ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ: ಹೊಸ ನಿಯಮ ಪ್ರಕಟ

Last Updated 3 ಸೆಪ್ಟೆಂಬರ್ 2014, 12:21 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಪಾಲ ಸಂಸ್ಥೆಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಲು ಹೆಸರುಗಳನ್ನು ಶಿಫಾರಸು ಮಾಡುವ ‘ಲೋಕಪಾಲ ಶೋಧನಾ ಸಮಿತಿ’ಯ ಹೊಸ ನಿಯಮಾವಳಿಗಳನ್ನು ಸರ್ಕಾರವು ಬುಧವಾರ ಪ್ರಕಟಿಸಿದೆ.

ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ಒದಗಿಸಿದ ಪಟ್ಟಿಯಲ್ಲಿ ಇರದ ಹೆಸರುಗಳನ್ನೂ  ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಮುಖ್ಯಸ್ಥ ಹಾಗೂ ಸದಸ್ಯರ ಸ್ಥಾನಗಳಿಗೆ ಶಿಫಾರಸು ಮಾಡುವ ಅಧಿಕಾರವನ್ನು ಹೊಸ ನಿಯಮಾವಳಿಯಲ್ಲಿ ಶೋಧನಾ ಸಮಿತಿಗೆ ನೀಡಲಾಗಿದೆ.

ಈ ಹಿಂದಿನ ಯುಪಿಎ ಸರ್ಕಾರ ರೂಪಿಸಿದ್ದ ನಿಯಮಾವಳಿಗಳ ಪ್ರಕಾರ,  ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ಒದಗಿಸುವ ಪಟ್ಟಿಯಲ್ಲಿನ ಹೆಸರುಗಳನ್ನೇ,  ಲೋಕಪಾಲ ಮುಖ್ಯಸ್ಥ ಹಾಗೂ ಸದಸ್ಯರನ್ನು ನೇಮಿಸುವ ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಗೆ ಶಿಫಾರಸು ಮಾಡುವುದು ಶೋಧನಾ ಸಮಿತಿಯ ಕಾರ್ಯವಾಗಿತ್ತು.

ಆದರೆ ಹೊಸ ನಿಯಮಾವಳಿಗೆ ಪ್ರಕಾರ,   ಶೋಧ ಸಮಿತಿಗೆ ಹೆಚ್ಚಿನ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ನೀಡುವ ಪಟ್ಟಿಯಲ್ಲಿನ ಹೆಸರುಗಳನ್ನೇ ಲೋಕಪಾಲ ಸಂಸ್ಥೆಗೆ ಶಿಫಾರಸು ಮಾಡಲು ಶೋಧನಾ ಸಮಿತಿಗೆ ಇದ್ದ ನಿರ್ಬಂಧವನ್ನು ಸರ್ಕಾರ ಸಡಿಲಿಸಿದ್ದು, ಆಯ್ಕೆ ಹೆಚ್ಚಿನ ಅವಕಾಶ ಕಲ್ಪಿಸಿದೆ.

ಇದೇ ವೇಳೆ ಶೋಧನಾ ಸಮಿತಿಯ ಗಾತ್ರವನ್ನು ಸರ್ಕಾರವು ಎಂಟರಿಂದ ಏಳು ಸದಸ್ಯರಿಗೆ ತಗ್ಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT