ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್‌ ಸರಣಿ ‘ಕ್ಲೀನ್‌ ಸ್ವೀಪ್‌’ ಸಾಧನೆ

ರಾಮ್ದಿನ್‌, ಡರೆನ್‌ ಬ್ರಾವೊ ವಿಶ್ವ ದಾಖಲೆಯ ಜೊತೆಯಾಟ
Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬಸ್ಸೆಟ್ಟೆರೆ, ಸೇಂಟ್‌ ಕಿಟ್ಸ್‌ ಮತ್ತು ನೇವಿಸ್‌ (ಎಎಫ್‌ಪಿ): ದಿನೇಶ್ ರಾಮ್ದಿನ್‌ (169) ಮತ್ತು ಡರೆನ್‌ ಬ್ರಾವೊ (124) ಅವರು ಮೂರನೇ ವಿಕೆಟ್‌ ಜೊತೆಯಾಟದಲ್ಲಿ ವಿಶ್ವ ದಾಖಲೆ ಬರೆದರು.

ಇವರಿಬ್ಬರ ಮನಮೋಹಕ ಆಟದ ನೆರವಿನಿಂದ ವೆಸ್ಟ್‌ ಇಂಡೀಸ್‌ ತಂಡ ಇಲ್ಲಿ ಮುಕ್ತಾಯವಾದ ಬಾಂಗ್ಲಾದೇಶ ಎದುರಿನ ಏಕದಿನ ಕ್ರಿಕೆಟ್‌ ಸರಣಿ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ 91ರನ್‌ಗಳ ಜಯಭೇರಿ ಮೊಳಗಿಸಿತು.

ಈ ಮೂಲಕ ಸರಣಿಯನ್ನು 3–0ರಲ್ಲಿ ವಶಪಡಿಸಿಕೊಂಡು ‘ಕ್ಲೀನ್‌ ಸ್ವೀಪ್‌’ ಸಾಧನೆ ತೋರಿತು.

ವಾರ್ನರ್‌ ಪಾರ್ಕ್‌ನಲ್ಲಿ  ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ವಿಂಡೀಸ್‌ ಮೊದಲು ಬ್ಯಾಟಿಂಗ್‌ ನಡೆಸಿತು. ಈ ತಂಡ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 338ರನ್‌ ಕಲೆಹಾಕಿತು. ಕಠಿಣ ಗುರಿ ಬೆನ್ನಟ್ಟಿದ ಬಾಂಗ್ಲಾ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 247ರನ್‌ ಗಳಿಸಲಷ್ಟೇ ಶಕ್ತವಾಯಿತು.

ವಿಂಡೀಸ್‌ನ ಡರೆನ್‌ ಬ್ರಾವೊ ಮತ್ತು ದಿನೇಶ್‌ ರಾಮ್ದಿನ್‌ ಮೂರನೇ ವಿಕೆಟ್‌ಗೆ 258ರನ್‌ ಪೇರಿಸಿ ದಕ್ಷಿಣ ಆಫ್ರಿಕಾದ ಹಾಶಿಮ್‌ ಆಮ್ಲಾ ಮತ್ತು ಎಬಿ ಡಿವಿಲಿಯರ್ಸ್‌ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿತು.

ಆಮ್ಲಾ ಮತ್ತು ಡಿವಿಲಿಯರ್ಸ್‌ 2013ರಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಮೂರನೇ ವಿಕೆಟ್‌ಗೆ 238ರನ್‌ ಗಳಿಸಿ ದಾಖಲೆ ನಿರ್ಮಿಸಿದ್ದರು.

ಸಂಕ್ಷಿಪ್ತ ಸ್ಕೋರು: ವೆಸ್ಟ್‌ ಇಂಡೀಸ್‌:  50 ಓವರ್‌ಗಳಲ್ಲಿ 7 ವಿಕೆಟ್‌ಗೆ 338 (ದಿನೇಶ್‌ ರಾಮ್ದಿನ್‌ 169, ಡರೆನ್‌ ಬ್ರಾವೊ 124; ಅಲ್‌ ಅಮಿನ್‌ ಹೊಸೇನ್‌ 59ಕ್ಕೆ4, ಮಹಮದುಲ್ಲಾ 48ಕ್ಕೆ1): ಬಾಂಗ್ಲಾದೇಶ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 247 (ತಮಿಮ್‌ ಇಕ್ಬಾಲ್‌ 55, ಮುಶ್ಫಿಕರ್‌ ರಹಿಮ್‌ 72, ಮಹಮದುಲ್ಲಾ 27; ರವಿ ರಾಂಪಾಲ್‌ 29ಕ್ಕೆ4, ಸುನಿಲ್‌ ನಾರಾಯಣ 31ಕ್ಕೆ1). ಫಲಿತಾಂಶ: ವೆಸ್ಟ್‌ ಇಂಡೀಸ್‌ಗೆ 91 ರನ್‌ ಜಯ;  3–0ರಲ್ಲಿ ಸರಣಿ ಕೈವಶ.

ಪಂದ್ಯ  ಮತ್ತು ಸರಣಿ ಶ್ರೇಷ್ಠ: ದಿನೇಶ್‌ ರಾಮ್ದಿನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT