ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಪ್ರಪಂಚ – ಎಷ್ಟು ಪರಿಚಿತ?

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

1) ಅಂತರಿಕ್ಷದಿಂದ ಗೋಚರಿಸುವಂತೆ ನಮ್ಮ  ಪೃಥ್ವಿಯ ಒಂದು ದೃಶ್ಯ ಚಿತ್ರ – 1ರಲ್ಲಿದೆ.
ಅ) ಇಲ್ಲಿ ಪೂರ್ಣವಾಗಿ ಕಾಣುತ್ತಿರುವ ಭೂಖಂಡ ಯಾವುದು?
ಬ) ಈ ಭೂಖಂಡದಲ್ಲಿರುವ ಮೂರು ಪ್ರಸಿದ್ಧ ಮರುಭೂಮಿಗಳು ಯಾವುವು?
ಕ) ಈ ಖಂಡದ ಯಾವ ದೇಶ ವಜ್ರ ಮತ್ತು ಬಂಗಾರ ನಿಕ್ಷೇಪಗಳಿಗೆ ಪ್ರಸಿದ್ಧ?

2) ಪ್ರಾಚೀನ ನಾಗರೀಕತೆಗೆ ಸಂಬಂಧಿಸಿದ ಒಂದು ವಿಶ್ವವಿಖ್ಯಾತ ನಗರಾವಶೇಷ ‘ಮಚ್ಚು ಪಿಚ್ಚು’ ಚಿತ್ರ – 2ರಲ್ಲಿದೆ.
ಅ) ಈ ನಗರವನ್ನು ನಿರ್ಮಿಸಿದ ‘ನಾಗರಿಕತೆ’ ಯಾವುದು?
ಬ) ಈ ನಿರ್ಮಾಣ ಯಾವ ಖಂಡದ ಯಾವ ರಾಷ್ಟ್ರದಲ್ಲಿದೆ?

3) ಜಗತ್ಪ್ರಸಿದ್ಧ ಅಗ್ನಿಪರ್ವತ ‘ಫ್ಯೂಜಿಯಾಮಾ’ದ ಹಿನ್ನೆಲೆಯಲ್ಲಿ ನಿಂತಿರುವ ಆಧುನಿಕ ನಗರದ ದೃಶ್ಯವೊಂದು ಚಿತ್ರ – 5ರಲ್ಲಿದೆ.
ಅ) ಇದು ಯಾವ ದೇಶದಲ್ಲಿರುವ ನಗರ?
ಬ) ಆ ದೇಶದ ರಾಜಧಾನಿ ಯಾವುದು?

4) ಭಾರೀ ಕ್ಷುದ್ರಗ್ರಹವೊಂದು ಇತ್ತೀಚೆಗೆ ಧರೆಯತ್ತ ಎರಗಿ ಸ್ಫೋಟಗೊಂಡದ್ದು ಗೊತ್ತಲ್ಲ? ಆ ಘಟನೆ ಸಂಭವಿಸಿದ ರಾಷ್ಟ್ರ ಇವುಗಳಲ್ಲಿ ಯಾವುದು?
ಅ) ಕೆನಡ
ಬ) ರಷಿಯ
ಕ) ನೈಜೀರಿಯಾ
ಡ) ಅರ್ಜಂಟೈನಾ

5) ಕಡಲಲ್ಲಿ ಸಾಗುತ್ತಿರುವ ವಿಶಿಷ್ಟ ಹಡಗು ಚಿತ್ರ – 5ರಲ್ಲಿದೆ. ಈ ಹಡಗಿಗೆ ಚಾಲನ ಶಕ್ತಿಯನ್ನು ಒದಗಿಸುವ ‘ಶಕ್ತಿಮೂಲ’ ಇವುಗಳಲ್ಲಿ ಯಾವುದು?
ಅ) ಕಲ್ಲಿದ್ದಿಲು
ಬ) ಡೀಸೆಲ್‌
ಕ) ಸೌರಶಕ್ತಿ
ಡ) ಮಾರುತ ಶಕ್ತಿ
ಇ) ಪರಮಾಣು ಶಕ್ತಿ

6) ಅತ್ಯಂತ ಎತ್ತರಕ್ಕೆ ಬೆಳೆಯುವ ವೃಕ್ಷ ಮತ್ತು ಅತ್ಯಂತ ದೀರ್ಘಕಾಲ ಬದುಕುವ ವೃಕ್ಷ ವಿಧಗಳು ಕ್ರಮವಾಗಿ ಚಿತ್ರ – 6 ಮತ್ತು ಚಿತ್ರ – 7ರಲ್ಲಿವೆ. ಇವುಗಳನ್ನು ಕೆಳಗಿನ ಪಟ್ಟಿಯಲ್ಲಿ ಗುರುತಿಸಿ:
ಅ) ಸಿಡಾರ್‌
ಬ) ತೇಗ
ಕ) ದೇವನಾರು
ಡ) ಪೈನ್‌
ಇ) ನೀಲಗಿರಿ
ಈ) ಅಶೋಕ
ಉ) ಸೆಕ್ಟೋಯಾ
ಟ) ಆಲವೃಕ್ಷ

7) ಸುಂದರ ಅಲಂಕಾರದ ಸುಪ್ರಸಿದ್ಧ ಹಕ್ಕಿಯೊಂದು ಚಿತ್ರ – 8ರಲ್ಲಿದೆ. ಯಾವುದು ಈ ಹಕ್ಕಿ?
ಅ) ರಾಜಹಂಸ
ಬ) ಸ್ವರ್ಗಪಕ್ಷಿ
ಕ) ಹಳದಿ ವಾರ್ಬ್ಲರ್‌
ಡ) ಕುಂಜಪಕ್ಷಿ

8) ಉಪನದಿಗಳನ್ನು ಬಿಟ್ಟು ಧರೆಯ ಬಹುಪಾಲು ಎಲ್ಲ ನದಿಗಳೂ ಅಂತಿಮವಾಗಿ ಕಡಲನ್ನೇ ಸೇರುತ್ತದೆ (ಚಿತ್ರ – 9). ಅದಕ್ಕೆ ಕಾರಣ ಏನು?
ಅ) ನೆಲಾವಾರಕ್ಕಿಂತ ಸಾಗರಾವಾರವೇ ಬಹಳ ವಿಶಾಲ
ಬ) ನದಿಗಳ ನೀರನ್ನೆಲ್ಲ ಸ್ವೀಕರಿಸುವ ಸಾಮರ್ಥ್ಯ ಸಾಗರಕ್ಕಿದೆ.
ಕ) ಸಾಗರಾವಾರಕ್ಕಿಂತ ತಗ್ಗಿನ ಭೂ ಮೇಲ್ಮೈ ಪ್ರದೇಶ ಬೇರಾವುದೂ ಇಲ್ಲ.
ಡ) ಎಲ್ಲ ಭೂ ಖಂಡಗಳ ಅಂಚುಗಳೂ ಸಾಗರಗಳಿಗೆ ಹೊಂದಿ ಹರಡಿವೆ.

9) ತೀವ್ರ ಚಳಿಯ ಪ್ರದೇಶಗಳಲ್ಲೂ ಸಾಗರಗಳು ಸಂಪೂರ್ಣ ಹಿಮರೂಪ ತಾಳುವುದಿಲ್ಲ (ಚಿತ್ರ – 10). ಅದಕ್ಕೆ ಕಾರಣ ಏನು?
ಅ) ಸಾಗರಗಳಲ್ಲಿ ನೀರಿನ ಪ್ರಮಾಣ ಬಹಳ ಹೆಚ್ಚು
ಬ) ಸಾಗರದಲ್ಲಿ ಅಲೆಗಳು ನಿರಂತರ
ಕ) ಸಾಗರದಲ್ಲಿ ಉಷ್ಣೋದಕ ಪ್ರವಾಹಗಳಿವೆ
ಡ) ಸಾಗರದಲ್ಲಿ ಲವಣ ಜಲ ತುಂಬಿದೆ

10) ಬಿಸಿ ಮರುಭೂಮಿಯೊಂದರಲ್ಲಿ ಅರಳಿ ನಿಂತಿರುವ ಸುಂದರ ಕುಸುಮಗಳು ಚಿತ್ರ – 11ರಲ್ಲಿವೆ. ಇವು ಯಾವ ಸಸ್ಯದ ಹೂಗಳು ನಿರ್ಧರಿಸಬಲ್ಲಿರಾ?
ಅ) ಜರೀ ಗಿಡ
ಬ) ಕಳ್ಳಿ ಗಿಡ
ಕ) ತಾಳೆ ಗಿಡ
ಡ) ಹುಲ್ಲು ಗಿಡ

11) ಇಬ್ಬರು ವಿಶ್ವವಿಖ್ಯಾತ ವಿಜ್ಞಾನಿಗಳ ಭಾವ ಚಿತ್ರಗಳು 12 ಮತ್ತು – 13ರಲ್ಲಿವೆ. ಇವರು ಯಾರು? ಈ ಪಟ್ಟಿಯಲ್ಲಿ ಗುರುತಿಸಿ:
ಅ) ಗೆಲಿಲಿಯೋ
ಬ) ನ್ಯೂಟನ್‌
ಕ) ಡಾರ್ವಿನ್‌
ಡ) ಮ್ಯಾಕ್ಸ್ ಪ್ಲಾಂಕ್‌
ಇ) ಎಡ್ವಿನ್‌ ಹಬಲ್‌
ಈ) ಸ್ಟೀಫನ್‌ ಹಾಕಿಂಗ್‌
ಉ) ಕಾರ್ಲ್ ಸಾಗನ್‌
ಟ) ಹೈಸೆನ್‌ ಬರ್ಗ್

ಉತ್ತರಗಳು
1) ಅ – ಆಫ್ರಿಕ;
   ಬ – ಸಹರಾ, ನಾಮಿಬ್‌ ಮತ್ತು ಕಲಹಾರಿ;
   ಕ – ದಕ್ಷಿಣ ಆಫ್ರಿಕ
2) ಅ – ‘ಇಂಕಾ’ ನಾಗರಿಕತೆ;
   ಬ – ದಕ್ಷಿಣ ಅಮೆರಿಕದ ‘ಪೆರು’ ರಾಷ್ಟ್ರ
3) ಅ – ಜಪಾನ್‌;
   ಬ – ಟೋಕಿಯೋ
4) ಬ – ರಷಿಯ
5) ಡ – ಮಾರುತ ಶಕ್ತಿ
6) (ಚಿತ್ರ – 6) ಸೆಕ್ಪೋಯಾ; (ಚಿತ್ರ – 7) ಪೈನ್‌
7) ಬ – ಸ್ವರ್ಗ ಪಕ್ಷಿ
8) ಕ – ಸಾಗರಮಟ್ಟವೇ ಅತ್ಯಂತ ತಗ್ಗು
9) ಡ – ಲವಣ ಜಲ
10) ಬ – ಕಳ್ಳಿ ಗಿಡ
11) (ಚಿತ್ರ – 12), ನ್ಯೂಟನ್‌
     (ಚಿತ್ರ – 13) ಸ್ಟೀಫನ್‌ ಹಾಕಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT