ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರ ಬಂಧನ

ಗುತ್ತಿಗೆದಾರರಿಗೆ ಬೆದರಿಸಿ ಲಂಚ ವಸೂಲಿ
Last Updated 1 ಸೆಪ್ಟೆಂಬರ್ 2014, 20:06 IST
ಅಕ್ಷರ ಗಾತ್ರ

ಬೆಂಗಳೂರು: ತೆರಿಗೆ ಬಾಕಿಯ ನೆಪವೊಡ್ಡಿ ಸಿವಿಲ್‌ ಗುತ್ತಿಗೆ­­ದಾರರನ್ನು ಬೆದರಿಸಿ ₨ 25 ಸಾವಿರ ಲಂಚ ಪಡೆ­ಯುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಸಹಾ­ಯಕ ಆಯುಕ್ತ ಡಾಕಾ ನಾಯಕ್‌ ಅವರನ್ನು ಲೋಕಾ­ಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಪೀಣ್ಯದ ನಾಗೇಂದ್ರ ಎಂಬುವರು ಬಸವೇಶ್ವರ­ನಗರದಲ್ಲಿ ಸಿವಿಲ್‌ ಕಾಮ­ಗಾರಿಗಳ ಗುತ್ತಿಗೆ ಕಂಪೆನಿ­ಯೊಂದನ್ನು ನಡೆಸುತ್ತಿದ್ದಾರೆ.

ಈ ಕಂಪೆನಿ ₨ 38 ಲಕ್ಷ ವಾಣಿಜ್ಯ ತೆರಿಗೆ ಬಾಕಿ ಇರಿಸಿಕೊಂಡಿದೆ ಎಂದು ಬೆಂಗಳೂರಿನ ತೆರಿಗೆ ವಾರ್ಡ್‌ 6(4)ರ ಸಹಾಯಕ ಆಯುಕ್ತ ಡಾಕಾ ನಾಯಕ್‌ ನೋಟಿಸ್‌ ನೀಡಿದ್ದರು. ಆದರೆ, ತಾವು ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ನಾಗೇಂದ್ರ ಅವರು ಸಮಜಾಯಿಷಿ ನೀಡಿದ್ದರು. ಆ ನಂತರ ಪದೇ ಪದೇ ಗುತ್ತಿಗೆದಾರರನ್ನು ಸಂಪರ್ಕಿಸಿದ್ದ ಅಧಿಕಾರಿ, ತೆರಿಗೆ ಪಾವತಿಸದಿದ್ದರೆ ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿದ್ದರು.

ಡಾಕಾ ನಾಯಕ್‌ ಅವರು ಖುದ್ದಾಗಿ ನಾಗೇಂದ್ರ ಅವರ ಮನೆಗೂ ತೆರಳಿ ಹೆದರಿ­ಸಿದ್ದರು. ನಂತರ ತೆರಿಗೆ ಮೊತ್ತ­ವನ್ನು ಕಡಿಮೆ ಮಾಡುವಂತೆ ಗುತ್ತಿಗೆದಾರರು ಕೋರಿದ್ದರು. ₨ 1.5 ಲಕ್ಷ ಲಂಚ ನೀಡಿದರೆ ತೆರಿಗೆ ಮೊತ್ತ­ವನ್ನು ₨ 38 ಲಕ್ಷದಿಂದ ₨ 18 ಲಕ್ಷಕ್ಕೆ ಇಳಿಕೆ ಮಾಡುವುದಾಗಿ ತಿಳಿಸಿದ್ದರು.

₨ 1.5 ಲಕ್ಷದಷ್ಟು ಹಣ ತಮ್ಮ ಬಳಿ ಇಲ್ಲ ಎಂದು ಗುತ್ತಿಗೆದಾರರು ಉತ್ತರ ನೀಡಿದ್ದರು. ಆಗ ಕಂತಿನ ಮೂಲಕ ನೀಡುವಂತೆ ಸೂಚಿಸಿದ್ದರು. ಸೋಮ­ವಾರ ₨ 25 ಸಾವಿರ ತಂದು­ಕೊಡುವಂತೆ ತಿಳಿಸಿದ್ದರು. ನಾಗೇಂದ್ರ ಅವರು ಈ ಕುರಿತು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

‘ದೂರು ನೀಡಿದ ಬಳಿಕ ದೂರವಾಣಿ ಮೂಲಕ ಡಾಕಾ ನಾಯಕ್‌ ಅವರನ್ನು ಸಂಪರ್ಕಿಸಿದಾಗ ರಾಜಾಜಿನಗರದ ನವರಂಗ್ ಚಿತ್ರಮಂದಿರದ ಬಳಿ ಹಣ ತರುವಂತೆ ಸೂಚಿಸಿದರು. ಅಲ್ಲಿಗೆ ಹೋಗಿ ಕರೆ ಮಾಡಿದಾಗ ನಾಗರ­ಬಾವಿಯ ಬಿಡಿಎ ಕಾಂಪ್ಲೆಕ್ಸ್‌ ಬಳಿ ಬರು­ವಂತೆ ತಿಳಿಸಿದರು. ಅಲ್ಲಿಗೆ ಹೋದಾಗ ಕಾಫಿ ಶಾಫ್‌ ಒಂದರಲ್ಲಿ ಹಣ ಪಡೆದರು.

ತಕ್ಷಣವೇ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ. ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಡಾ.ಮಹೇಶ್‌ ಅವರ ನೇತೃತ್ವ­ದಲ್ಲಿ ನಡೆದ ಕಾರ್ಯಾ­ಚರಣೆಯಲ್ಲಿ ಡಿವೈಎಸ್‌ಪಿ ಎಂ.ನಾರಾಯಣ, ಇನ್‌­ಸ್ಪೆಕ್ಟರ್‌­­ಗಳಾದ ರವಿಶಂಕರ್, ಎನ್‌.ಜಿ.­ಶಿವಶಂಕರ್‌, ಪಂಡಿತ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT