ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚ್ಛೇದನ ಪಡೆದ ಹೃತಿಕ್‌–ಸುಸಾನೆ

Last Updated 1 ನವೆಂಬರ್ 2014, 13:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಹಾಗೂ ಅವರ ಪತ್ನಿ ಸುಸಾನೆ ಖಾನ್‌ ಅವರಿಗೆ ಕೊನೆಗೂ ವಿಚ್ಛೇದನ ದೊರೆತಿದೆ. ಹೃತಿಕ್–ಸುಸಾನೆ ಅವರು ಬೇರೆಯಾಗುವುದಾಗಿ ಪ್ರಕಟಿಸಿದ ಸುಮಾರು ಒಂದು ವರ್ಷದ ಬಳಿಕ ಇಲ್ಲಿನ ಸ್ಥಳೀಯ ಕೌಟುಂಬಿಕ ನ್ಯಾಯಾಲಯ ಶನಿವಾರ ವಿಚ್ಛೇದನ ನೀಡಿದೆ.

‘ಇಬ್ಬರಿಗೂ ನ್ಯಾಯಾಲಯ ವಿಚ್ಛೇದನ ನೀಡಿದೆ. ಇದು ಪರಸ್ಪರ ಒಪ್ಪಿಗೆಯ ಮೂಲಕ ಪಡೆದ ವಿಚ್ಛೇದನ’ ಎಂದು ಹೃತಿಕ್ ಪರ ವಕೀಲರಾದ ಮೃಣಾಲಿನಿ ದೇಶಮುಖ್‌ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

14 ವರ್ಷಗಳ ಹಿಂದೆ ಮದುವೆಯಾಗಿದ್ದ ಹೃತಿಕ್–ಸುಸಾನೆ ಅವರಿಗೆ ಇಬ್ಬರು ಮಕ್ಕಳು. ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ಇಬ್ಬರು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.

2013ರ ಡಿಸೆಂಬರ್‌ 14ರಂದು  ಬೇರೆಯಾಗುವುದಾಗಿ   ಇಬ್ಬರು  ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT