ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕೃತ ಹಿಂಸೆ

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ಭದ್ರತಾ ಸಿಬ್ಬಂದಿಯೊಬ್ಬ ಯುವಕನ ಬೆನ್ನಮೇಲೆ ಬೂಟುಕಾಲನ್ನಿಟ್ಟು ಬಸ್ಕಿ ಹೊಡೆಸುತ್ತಿದ್ದ ಚಿತ್ರ ನೋಡಿದ ಕೂಡಲೇ (ಪ್ರ.ವಾ., ಮೇ 2) ಇವರು ಯಾವುದೋ ಸಾಹಸ ಪ್ರದರ್ಶನ ಮಾಡುತ್ತಿರಬಹುದು ಎಂದುಕೊಂಡೆ. ಆದರೆ ಅದು ಸ್ಥಳೀಯ ಯುವಕ ವಿಜಯಪುರದ ಕೂಡಗಿ ಹತ್ತಿರ ನಿರ್ಮಾಣವಾಗುತ್ತಿರುವ ಉಷ್ಣ ವಿದ್ಯುತ್ ಸ್ಥಾವರದ ಆವರಣದಲ್ಲಿನ ಕೆರೆಯೊಳಗೆ ಈಜಲು ಹೋಗಿದ್ದಕ್ಕಾಗಿ ಅಲ್ಲಿನ ಭದ್ರತಾ ಸಿಬ್ಬಂದಿ ನೀಡುತ್ತಿದ್ದ ಶಿಕ್ಷೆ ಎಂಬ ಸುದ್ದಿ ತಿಳಿದ ಮೇಲೆ, ನಾವಿರುವುದು ಕರ್ನಾಟಕದಲ್ಲೋ ಅಥವಾ ತಾಲಿಬಾನ್‌ ಪ್ರಾಬಲ್ಯದ ಪ್ರದೇಶದಲ್ಲೋ ಎಂಬ ಅನುಮಾನ ಕಾಡಿತು.

ಇಂತಹ ವಿಕೃತ ಹಿಂಸಾ ವಿನೋದದ ಕ್ರೂರ ಶಿಕ್ಷೆ ಕೊಡಲು ಆ ಭದ್ರತಾ ಸಿಬ್ಬಂದಿಗೆ ಅಧಿಕಾರ ಇದೆಯೇ? ಮಾನವೀಯತೆ ಇರುವವರೆಲ್ಲರೂ ಇದನ್ನು ಖಂಡಿಸಬೇಕು.   
-ಕೆ.ಎಚ್.ಚಂದ್ರಶೇಖರ್,
ಹಿರೇಹಡಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT