ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ ನೇಮಕಾತಿ ತರಾತುರಿಗೆ ಬಿಜೆಪಿ ಆಕ್ಷೇಪ

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಯುಪಿಎ ಸರ್ಕಾರವು ತನ್ನ ಅಧಿಕಾರದ ಕೊನೆಯ ದಿನಗಳಲ್ಲಿ ಲೋಕಪಾಲರನ್ನು ನೇಮಕ ಮಾಡಲು ತರಾತುರಿಯಲ್ಲಿ ನಡೆಸು­ತ್ತಿ­ರುವ ಯತ್ನಗಳನ್ನು ತಕ್ಷಣವೇ ನಿಲ್ಲಿಸ­­ಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಒಂದೊಮ್ಮೆ ಸರ್ಕಾರವು ಆತು­ರಾ­ತುರದಲ್ಲಿ ಲೋಕಪಾಲರ ನೇಮಕಾತಿ ಮಾಡಿದರೆ ಅದು ನೀತಿ ಸಂಹಿತೆಯ ಉಲ್ಲಂಘನೆಯಷ್ಟೇ ಆಗದೆ ಅತ್ಯಂತ ಅನುಚಿತ ರಾಜಕೀಯ ನಿರ್ಧಾರವೂ ಆಗುತ್ತದೆ ಎಂದರು. ಲೋಕಪಾಲರ ನೇಮಕಾತಿಗೆ ನಡೆ­ಸು­ತ್ತಿರುವ ವಿಧಿ­ವಿಧಾನದ ಕಾನೂನು­ಬದ್ಧತೆಯ ಬಗ್ಗೆ ಸಂಶಯ­ಗಳಿವೆ. ಜತೆಗೆ, ಇಂತಹ ಆತುರದ ನೇಮ­ಕಾತಿಯು ಲೋಕ­ಪಾಲ ವ್ಯವಸ್ಥೆ ಬಗೆ­ಗಿನ ವಿಶ್ವಾಸಾರ್ಹತೆ­ಯನ್ನು ಅದು ಅನು­ಷ್ಠಾನಕ್ಕೆ ಬರುವ ಮುನ್ನವೇ ನಾಶ­ಗೊಳಿ­­ಸುತ್ತದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಏ.27 ಅಥವಾ 28ರಂದು ಲೋಕಪಾಲ ಆಯ್ಕೆ ಸಮಿತಿಯ ಸಭೆ ನಡೆ­ಸಲು ಉದ್ದೇಶಿಸಿದ್ದಾರೆ ಎಂಬ ವರದಿ­ಗಳಿಂದಾಗಿ ಜೇಟ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಈಗ ಚುನಾವಣಾ ಪ್ರಕ್ರಿಯೆ ಅರ್ಧ­ದಷ್ಟು ಮುಗಿದಿದ್ದು ಫಲಿತಾಂಶ ಹೊರ­ಬೀಳಲು 26 ದಿವಸಗಳಷ್ಟೇ ಬಾಕಿ ಇದೆ. ಅಧಿಕಾರ­ದಿಂದ ಕೆಳಕ್ಕಿಳಿ­ಯು­ವುದು ನಿಶ್ಚಿತ­ವಾಗಿರುವ ಈ ಹಂತದಲ್ಲಿ ತರಾ­ತುರಿ­­ಯಲ್ಲಿ ಲೋಕಪಾಲರ ನೇಮಕ ಸರಿಯಲ್ಲ ಎಂದಿದ್ದಾರೆ.

‘ಈಗಾಗಲೇ ವಿಶ್ವಾಸಾರ್ಹತೆ ಕಳೆದು­ಕೊಂಡಿರುವ ಪ್ರಧಾನಿಯವರಿಗೆ   ಕಳೆದು­­ಕೊಳ್ಳಲು ಬೇರೇನೂ ಉಳಿ­ದಿಲ್ಲ’ ಎಂದು ಜೇಟ್ಲಿ ವ್ಯಂಗ್ಯ­ವಾಡಿದ್ದಾರೆ.

ತಾವು ಏನನ್ನು ಮಾಡಲು ಹೊರಟಿ­ದ್ದೇನೆಂಬ ಬಗ್ಗೆ ಪ್ರಧಾನಿ­ಯವರು ಗಂಭೀರ ಆತ್ಮಾವಲೋಕನ ಮಾಡಿ­ಕೊಳ್ಳ­­­ಬೇಕು. ಲೋಕ­ಪಾಲ­ರನ್ನು ನೇಮಿಸಿದರೆ ಅವರು ಅಪಖ್ಯಾತಿಗೆ ಗುರಿ­ಯಾಗ­ಬೇಕಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT