ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಾಂತ್ಯಕ್ಕೆ ₹ 33 ಸಾವಿರ ಗಡಿ ದಾಟಲಿದೆ ಚಿನ್ನ

ಬ್ರೆಕ್ಸಿಟ್‍ ಪರಿಣಾಮ: ಆರ್ಥಿಕ ತಜ್ಞರ ವಿಶ್ಲೇಷಣೆ
Last Updated 26 ಜೂನ್ 2016, 11:20 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬರುತ್ತಿರುವುದರ ಪರಿಣಾಮ ಮಾರುಕಟ್ಟೆಯ ತಲ್ಲಣದಿಂದಾಗಿ ಚಿನ್ನದ ಬೆಲೆ ವರ್ಷಾಂತ್ಯಕ್ಕೆ ₹ 33,500 ತಲುಪಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಒಕ್ಕೂಟದಿಂದ ಹೊರ ಬರುವಂತೆ ಬ್ರೆಕ್ಸಿಟ್‌ ಮತ ಚಲಾಯಿಸಿದ್ದೇ ತಡ ಶುಕ್ರವಾರ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹ 30 ಸಾವಿರ ಗಡಿ ದಾಟಿದೆ. ವರ್ಷಾಂತ್ಯದ ವೇಳೆಗೆ ಇದು ₹ 33 ಸಾವಿರದ ಗಡಿ ದಾಟಲಿದೆ ಎಂದು ತಜ್ಞರು ಹೇಳಿದ್ದಾರೆ. 

ವಿಶ್ವ ಮಾರುಕಟ್ಟೆಯಲ್ಲಿ ಶೇ 8.2ರಷ್ಟು(ಅಮೆರಿಕದ ಡಾಲರ್‍) ಹೆಚ್ಚಳ ಕಂಡಿರುವ ಚಿನ್ನದ ದರ ಡಿಸೆಂಬರ್‌ ವೇಳೆಗೆ ₹ 33 ಸಾವಿರದ ಗಡಿ ದಾಟಲಿದೆ ಎಂದು ಅಂದಾಜಿಸಲಾಗಿದೆ.

ಚಿನ್ನದ ದರ ಗರಿಷ್ಠ ₹ 34 ಸಾವಿರದಿಂದ 35 ಸಾವಿರಕ್ಕೆ ತಲುಪುವ ನಿರೀಕ್ಷೆ ಇದೆ. ಆದರೆ, ಕನಿಷ್ಠ ಬೆಲೆ ₹ 28 ಸಾವಿರಕ್ಕಿಂತ ಕೆಳಗೆ ಇಳಿಯುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT