ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸಿಗ ಸ್ನೇಹಿ ನೀತಿ

Last Updated 28 ಜೂನ್ 2016, 19:30 IST
ಅಕ್ಷರ ಗಾತ್ರ

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯಲ್ಲಿ (ಬಿಬಿಎಂಪಿ) ಹೊಸ ಸಹಾಯವಾಣಿ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ದೂರು ನೀಡುವುದಕ್ಕೆ, ಕಸ ವಿಲೇವಾರಿ ಕುರಿತು ಮಾಹಿತಿ ಪಡೆಯುವುದಕ್ಕೆ ಸುಲಭವಾಗುತ್ತದೆ. ಆದರೆ ಹಿಂದೆ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ಇದ್ದ ಸಹಾಯವಾಣಿಯನ್ನು ಈಗ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೊಡಲು ಯೋಜಿಸಲಾಗಿದೆ.

ಈ ಸಹಾಯವಾಣಿಯನ್ನು ಬಳಸುವ ಬಹುಪಾಲು ಮಂದಿ ಕನ್ನಡದವರು. ಆದ್ದರಿಂದ ಕನ್ನಡದಲ್ಲಿ ಸೇವೆ ನೀಡುವುದು ಸರಿ. ಹಾಗೆಯೇ ಇತರ ಭಾಷಿಕರಿಗೆ ಇಂಗ್ಲಿಷ್‌ನಲ್ಲಿ ಮಾಹಿತಿ ಕೊಡುವುದು ಸಾಕಲ್ಲವೇ? ಪರಭಾಷಿಗರು ಕರ್ನಾಟಕಕ್ಕೆ ಬಂದಾಗ ಅವರಿಗೆ ಕನ್ನಡ ಕಲಿಸಿ ಮುಖ್ಯವಾಹಿನಿಗೆ ತರಬೇಕಾದ ನಮ್ಮ ಸರ್ಕಾರವೇ ಅವರವರ ಭಾಷೆಯಲ್ಲಿ ಸೇವೆ ಕೊಟ್ಟರೆ ಅವರೆಲ್ಲ ಕನ್ನಡ ಕಲಿಯುವುದಾದರೂ ಹೇಗೆ?

ಬೇರೆ ರಾಜ್ಯಗಳಿಗೆ ವಲಸೆ ಹೋಗಿರುವ ಕನ್ನಡಿಗರಿಗೆ ಅಲ್ಲಿ ಕನ್ನಡದಲ್ಲಿ ಸೇವೆ ಸಿಗುತ್ತಿದೆಯೇ? ಹೆಚ್ಚು ವಲಸಿಗರು ಇರುವ ಮುಂಬೈ ಹಾಗೂ ದೆಹಲಿಯಲ್ಲೂ ಇಷ್ಟೊಂದು ಭಾಷೆಗಳಲ್ಲಿ ಸೇವೆ ಸಿಗುವುದು ಕಾಣುವುದಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ಇಂತಹ ‘ವಲಸಿಗ ಸ್ನೇಹಿ’ ಯೋಜನೆಗಳನ್ನು ಕೈಬಿಟ್ಟು ಪರಭಾಷಿಗರನ್ನು ಕರ್ನಾಟಕದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT