ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿಯ ಜಾತಿ: ತೀರ್ಪಿನಲ್ಲಿ ಇಲ್ಲ

ಅಕ್ಷರ ಗಾತ್ರ

ಏಪ್ರಿಲ್ 10ರ ವಾಚಕರ­ವಾಣಿಯಲ್ಲಿ ‘ವಾಲ್ಮೀಕಿ ಯಾರು? ಸ್ಪಷ್ಟೀಕರಣ’ ಶೀರ್ಷಿಕೆ­ಯಡಿ ಡಾ. ಕೆ.ಎಸ್‌. ನಾರಾಯಣಾ­ಚಾರ್ಯರು ಬರೆದ ಪತ್ರಕ್ಕೆ ಈ ಪ್ರತಿಕ್ರಿಯೆ ಬರೆಯುತ್ತಿದ್ದೇನೆ.

ನಾರಾಯಣಾಚಾರ್ಯ ಅವರು ವಾಲ್ಮೀಕಿಯ ಜಾತಿಯ ಬಗೆಗೆ ಅನಗತ್ಯ ಗೊಂದಲ ಹುಟ್ಟುಹಾಕಿದ್ದಾರೆ. ಜೊತೆಗೆ ತಮ್ಮ ವಾದಕ್ಕೆ ಆಧಾರವಾಗಿ ಪಂಜಾಬ್‌ ಹರಿಯಾಣ ಹೈಕೋರ್ಟ್ ನೀಡಿರುವ ತೀರ್ಪಿನ ಉಲ್ಲೇಖವನ್ನು   ನೀಡಿದ್ದಾರೆ. ಆದರೆ ಆ ತೀರ್ಪಿನಲ್ಲಿ ವಾಲ್ಮೀಕಿ ದರೋಡೆಕೋರ­ನಾಗಿರಲಿಲ್ಲ, ಕಳ್ಳನಾಗಿರಲಿಲ್ಲ. ಓರ್ವ ಸುಸಂಸ್ಕೃತ­ನಾಗಿದ್ದ ಎಂದಷ್ಟೇ ಹೇಳಲಾಗಿದೆ. ಆತ ಬೇಡ ಅಲ್ಲ, ಬ್ರಾಹ್ಮಣ ಎಂದು ಈ ತೀರ್ಪಿನಲ್ಲಿ ಎಲ್ಲಿಯೂ ಹೇಳಿಲ್ಲ. 12.10.2009 ರಂದು ನ್ಯಾಯಮೂರ್ತಿ ರಾಜೀವ ಭಲ್ಲಾ ಅವರಿದ್ದ ಪೀಠ ನೀಡಿರುವ ಆದೇಶದಲ್ಲಿ ಇದು ಸ್ಪಷ್ಟವಾಗಿದೆ.

ಪಾಟಿಯಾಲದಲ್ಲಿರುವ ಪಂಜಾಬ್‌ ವಿಶ್ವ­ವಿದ್ಯಾಲಯದ ಮಹರ್ಷಿ ವಾಲ್ಮೀಕಿ ಪೀಠದ ನಿರ್ದೇಶಕಿ ಡಾ. ಮಂಜುಳಾ ಸಹದೇವ ಅವರು ಇದಕ್ಕೆ ಸಾಕಷ್ಟು ಆಧಾರ ನೀಡಿದ್ದಾರೆ. ವೇದಗಳ ಕಾಲ­ದಿಂದ ಹಿಡಿದು ಕ್ರಿ.ಶ. 9ನೇ ಶತಮಾನದವರೆಗಿನ ಆಧಾರ­ಗಳಲ್ಲಿ ವಾಲ್ಮೀಕಿ ದರೋಡೆ­ಕೋರ­ನಾಗಿದ್ದ, ಕಳ್ಳ­­­­ನಾಗಿದ್ದ ಎಂಬಂತಹ ಸೂಚನೆಗಳು ಎಲ್ಲಿಯೂ ಲಭ್ಯ­ವಿಲ್ಲ. 9ನೇ ಶತ­ಮಾನದ ನಂತರವೇ ಅಂತಹ ಸುಳ್ಳು­ಗಳು ವ್ಯವಸ್ಥಿತವಾಗಿ ಸೃಷ್ಟಿಯಾಗಿವೆ.

ಮನುಷ್ಯ ವಿಕಾಸ ಆರಂಭವಾದುದೇ ಬೇಟೆ­ಗಾರಿಕೆಯಿಂದ ಎಂದು ಚಾರ್ಲ್ಸ್ ಡಾರ್ವಿನ್‌ ತಮ್ಮ ವಿಕಾಸವಾದದಲ್ಲಿ ಹೇಳಿ­ದ್ದಾರೆ. ಮೂಲತಃ ಎಲ್ಲರೂ ಬೇಟೆಗಾರರೇ.

ನಾರಾಯಣಾ­ಚಾರ್ಯ ತರಹದ ವಿದ್ವಾಂಸರ ಬುದ್ಧಿ­ವಂತಿಕೆ ಕೇವಲ ಒಂದು ವರ್ಗಕ್ಕೆ ಸೇರಿ­ದುದು. ತಳವರ್ಗದವರಲ್ಲಿ ಪ್ರತಿಭೆ ಇರ­­ಬಾರದು ಎಂಬ ಮನೋಭಾವದಿಂದ ಹೊರ­ಬರಲಿ. ಪ್ರತಿಭೆ ಯಾವುದೇ ಜಾತಿಗೆ ಸೀಮಿತವಲ್ಲ ಎಂಬುದು ನೆನಪಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT