ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌ ಮಲ್ಯ ಉದ್ದೇಶಪೂರ್ವಕ ಸುಸ್ತಿದಾರ: ಯುಬಿಐ ಘೋಷಣೆ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಕಂಪೆನಿ ಮತ್ತು ಅದರ ಮಾಲೀಕ ವಿಜಯ್‌ ಮಲ್ಯ ಅವರನ್ನು  ಉದ್ದೇಶಪೂರ್ವಕ ಸುಸ್ತಿದಾರ ಎಂದು ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ (ಯುಬಿಐ) ಸೋಮವಾರ ಘೋಷಿಸಿದೆ.

ವಿಜಯ್‌ ಮಲ್ಯ ಮತ್ತು ಕಿಂಗ್‌­ಫಿಷರ್‌ ಏರ್‌ಲೈನ್ಸ್‌ನ ಮೂವರು ನಿರ್ದೇಶ­ಕ­ರಾದ ರವಿ ನಿಡುಂಗಡಿ, ಅನಿಲ್‌ ಕುಮಾರ್‌ ಗಂಗೂಲಿ ಮತ್ತು ಸುಭಾಷ್‌ ಗುಪ್ತಾ ಅವರು ಬ್ಯಾಂಕ್‌ನ ಸಾಲವನ್ನು ಉದ್ದೇಶಪೂರ್ವಕ­ವಾಗಿ­ಯೇ  ಮರುಪಾವತಿಸಿಲ್ಲ. ಹಾಗಾಗಿ ಅವರೆ­ಲ್ಲರನ್ನೂ ಉದ್ದೇಶಪೂರ್ವಕ ಸುಸ್ತಿದಾರರು ಎಂದೇ ಪರಿಗಣಿಸ­ಲಾಗಿದೆ ಎಂದು ಯುಬಿಐ ಕಾರ್ಯ­ನಿರ್ವಾಹಕ ನಿರ್ದೇಶಕ ದೀಪರ್‌ ನಾರಂಗ್‌ ಸುದ್ದಿಗಾರರಿಗೆ ತಿಳಿಸಿದರು.

ಇದರಿಂದಾಗಿ ಈ ವ್ಯಕ್ತಿಗಳು ಭವಿಷ್ಯ­ದಲ್ಲಿ ಬ್ಯಾಂಕಿನಿಂದ ಯಾವುದೇ ರೀತಿಯ ಸಾಲ ಪಡೆಯುವಂತಿಲ್ಲ. ಅಲ್ಲದೇ ಕಂಪೆನಿಯ ನಿರ್ದೇಶಕ ಹುದ್ದೆ­ಯನ್ನೂ ಕಳೆದುಕೊಳ್ಳಲಿದ್ದಾರೆ. ಬ್ಯಾಂಕಿನ ದೂರು ಪರಿಹಾರ ಸಮಿತಿ (ಜಿಆರ್‌ಸಿ) ಕೈಗೊಂಡ ಈ ನಿರ್ಧಾರ­ವನ್ನು ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಭಾರತೀಯ ಷೇರು ಪೇಟೆ ನಿಯಂತ್ರಣ ಸಂಸ್ಥೆಗೆ ಮನವರಿಕೆ ಮಾಡಿಕೊಡ­ಲಾಗುವುದು ಎಂದು ನಾರಂಗ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT