ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಟನ್‌ ಮುಖ್ಯಸ್ಥ ಬಾಲ­ಸುಬ್ರ­ಹ್ಮಣಿ­ಯನ್‌ ನಿಧನ

Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ(ಪಿಟಿಐ): ವಿಕಟನ್‌ ತಮಿಳು ಮುದ್ರಣ ಸಮೂಹದ ಮುಖ್ಯಸ್ಥ ಬಾಲ­ಸುಬ್ರ­ಹ್ಮಣಿ­ಯನ್‌ (79) ಶುಕ್ರ­ವಾರ ಹೃದಯಾಘಾತ­ದಿಂದ ನಿಧನರಾದರು.

ವಿಕಟನ್‌ ಸಮೂಹವು ಅತ್ಯಂತ ಜನ­ಪ್ರಿಯ­ವಾದ ‘ಆನಂದ ವಿಕಟನ್‌’ ನಿಯತ­ಕಾಲಿಕ ಸೇರಿದಂತೆ ಹಲವು ಪ್ರಕಟಣೆ­ಗಳನ್ನು ಹೊರತರುತ್ತಿತ್ತು.

ಹಿರಿಯ ಚಿತ್ರ ನಿರ್ಮಾಪಕ ಹಾಗೂ ಸಿನಿಮಾ ಸ್ಟುಡಿಯೊ ಮಾಲೀಕ ಎಸ್‌.­ಎಸ್‌.­ ವಾಸನ್‌ ಅವರ ಪುತ್ರ­ರಾಗಿರುವ ಬಾಲ­ಸುಬ್ರಹ್ಮಣಿಯನ್‌ ಅವರಿಗೆ ಆರು ಪುತ್ರಿ­­ಯರು ಮತ್ತು ಒಬ್ಬ ಪುತ್ರ ಇದ್ದಾರೆ.

ಧೈರ್ಯಶಾಲಿಯಾಗಿದ್ದ ಅವರು, ಎಂ.­ಜಿ ರಾಮ­ಚಂದ್ರನ್‌ ಅವರು ಮುಖ್ಯ­ಮಂತ್ರಿ­ಯಾಗಿದ್ದಾಗ ಮುಖ­ಪುಟ­ದಲ್ಲಿ ಪ್ರಕಟ­ವಾಗಿದ್ದ ವ್ಯಂಗ್ಯಚಿತ್ರಕ್ಕೆ ಸಂಬಂ­ಧಿ­ಸಿದಂತೆ ವಿಧಿಸಿದ್ದ ಶಿಕ್ಷೆ ವಿರುದ್ಧ ಕಾನೂನು ಹೋರಾಟ ನಡೆಸಿ ಜಯ ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT