ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕ್ರೀಕೃತ ದೃಷ್ಟಿ ಸಮಸ್ಯೆ

Last Updated 1 ಜುಲೈ 2016, 19:30 IST
ಅಕ್ಷರ ಗಾತ್ರ

ವಕ್ರೀಕೃತ ದೃಷ್ಟಿ ಸಮಸ್ಯೆಯು (Refractive errors) ಕಾರ್ನಿಯಾ ಅಥವಾ ಕಣ್ಣುಗುಡ್ಡೆಯು ರೆಟಿನಾದ ಮೇಲೆ ನೇರವಾಗಿ ಬೆಳಕು ಬೀಳುವುದನ್ನು ತಡೆದಾಗ ಕಂಡುಬರುತ್ತದೆ. ರೆಟಿನಾ ಎಂಬುದು ಹಗುರವಾದ, ಸೂಕ್ಷ್ಮವಾದ ಪದರಾಗಿದ್ದು, ಕಣ್ಣಿನ ಹಿಂಭಾಗದಲ್ಲಿ ಇರುತ್ತದೆ. ವಯಸ್ಸು ಕಳೆದಂತೆಯೂ ಇಂಥ ದೋಷ ಕಾಣಿಸಿಕೊಳ್ಳಬಹುದು.

ವಕ್ರೀಕೃತ ದೃಷ್ಟಿಯ ಸಾಮಾನ್ಯ ದೋಷಗಳಲ್ಲಿ ಮೈಯೊಪಿಯಾ, ಹೈಪೆರೋಪಿಯಾ, ಪ್ರೆಸ್‌ಬಯೊಪಿಯಾ ಮತ್ತು ಆಸ್ಟಿಜ್‌ಮೆಟಿಸಿಮ್ ಇದೆ. ಮೈಯೊಪಿಯಾ (ಸಮೀಪದೃಷ್ಟಿ ಸಮಸ್ಯೆ) ಎಂದರೆ ಸಮೀಪದಲ್ಲಿ ಇರುವ ವಸ್ತುಗಳು ಸ್ಪಷ್ಟವಾಗಿ ಕಾಣಿಸುತ್ತವೆ; ದೂರ ಇರುವ ಅಂಶಗಳು ಮಬ್ಬಾಗಿ ಕಾಣಿಸುತ್ತದೆ. ಮೈಯೊಪಿಯಾಯಿಂದ ಬೆಳಕು ರೆಟಿನಾದ ಮೇಲೆ ಬೀಳುವ ಬದಲು, ರೆಟಿನಾದ ಎದುರು ಬೀಳಲಿದೆ.

ಹೈಪರೋಪಿಯಾ (ದೂರದೃಷ್ಟಿ ದೋಷ) ಇದು, ಸಾಮಾನ್ಯವಾಗಿ ಕಂಡುಬರುವ ದೋಷ. ದೂರ ಇರುವ ವಸ್ತುಗಳು ಸಮೀಪ ಇರುವ ವಸ್ತುಗಳಿಗಿಂತ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತವೆ. ಹೈಪರ್‌ಮೆಟ್ರೊಪಿಯಾದಲ್ಲಿ ಬೆಳಕು ರೆಟಿನಾದ ಹಿಂದೆ ಬೀಳುತ್ತದೆ. ರೆಟಿನಾ ಮೇಲೆ ಬೀಳುವುದಿಲ್ಲ.

ಆಸ್ಟಿಮೇಟಿಸಂ ಎಂಬುದು ಕಣ್ಣಿನಲ್ಲಿ ಬೆಳಕು ನೇರವಾಗಿ ರೆಟಿನಾ ಮೇಲೆ ಬೀಳದ ಸಮಸ್ಯೆಯಾಗಿದೆ. ಇದು, ಸಾಮಾನ್ಯವಾಗಿ ವಸ್ತುಗಳು ಮಬ್ಬಾಗಿ ಅಥವಾ ಚದುರಿದಂತೆ ಕಾಣಲು ಕಾರಣವಾಗುತ್ತದೆ.

ಪ್ರೆಸ್‌ಬಿಯೊಪಿಯಾ ಎಂಬುದು ವಯಸ್ಸಿಗೆ ಸಂಬಂಧಿಸಿದ ಸಮಸ್ಯೆ. ಈ ಸಮಸ್ಯೆಯಿದ್ದಾಗ ದೃಷ್ಟಿಯನ್ನು ಕೇಂದ್ರೀಕರಿಸಲು ಸಮಸ್ಯೆಯಾಗಲಿದೆ. ಕಣ್ಣಿಗೆ ವಯಸ್ಸು ಆದಂತೆ, ದರ್ಶಕಗಳು ಪರಿಕರದ ಆಕಾರವನ್ನು ಗುರುತಿಸಲು ಅಶಕ್ತವಾಗುತ್ತವೆ.  ಇದರಿಂದ ಸ್ಪಷ್ಟವಾಗಿ ಗೋಚರಿಸಿರುವುದಿಲ್ಲ.

ಸೂಚನೆಗಳು: ದೂರದಲ್ಲಿ ಇರುವ ಅಥವಾ ಸಮೀಪದಲ್ಲಿ ಇರುವ ವಸ್ತುಗಳು ಮಬ್ಬಾಗಿ ಕಾಣಿಸುವುದು.
ತಲೆನೋವು: ಕಣ್ಣಿನ ಮೇಲೆ ಹೆಚ್ಚಿನ ಒತ್ತಡ ಆದಂತೆ ತಲೆನೋವು ಕಾಣಿಸಬಹುದು. ಮಕ್ಕಳಲ್ಲಿ ಮಾಲುಗಣ್ಣು ಸಮಸ್ಯೆಯು ಇದಕ್ಕೆ ಕಾರಣವಾಗಬಹುದು.
ಕಣ್ಣಿನಲ್ಲಿ ತೇವಾಂಶ ಒಣಗುವುದು; ಕಣ್ಣಿನಲ್ಲಿ ಇರಸುಮುರಸಿಗೆ ಕಾರಣವಾಗಲಿದೆ. ತುರಿಕೆ; ದೃಷ್ಟಿಯಲ್ಲಿ ಕಿರಿಕಿರಿ ಅನಿಸುವುದು; ಕೆಂಪುಬಣ್ಣಕ್ಕೆ ತಿರುಗುವುದು ಇತ್ಯಾದಿ.

ಓದುವಾಗ ಹುಬ್ಬುಗಂಟಿಕ್ಕುವುದು, ಅಧಿಕವಾಗಿ ಕಣ್ಣು ಮಿಟುಕಿಸುವುದು; ಉಜ್ಜುವುದು ಇತ್ಯಾದಿ ಅಂಶಗಳು ದೃಷ್ಟಿ ಸಮಸ್ಯೆಗೆ ಕಾರಣವಾಗಲಿದೆ.
ಚಿಕಿತ್ಸೆ: ವಿಷುವಲ್ ಆಕ್ಯುಟಿ ಟೆಸ್ಟ್, ರೆಫ್ರಾಕ್ಷನ್, ಸಮಗ್ರ ನೇತ್ರಪರೀಕ್ಷೆ. 

ಚಿಕಿತ್ಸೆರಹಿತ ದೃಷ್ಟಿಸಮಸ್ಯೆ ಪರಿಹಾರ ಕ್ರಮಗಳು:
ಕನ್ನಡಕ: ಇದು, ಕೈಗೆಟುಕುವ ದರದಲ್ಲಿ ಇರುತ್ತದೆ; ನಿರ್ವಹಣೆ ಸುಲಭ. ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ಸಮಗ್ರ ನೋಟಕ್ಕೆ ಅಡೆತಡೆಯಾಗಬಹುದು. ಕೆಲವೊಂದು ಋತುಗಳಲ್ಲಿ ಧರಿಸಲು ಕಷ್ಟ ಆಗಬಹುದು. ಹೆಚ್ಚು ಶಬ್ದ ಇರುವಾಗ ದೃಷ್ಟಿಸಮಸ್ಯೆ ಕಾಣಬಹುದು.

ಕಾಂಟ್ಯಾಕ್ಟ್ ಲೆನ್ಸ್‌ಗಳು
ಕಣ್ಣುಗಳು ಸಹಜವಾಗಿವೆ ಎಂಬ ಭಾವನೆ ಮೂಡಿಸುತ್ತದೆ. ಬದಲಾವಣೆಯಲ್ಲಿ ಸಮಸ್ಯೆ ಇರುವುದಿಲ್ಲ. ಹೆಚ್ಚಿನ ಸ್ಪಷ್ಟ ದೃಷ್ಟಿ ಸಾಧ್ಯತೆ. ನಿತ್ಯದ ಚಟುವಟಿಕೆಗಳನ್ನು ಮಾಡಲು ಸಹಕಾರಿ. ಸಮಗ್ರವಾಗಿ ನೋಡಬಹುದು.

ಇನ್ನೊಂದು ಕಡೆ, ಇದರ ನಿರ್ವಹಣೆ ತುಂಬ ದುಬಾರಿ. ಕಳೆದುಹೋಗಬಹುದು. ಕಣ್ಣು ಒಣಗುವ ಸಮಸ್ಯೆ ಇರುವವರಿಗೆ ಕಷ್ಟಕರವಾದುದು. ಇಂದು ಅನೇಕ ರೀತಿಯ ಕಾಂಟ್ಯಾಕ್ಟ್ ಲೆನ್ಸ್‌ಗಳು ಲಭ್ಯ ಇರುತ್ತವೆ. ವ್ಯಕ್ತಿಯ ಅಗತ್ಯಗಳನ್ನು ಆಧರಿಸಿ ಇದು ಲಭ್ಯವಿವೆ.

ಶಸ್ತ್ರಚಿಕಿತ್ಸೆಯ ಆಯ್ಕೆಗಳು
ವಕ್ರೀಕೃತ ದೃಷ್ಟಿಸಮಸ್ಯೆ ಇರುವವರಿಗೆ ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್ ಮೇಲೆ ಅವಲಂಬನೆ ಕಡಿಮೆ ಮಾಡಲು ಈ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಉತ್ತಮ. ಇಂದು ಲಭ್ಯವಿರುವ ಆಧುನಿಕ ಚಿಕಿತ್ಸೆಗಳು ಲಭ್ಯ.

ಸ್ಮಾಲ್ ಇನ್‌ಸಿಷನ್ ಲೆಂಟಿಕ್ಯುಲ್ ಎಕ್ಸ್‌ಟ್ರಾಕ್ಷನ್ (ಸ್ಮೈಲ್)ಎಂಬುದು ನೂತನವಾದ ಲೇಸರ್ ವಿಷನ್ ಸರಿಪಡಿಸುವ ಕ್ರಮವಾಗಿದೆ. ಇದು, ನಾಲ್ಕನೇ ಪೀಳಿಗೆಯ ಚಿಕಿತ್ಸಾ ಕ್ರಮವಾಗಿದೆ. ಮಿಯೊಪಿಕ್ ರಿಫ್ರಾಕ್ಟಿವ್ ಎರರ್ಸ್‌ಅನ್ನು -12ಡಿಎಸ್ ವರೆಗೂ ಸರಿಪಡಿಸುವುದು ಸಾಧ್ಯವಿದೆ.

ಸ್ಮೈಲ್ ಎಂಬುದು ಫೆಮ್ಟೋಸೆಕೆಂಡ್ ಲೇಸರ್ ಅನ್ನು ಅಂಟಿರಿಯರ್ ಮತ್ತು ಪಾಸ್ಟಿರಿಯರ್ ಕ್ಲೆವೆಂಜ್ ಪ್ಲೇನ್ ರೂಪಿಸಲು ಬಳಕೆ ಮಾಡಲಾಗುತ್ತದೆ. ಇದು, ಹೆಚ್ಚುವರಿ ಕ್ರೀಮ್ ಪದರ ರೂಪಿಸಲಿದೆ. ಇದರಲ್ಲಿ ಲೆಂಟಿಕ್ಯೂಲ್ ತೆಗೆಯಲು ಸಣ್ಣದಾದ ಪೆರಿಫೆರಲ್ ಇನ್‌ಸಿಷನ್ ಮಾಡಲಾಗುತ್ತದೆ.

ಸ್ಮೈಲ್ ಪ್ರಕ್ರಿಯೆಯಲ್ಲಿ ಕೀಹೋಲ್ ಸರ್ಜರಿ ಮಾಡಲಾಗುತ್ತದೆ. ಸ್ಮೈಲ್ ಚಿಕಿತ್ಸಾಕ್ರಮದಲ್ಲಿ ಫ್ಲಾಪ್ ಇಲ್ಲದೇ ರೂಪಿಸಲಾಗುತ್ತದೆ. ಈ ಲೆಂಟಿಕ್ಯೂಲ್ ಅನ್ನು ಸಣ್ಣದಾದ ಇನ್‌ಸಿಷನ್ ಮೂಲ ರೆಟಿನಾಗೆ ಯಾವುದೇ ರೀತಿಯ ಧಕ್ಕೆ ಆಗದಂತೆ ನಿರ್ವಹಿಸಲಾಗುತ್ತದೆ.

ಸ್ಮೈಲ್ ಚಿಕಿತ್ಸೆಯ ಅನುಕೂಲವೆಂದರೆ ಕಾರ್ನಿಯಾದ ಮೇಲ್ಪದರ ಮೇಲೆ ಹೆಚ್ಚಿನ ಧಕ್ಕೆ ಆಗುವುದಿಲ್ಲ ಎಂಬುದು. ಕೆಲವೊಂದು ರೋಗಿಗಳಿಗೆ, ಅಂದರೆ ಕಣ್ಣಿನ ತೇವಾಂಶ ಕಡಿಮೆ ಇರುವವರಿಗೆ ಸ್ಮೈಲ್ ಅತ್ಯುತ್ತಮ ಚಿಕಿತ್ಸಾ ಕ್ರಮವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT