ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸಿಗರ ಬಿಕ್ಕಟ್ಟು ಹೆಚ್ಚಳಕ್ಕೆ ವಿಶ್ವಸಂಸ್ಥೆ ಕಾರಣ: ಭಾರತ

Last Updated 24 ನವೆಂಬರ್ 2015, 20:17 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ): ವಲಸಿಗರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಫಲವಾ
ಗಿದ್ದು, ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿದೆ ಎಂದು ಭಾರತ ಆರೋಪಿಸಿದೆ.

ಇದು ಭದ್ರತಾ ಮಂಡಳಿ ಸುಧಾರಣೆ ಮಾಡುವ ಅಗತ್ಯ ಇದೆ ಎನ್ನುವುದನ್ನು ಎತ್ತಿ ಹಿಡಿದಿದೆ ಎಂದು  ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಭಾಗ್ವತ್‌ ಬಿಷ್ಣೋಯ್‌ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ತಿಳಿಸಿದ್ದಾರೆ.

ಜನಾಂಗೀಯ ದ್ವೇಷದ ವಿರುದ್ಧ ಎಚ್ಚರಿಕೆ ನೀಡಿರುವ ಭಾರತ, ವಲಸಿಗರ ಪ್ರವೇಶಕ್ಕೆ ಗಡಿಗಳನ್ನು ಮುಚ್ಚಬಾರದು ಎಂದು ಅಂತರರಾಷ್ಟ್ರೀಯ ಸಮು ದಾಯವನ್ನು ಕೋರಿದ್ದಾರೆ. 

‘ಜೀವ ಉಳಿಸಿ, ಸುರಕ್ಷತೆ ಒದಗಿಸಿ ಮತ್ತು ಮಾನವ ಘನತೆಯನ್ನು ಎತ್ತಿ ಹಿಡಿಯಿರಿ, ವಲಸಿಗರ ಪ್ರವೇಶಕ್ಕೆ ಗಡಿಗಳನ್ನು ಮುಚ್ಚದೆ ತೆರೆದಿಡಿ’ ಎಂದು ಅವರು  ತಿಳಿಸಿದ್ದಾರೆ. ವಲಸಿಗರಿಗೆ ಆಶ್ರಯ ನಿರಾಕರಿಸುವ ಬದಲು, ಅವರಿಗೆ ಸಿಗಬೇಕಾಗಿ
ರುವ ಸೌಲಭ್ಯಗಳನ್ನು ಕಡಿಮೆ ಮಾಡಿ‘ ಎಂದು ಅವರು ಒತ್ತಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯನಿರ್ವಹಣೆಯಲ್ಲಿ ಆಗಿರುವ ಲೋಪಗಳಿಂದಾಗಿ ವಲಸಿಗರ ಸಮಸ್ಯೆ ಸೃಷ್ಟಿಯಾಗಿದೆ. ಎಲ್ಲ ಈ ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಭದ್ರತಾ ಮಂಡಳಿ ವಿಫಲವಾಗಿದೆ ಎಂದು ಬಿಷ್ಣೋಯ್‌ ತಿಳಿಸಿದ್ದಾರೆ.

ನೇಪಾಳ ಹಿಂಸಾಚಾರ ಸ್ವತಂತ್ರ ತನಿಖೆಗೆ ವಿಶ್ವಸಂಸ್ಥೆ ಆಗ್ರಹ
ಜಿನಿವಾ(ಪಿಟಿಐ): ನೇಪಾಳದಲ್ಲಿ ಹೊಸ ಸಂವಿಧಾನ ಜಾರಿಯಾದ ನಂತರ ನಡೆದ ಹಿಂಸಾಚಾರ ಕುರಿತು ಸ್ವತಂತ್ರ ತನಿಖೆಯಾಗಬೇಕು ಎಂದು ವಿಶ್ವಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT