ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಧ್ರಾ ಸೌಲಭ್ಯ: ವಾಪಸ್‌ಗೆ ಪ್ರಿಯಾಂಕಾ ಪತ್ರ

Last Updated 30 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಮಾನ ನಿಲ್ದಾ­ಣ­ಗಳಲ್ಲಿನ ಸಾಮಾನ್ಯ ಭದ್ರತಾ ತಪಾ­ಸಣೆ­ಯಿಂದ ತಮಗೆ ಮತ್ತು ತಮ್ಮ ಕುಟುಂ­ಬಕ್ಕೆ ನೀಡಿದ ವಿನಾಯಿತಿ­ಯನ್ನು ಹಿಂತೆ­ಗೆ­ದುಕೊಳ್ಳುವಂತೆ ಪ್ರಿಯಾಂಕಾ ವಾಧ್ರಾ ಶುಕ್ರ­ವಾರ ಎಸ್‌ಪಿಜಿಗೆ ಮನವಿ ಮಾಡಿ­ದ್ದಾರೆ.

ತಮ್ಮ ಪತಿ ರಾಬರ್ಟ್‌ ವಾಧ್ರಾ ಅವ­ರಿಗೆ ನೀಡಿರುವ ವಿಶೇಷ ಭದ್ರತಾ ಸೌಲ­ಭ್ಯ­ಗಳನ್ನು ರದ್ದುಪಡಿಸುವ ಬಗ್ಗೆ ಸರ್ಕಾರ ಪರಿ­ಶೀಲಿಸುತ್ತಿರುವುದಾಗಿ ಮಾಧ್ಯಮಗಳಲ್ಲಿ ಬಂದ ವರದಿಗಳ ಹಿನ್ನೆ­ಲೆಯಲ್ಲಿ ಎಸ್‌ಪಿಜಿ ಮುಖ್ಯಸ್ಥ ದುರ್ಗಾ ಪ್ರಸಾದ್‌ ಅವರಿಗೆ  ಪತ್ರ ಬರೆದು ಪ್ರಿಯಾಂಕಾ ಈ ಕೋರಿಕೆ ಸಲ್ಲಿಸಿದ್ದಾರೆ.

ಹಿಂದಿನ ಎಸ್‌ಪಿಜಿ ಮುಖ್ಯಸ್ಥರು ಮತ್ತು ದೆಹಲಿ ಪೊಲೀಸರ ಸೂಚನೆ ಮೇರೆಗೆ  ಈ ವಿಶೇಷ ಭದ್ರತಾ ಸೌಲಭ್ಯ­ದಲ್ಲಿ ವಾಧ್ರಾ ಅವರ ಹೆಸರನ್ನು ಸೇರಿಸ­ಲಾಗಿದೆಯೇ ಹೊರತು ತಮ್ಮ ಕುಟುಂ­ಬದ ಮನವಿಯಂತೆ ಅಲ್ಲ. ಆದಷ್ಟು ಬೇಗ ಈ ಸೌಲಭ್ಯ ವಾಪಸ್‌ ಪಡೆದರೆ ಅದನ್ನು ಪ್ರಶಂಸಿಸು­ವು­ದಾಗಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT