ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳು, ಪ್ರವಾಸಿಗರ ಪಡಿಪಾಟಲು

Last Updated 7 ಅಕ್ಟೋಬರ್ 2015, 6:59 IST
ಅಕ್ಷರ ಗಾತ್ರ

ಕೂಡಲಸಂಗಮ:  ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿರುವ ಕೂಡಲಸಂಗಮಕ್ಕೆ ಪ್ರತಿದಿನವೂ ನೂರಾರು ಜನ ಪ್ರವಾಸಿಗರು ಭೇಟಿ ನೀಡುತ್ತಾರೆ. ಸ್ವಂತ ವಾಹನಗಳಿಲ್ಲದ ಸಾಮಾನ್ಯ ಪ್ರವಾಸಿಗರು  ಶ್ರೀಕ್ಷೇತ್ರವನ್ನು ತಲುಪಲು ಹರಸಾಹಸ ಮಾಡಬೇಕಾದ ಸ್ಥಿತಿ ಎದುರಾಗಿದೆ.

‘ಸಂಜೆಯಾದರೆ ಕೂಡಲಸಂಗಮಕ್ಕೆ ಬರಬೇಡಿ’ ಎನ್ನುವ ಮಾತು ಇಲ್ಲಿ ಸಾಮಾನ್ಯವಾಗಿದೆ. ದೂರದ ಊರು ಗಳಿಂದ ಕೂಡಲಸಂಗಮಕ್ಕೆ ಬರುವ ಪ್ರವಾಸಿಗರು ಸಂಜೆ 7 ಗಂಟೆಯಾದರೆ ಇದ್ದ ಊರಲ್ಲೇ ಉಳಿದುಕೊಳ್ಳಬೇಕು. ಇಲ್ಲವಾದರೆ ಬಾಗಲಕೋಟೆ, ಹುನ ಗುಂದ ಅಥವಾ ಆಲಮಟ್ಟಿಯಲ್ಲಿ ವಾಸ್ತವ್ಯ ಮಾಡಿ, ಮರುದಿನ ತಮ್ಮ ಪ್ರವಾಸ ಕಾರ್ಯಕ್ರಮ ಮುಂದುವರಿಸು ವುದು ಅನಿವಾರ್ಯ.

ಬೆಳಿಗ್ಗೆ ಕೂಡಲಸಂಗಮಕ್ಕೆ ಬಂದು ಸಂಜೆ ಹೋಗಬೇಕು ಎನ್ನುವ ಪ್ರವಾ ಸಿಗರು, ಮಧ್ಯಾಹ್ನವೇ ಜಾಗ ಖಾಲಿ ಮಾಡಬೇಕಾಗಿದೆ. ಸಂಜೆಯಾದರೆ ಬೇರೆ ಊರುಗಳಿಗೆ ಹೋಗುವುದಕ್ಕೆ ಅನು ಕೂಲವಿಲ್ಲ. ಎಷ್ಟೇ ತುರ್ತು ಕೆಲಸವಿದ್ದರೂ ರಾತ್ರಿ ಅಲ್ಲಿ ವಾಸ್ತವ್ಯ ಮಾಡಲೇಬೇಕು. ಇಲ್ಲವಾದರೆ ಬಾಡಿಗೆ ವಾಹನದಲ್ಲಿ ಹೋಗಬೇಕು.  ಬಾಗಲಕೋಟೆಯಿಂದ ಕೂಡಲ ಸಂಗಮಕ್ಕೆ ಬೆಳಿಗ್ಗೆ 8 ಗಂಟೆ ವರೆಗೆ, ಸಂಜೆ 5 ಗಂಟೆಗೆ ಬಿಟ್ಟರೆ 7.30ಕ್ಕೆ ಒಂದು ಬಸ್‌ ವ್ಯವಸ್ಥೆಯಿದೆ. ಅದು ತಪ್ಪಿ ದರೆ ಬಸ್‌ ಸೌಲಭ್ಯ ಇಲ್ಲ. ಹೀಗಾಗಿ ದೂರ ದ ಊರುಗಳಿಂದ ಬರುವ ಭಕ್ತರು, ಪ್ರವಾಸಿಗರು, ಸ್ಥಳೀಯ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಕೂಡಲಸಂಗಮ ಮಾತ್ರವಲ್ಲ. ಈ ಮಾರ್ಗದಲ್ಲಿರುವ ಕೆಂಗಲ್ಲ, ಕಜಗಲ್ಲ, ವರಗೋಡದಿನ್ನಿ, ಹೂವನೂರ, ನಂದ ನೂರ, ಗಂಜಿಹಾಳ, ಬೇವೂರ, ಹಳ್ಳೂರ ಮುಂತಾದ ಗ್ರಾಮಗಳ ವಿದ್ಯಾರ್ಥಿಗಳು ಬಾಗಲಕೋಟೆಯಲ್ಲಿ ಶಾಲೆ, ಕಾಲೇಜು ಮುಗಿಸಿ, ಸ್ವಲ್ಪ ತಡವಾದರೂ ಖಾಸಗಿ ವಾಹನಗಳ ದುಂಬಾಲು ಬೀಳಬೇಕಾಗು ತ್ತದೆ. ಈ ರಸ್ತೆಯಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿದಿನ ಬಾಗಲ ಕೋಟೆಗೆ ಹೋಗಿ ಬರುತ್ತಾರೆ. ವಿದ್ಯಾರ್ಥಿ ಗಳಿಗೆ ಮತ್ತು ಪ್ರವಾಸಿಗರ ಅನುಕೂಲ ಕ್ಕಾಗಿ ಸಂಜೆ ಮತ್ತು ಬೆಳಗಿನ ಶಾಲೆ, ಕಾಲೇಜಿಗೆ ಅನುಕೂಲವಾಗುವಂತೆ ಬಸ್‌ ಸಂಚಾರ ಸೌಲಭ್ಯ ಒದಗಿಸುವಂತೆ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಇನ್ನು ಹುನಗುಂದ, ಇಳಕಲ್‌, ವಿಜಯಪುರ, ಆಲಮಟ್ಟಿ ಕಡೆ ಯಿಂದಲೂ ಬಸ್‌ ಸೌಲಭ್ಯ ಇಲ್ಲದೆ ಸಮಸ್ಯೆಯಾಗುತ್ತಿದೆ. ಈ ಹಿಂದೆ ಇಳಕಲ್‌ ಮಾರ್ಗವಾಗಿ ಲಿಂಗಸೂಗೂರಿಗೆ ಹೋಗುವ ಬಸ್‌ ಇತ್ತು. ಅದನ್ನೂ ಈಗ ನಿಲ್ಲಿಸಲಾಗಿದೆ. ಇದೆಲ್ಲದರ ಪರಿಣಾಮ ವಾಗಿ ಪ್ರವಾಸಿಗರು ತೊಂದರೆಗೆ ಸಿಲುಕುತ್ತಿದ್ದಾರೆ. ಸಂಜೆ ಬಾಗಲಕೋಟೆ ಮತ್ತು ಇಳಕಲ್‌ಗೆ ಹೋಗುವ ಬಸ್‌ ತಪ್ಪಿದರೆ ಅಥವಾ ಬಸ್‌ ಬಾರದಿದ್ದರೂ ಸಮಸ್ಯೆ ತಪ್ಪಿದ್ದಲ್ಲ. ‘ಪ್ರವಾಸಿಗರು, ಭಕ್ತರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಳಿಗ್ಗೆ ಮತ್ತು ಸಂಜೆ ಹೆಚ್ಚುವರಿ ಬಸ್‌ ಸಂಚಾರ ಸೌಲಭ್ಯ ಒದಗಿಸಬೇಕು’ ಎಂಬುದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಗೌಡರ ಅವರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT