ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿದ್ಯಾರ್ಥಿ ಮೇಲೆ ಹಲ್ಲೆ: ಬಂಧನ

Last Updated 22 ಸೆಪ್ಟೆಂಬರ್ 2014, 20:03 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಿ ವಿದ್ಯಾರ್ಥಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆ­ಸಿ­ರುವ ಘಟನೆ ಕಮ್ಮನಹಳ್ಳಿಯಲ್ಲಿ ಭಾನು­ವಾರ ರಾತ್ರಿ ನಡೆದಿದ್ದು, ಪ್ರಕರಣ ಸಂಬಂಧ ಇಬ್ಬರು ಯುವಕ­ರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಕಮ್ಮನಹಳ್ಳಿಯ ಸುನಿಲ್‌ (23) ಮತ್ತು ಕಿರಣ್‌ (20) ಬಂಧಿತರು. ಆರೋಪಿಗಳು ಪಾನಮತ್ತರಾಗಿ ಸ್ನೇಹಿತರ ಜತೆ ಸೇರಿ ಐವರಿ ಕೋಸ್ಟ್‌ ದೇಶದ ಅಮರ್‌ ಖಾಸೀಂ ಅಲಿಯ (24) ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದರು.

ಹೊರಮಾವು ಬಳಿ ವಾಸವಾಗಿರುವ ಅಮರ್‌, ನಗರದ ಖಾಸಗಿ ಕಾಲೇ­ಜಿನಲ್ಲಿ ಬಿಬಿಎಂ ಓದುತ್ತಿದ್ದಾರೆ. ಅವರು ಸ್ನೇಹಿತನ ಹುಟ್ಟುಹಬ್ಬ ಆಚರಿಸಿ, ಇಬ್ಬರು ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಆರೋಪಿಗಳು ಅವರ ಬೈಕನ್ನು ಅಡ್ಡಗಟ್ಟಿ ಸಿಗರೇಟ್‌ ಕೊಡುವಂತೆ ವಾಗ್ವಾದ ನಡೆಸಿ ಜಗಳವಾಡಿದ್ದಾರೆ. ನಂತರ ಅಮರ್‌ ತಲೆಗೆ ಹೊಡೆದು ಪರಾ­ರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಅಮರ್‌ ಅವರು ಠಾಣೆಗೆ ರಾತ್ರಿಯೇ ದೂರು ನೀಡಿದ್ದರು. ಆ ದೂರು ಆಧರಿಸಿ ಸುನಿಲ್‌ ಮತ್ತು ಕಿರಣ್‌ನನ್ನು ಬಂಧಿಸಲಾಗಿದೆ. ಅವರಿಬ್ಬರೂ ಬಿಪಿಓ ಕಂಪೆನಿಯ ಉದ್ಯೋಗಿಗಳಾಗಿದ್ದರು. ಅವರ ಸಹಚರರು ಪರಾರಿಯಾ ಗಿದ್ದಾರೆ. ಬಂಧಿತರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT