆಂಟರ್‌, ಪ್ಲಾಟ್‌ ನಂ. ೩೦, ರಾಜಾರಾಮ್‌ ಮೋಹನ್‌ ರಾಯ್‌ ರಸ್ತೆ.
*ಬ್ರೇಕ್‌ಫಾಸ್ಟ್‌–ಗ್ರೇಟ್‌ ಇಂಡಿಯನ್‌
*ಖಾದ್ಯ–ಮಲ್ಟಿಕ್ವಿಸಿನ್‌ (ಬಫೆ/ಲಾ ಕಾರ್ಟ್‌)
*ಲಂಚ್‌ ಬಫೆ–ರೂ ೪೨೫ (ತೆರಿಗೆ ಹೊರತುಪಡಿಸಿ)
*ಡಿನ್ನರ್‌ ಬಫೆ–ರೂ ೫೨೫ (ತೆರಿಗೆ ಹೊರತುಪಡಿಸಿ)
*ಕಾರ್ಯನಿರ್ವಾಹಕ ಬಾಣಸಿಗ–ದೀಪಕ್‌ ಅಧಿಕಾರಿ
*ದೂರವಾಣಿ ಸಂಖ್ಯೆ:
೦೮೦–೪೨೫೪೮೦೦೦,
೭೦೨೨೦ ೩೨೫೯೩.
ಇ–ಮೇಲ್‌ ವಿಳಾಸ: ibishotel.com, accorhotels.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT