ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಧೂ ಭಾಗ್ಯ...

Last Updated 31 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನಮ್ಮೂರಿನ ಯುವಕರು ಸ್ಫುರದ್ರೂಪಿಗಳು, ಸುಸಂಸ್ಕೃತರು, ಆರ್ಥಿಕವಾಗಿ ಸದೃಢರು. ಆದರೆ ಕನ್ಯಾಪಿತೃಗಳು ತಮ್ಮ ಮಗಳನ್ನು ನಮ್ಮ ಯುವಕರಿಗೆ ಕೊಡಲು ಒಪ್ಪುತ್ತಿಲ್ಲ.  ನಮ್ಮೂರಿಗೆ ರಸ್ತೆ ಸೌಕರ್ಯ ಇಲ್ಲ ಎಂಬ ಒಂದೇ ಕಾರಣಕ್ಕಾಗಿ ಈ ನಿರಾಕರಣೆ.

ಡಾಂಬರು ಇರದ ನಮ್ಮ ರಸ್ತೆಯಲ್ಲಿ ವಧು ಮನೆಯವರ ಕಾರುಗಳು ಬರುವುದಿಲ್ಲ. ಕಾರು ಖರೀದಿಸಿದರೂ  ಕೆಟ್ಟ ರಸ್ತೆಯ ಕಾರಣದಿಂದ ಶೆಡ್‌ನಲ್ಲೇ ಇಡಬೇಕಾಗುತ್ತದೆ. ಜೀಪ್‌ನಲ್ಲಿ ಓಡಾಡುವ ನಮ್ಮೂರಿನ ಯುವಕರನ್ನು ಕನ್ಯಾಪಿತೃಗಳು ಮತ್ತು ಕನ್ಯೆಯರು ಒಪ್ಪುವುದು ಬಿಡಿ, ಕೀಳಾಗಿ ನೋಡುತ್ತಾರೆ. ಈ ಕಾರಣದಿಂದಲೇ ಇಲ್ಲಿ ಎಷ್ಟೋ ಮದುವೆಗಳು ಮುರಿದು ಬಿದ್ದಿವೆ.

ಇದರಿಂದ ನಾವು ಅವಮಾನಿತರಾಗಿದ್ದೇವೆ. ಆದ್ದರಿಂದ ಮುಖ್ಯಮಂತ್ರಿಯವರು ನಮ್ಮೂರಿಗೆ ಬೇಗ ರಸ್ತೆ ಸೌಕರ್ಯ ಕೊಟ್ಟು, ಈ ಮಳೆಗಾಲ ಬರುವ ಮೊದಲೇ ನಮ್ಮೂರಿನ ವರರಿಗೆ ವಧೂ ಭಾಗ್ಯ ಒದಗಿಸಿ ಪುಣ್ಯ ಕಟ್ಟಿಕೊಳ್ಳಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT