ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕೇಂದ್ರೀಕರಣ ಮಾಡಿ

ಅಕ್ಷರ ಗಾತ್ರ

ಮಾನವ ಸಂಪನ್ಮೂಲ ನಿರ್ವಹಣೆಯು (ಎಚ್ಆರ್ಎಂಎಸ್) ಸರ್ಕಾರಿ ನೌಕರರ ಸೇವಾ ದಾಖಲೆ- ವಿವರ ನಿರ್ವಹಣೆಗೆ ಇರುವ ಅತ್ಯುತ್ತಮ ವಿದ್ಯುನ್ಮಾನ ವ್ಯವಸ್ಥೆ. ಈ ವ್ಯವಸ್ಥೆ ಬಂದ ನಂತರ ಕೈಬರಹದಲ್ಲಿ ಆಗುತ್ತಿದ್ದ ಹಲವಾರು ಅವಾಂತರಗಳು ತಪ್ಪಿವೆ. ಆದರೆ ಇದರಲ್ಲಿ ಏನಾದರೂ ತಪ್ಪಾಗಿ ದಾಖಲಾದರೆ ಸರಿಪಡಿಸಿಕೊಳ್ಳುವುದು ತುಂಬಾ ಕಷ್ಟ. ರಾಜ್ಯದ ಎಲ್ಲ ತಿದ್ದುಪಡಿ ಪ್ರಕರಣಗಳನ್ನೂ ಬೆಂಗಳೂರಿನ ಘಟಕದಲ್ಲೇ ನಿರ್ವಹಿಸಲಾಗುತ್ತಿದೆ.

ಈ ವ್ಯವಸ್ಥೆಯನ್ನು ವಿಕೇಂದ್ರೀಕರಿಸಿ ಜಿಲ್ಲಾ ಮಟ್ಟದಲ್ಲಿ  ಎಚ್ಆರ್ಎಂಎಸ್ ಘಟಕಗಳನ್ನು ತೆರೆದರೆ ಅನವಶ್ಯಕ ವಿಳಂಬ, ದೂರದ ಜಿಲ್ಲೆಗಳಿಂದ ಬರಲು ತಗಲುವ ಖರ್ಚು, ಶ್ರಮ, ಕಿರಿಕಿರಿ ಎಲ್ಲವೂ ತಪ್ಪುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ನೌಕರರಿಗೆ ನಿಗದಿತ ಅವಧಿಯಲ್ಲಿ ಪಗಾರ ಕೈಗೆ ಸಿಕ್ಕಿ ನಿರುಮ್ಮಳವಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT