ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಸುದಾರರಿಲ್ಲದ ಖಾತೆ ಬಹಿರಂಗ

Last Updated 31 ಮೇ 2015, 19:30 IST
ಅಕ್ಷರ ಗಾತ್ರ

ಜ್ಯೂರಿಚ್‌ (ಪಿಟಿಐ): ಸ್ವಿಸ್‌ ಬ್ಯಾಂಕ್‌ನಲ್ಲಿಿ ಕಪ್ಪುಹಣ ಇಟ್ಟಿರುವವರ ಹೆಸರುಗಳನ್ನು ಬಹಿರಂಗಪಡಿಸಿರುವ ಸ್ವಿಡ್ಜರ್‌ಲೆಂಡ್‌ ಸರ್ಕಾರ, ಇದೀಗ ಕಳೆದ 60 ವರ್ಷಗಳಿಂದ ವಾರಸುದಾರರು ಇಲ್ಲದ ಖಾತೆಗಳ ಪಟ್ಟಿಯನ್ನು ಪ್ರಕಟಿಸಲು ಮುಂದಾಗಿದೆ.

2015ರ ಅಂತ್ಯದಲ್ಲಿ ಸ್ವಿಸ್‌ ಬ್ಯಾಂಕಿನ ಒಂಬುಡ್ಸ್‌ಮನ್‌ ಅವರು ಈ ಪಟ್ಟಿಯನ್ನು ಪ್ರಕಟಿಸಲಿದ್ದಾರೆ. ಇದೇ ವೇಳೆ ಸ್ವಿಸ್‌ ಬ್ಯಾಂಕಿನಲ್ಲಿರುವ ವಾರಸುದಾರರಿಲ್ಲದ ಸ್ವತ್ತುಗಳ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ.   ಈ ಖಾತೆಗಳು ಅರಸರು ಮತ್ತು ಶ್ರೀಮಂತ ಕುಟುಂಬಗಳಿಗೆ  ಸೇರಿವೆ. ಅವರು ಸ್ವಿಸ್‌ ಬ್ಯಾಂಕ್‌ನಲ್ಲಿ ಖಾತೆಗಳನ್ನು ತೆರೆದ ಬಳಿಕ ಖಾತೆಯ ಒಡೆತನವನ್ನು ತಮ್ಮ ಮಕ್ಕಳಿಗೆ ಅಥವಾ ಕುಟುಂಬ ಸದಸ್ಯರಿಗೆ ವರ್ಗಾಯಿಸದ ಕಾರಣ ಈ ಖಾತೆಗಳು ಹಾಗೆಯೇ ಉಳಿದಿವೆ ಎಂಬ ಊಹಾಪೋಹಗಳು ಇವೆ.

ಖಾತೆ ವಿವರದೊಂದಿಗೆ,  ಖಾತೆದಾರರ ರಾಷ್ಟ್ರೀಯತೆಯನ್ನು  ಬಹಿರಂಗಗೊಳಿಸಲಾಗುವುದು ಎಂದು ಸ್ವಿಸ್‌ ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT