ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲರಾಗಲು ಸದಾಶಿವಂ ಸಿದ್ಧ

Last Updated 25 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿವಾದಕ್ಕೆ ಆಸ್ಪದವಿಲ್ಲದೇ ಒಮ್ಮತದ ನಿರ್ಧಾರ ತೆಗೆದುಕೊಂಡರೆ ಲೋಕಪಾಲರಾಗಿ ಕರ್ತವ್ಯ ನಿರ್ವ­ಹಿ­­­ಸಲು ಸಿದ್ಧ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ­ನ್ಯಾಯ­­ಮೂರ್ತಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಪಿ.ಸದಾಶಿವಂ  ಹೇಳಿದ್ದಾರೆ.

ಒಂಬತ್ತು ತಿಂಗಳ ಅಧಿಕಾರಾವಧಿ  ಪೂರ್ಣಗೊಳಿಸಿದ ಬಳಿಕ ಅವರು ಶನಿವಾರ (ಏಪ್ರಿಲ್‌್ 26) ಸೇವೆಯಿಂದ ನಿವೃತ್ತ­ರಾಗ­­ಲಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಅಥವಾ ಲೋಕ­ಪಾಲ­­ರಾಗಿ ಸೇವೆ ಸಲ್ಲಿಸುವುದಕ್ಕೆ ತಮ್ಮ ವಿರೋಧ­ವಿಲ್ಲ ಎಂದು ಅವರು ಸ್ಪಷ್ಟ­ಪಡಿಸಿ­ದ್ದಾರೆ. ನ್ಯಾಯಮೂರ್ತಿ ನೇಮಕ­ದಲ್ಲಿ ಈಗಿ­ರುವ ಪದ್ಧತಿಯೇ ಸರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ನ್ಯಾಯಾಂಗದ ಬಗ್ಗೆ ಸರಿಯಾಗಿ ತಿಳಿವಳಿಕೆ ಇಲ್ಲದ ಹೊರಗಿನವರು ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳು­ವುದು ಸೂಕ್ತವಲ್ಲ. ಮುಖ್ಯ­ನ್ಯಾಯಮೂರ್ತಿ ಅಧಿ­ಕಾರಾವಧಿ ಕನಿಷ್ಠ ಎರಡು ವರ್ಷ­ಗಳ ವರೆಗೆ ಇರಬೇಕು. ಈ  ಅವಧಿ­ಯಲ್ಲಿ ಅವರು ಹೆಚ್ಚಿನ ಕೆಲಸ ಮಾಡ­ಬಹುದು’ ಎಂದು ಹೇಳಿದ್ದಾರೆ.

‘ನ್ಯಾಯಾಂಗದ ಉನ್ನತ ಸ್ಥಾನದಲ್ಲಿ  ಮಹಿಳೆಯರು ಹಾಗೂ ಸಮಾಜದ ದುರ್ಬಲ ವರ್ಗದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಬೇಕು. ನಾನು ಈ ಸಂಬಂಧ ಹೈಕೋರ್ಟ್‌್ ಮುಖ್ಯ­ನ್ಯಾಯ­ಮೂರ್ತಿಗಳಿಗೆ ಪತ್ರ ಬರೆದಿದ್ದೇನೆ.

ವಯೋ­ಮಿತಿ ಹಾಗೂ ಮತ್ತಿತರ ಮಾನದಂಡಗಳಲ್ಲಿ ಅವರಿಗೆ ತುಸು ವಿನಾಯಿತಿ ನೀಡು­ವಂ­­ತೆಯೂ  ಸೂಚಿಸಿದ್ದೇನೆ’ ಎಂದು ಸದಾಶಿವಂ ಹೇಳಿದ್ದಾರೆ. ಹೈಕೋರ್ಟ್‌, ಸುಪ್ರೀಂ­­ಕೋರ್ಟ್‌ ನ್ಯಾಯಮೂರ್ತಿಯಾಗಿ 18 ವರ್ಷ ಸೇವೆ ಸಲ್ಲಿಸಿ­ದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಆರು ವರ್ಷ ಎಂಟು ತಿಂಗಳು ಕರ್ತವ್ಯ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT