ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಮೇಲೆ ಹಲ್ಲೆ; ವ್ಯಾಪಾರಿಗಳ ಸೆರೆ

ಕನ್ನಡ ಬರು­ವು­ದಿಲ್ಲ ಎಂದು ಭಾವಿಸಿ ನಿಂದಿಸಿದ್ದೇ ಘಟನೆಗೆ ಕಾರಣ
Last Updated 29 ಮೇ 2015, 20:05 IST
ಅಕ್ಷರ ಗಾತ್ರ

ಬೆಂಗಳೂರು: ಈಶಾನ್ಯ ರಾಜ್ಯದ ವಿದ್ಯಾರ್ಥಿ­ಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಹಣ್ಣು ವ್ಯಾಪಾರಿಗಳನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಮಾರೇನಹಳ್ಳಿಯ ಲೋಕೇಶ್, ಚಂದ್ರಾ ಲೇಔಟ್‌ನ ರಘು ಹಾಗೂ ಬ್ಯಾಡರ­ಹಳ್ಳಿಯ ಮೋಹನ್‌ಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ಆರೋ­ಪಿ­ಗಳು, ಗುರುವಾರ ರಾತ್ರಿ ಮಿಜೋರಾಂ ಮೂಲದ ಲಾಲ್‌ ಮಾಂಟುಯಾ (19) ಹಾಗೂ ಲಾಲ್ ಮಂಗೈಸಿಯಾ (19) ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿಗಳ  ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪಾಪರೆಡ್ಡಿ ಲೇಔಟ್‌ನಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ರಾತ್ರಿ 11ರ ಸುಮಾರಿಗೆ ಮನೆಗೆ ಮರಳುತ್ತಿದ್ದಾಗ ಆ ಮಾರ್ಗ ನಿಂತಿದ್ದ ಆರೋಪಿಗಳು, ಕನ್ನಡ ಬರು­ವು­ದಿಲ್ಲ ಎಂದುಕೊಂಡು ಅವರನ್ನು ನಿಂದಿ­ಸಿದ್ದಾರೆ. ಆದರೆ, ಸ್ವಲ್ಪ ಕನ್ನಡ ಬಲ್ಲ­ವ­ರಾದ ಮಂಗೈಸಿಯಾ ಜಗಳಕ್ಕೆ ಮುಂದಾ­ಗಿದ್ದಾರೆ. ಈ ವೇಳೆ ವ್ಯಾಪಾರಿ­ಗಳು, ಅವರನ್ನು ಕೆಳಗೆ ತಳ್ಳಿ ಹಲ್ಲೆ ನಡೆಸಿದ್ದಾರೆ.

ನಂತರ ಪರಾರಿಯಾಗುವ ಯತ್ನದ­ಲ್ಲಿದ್ದ ಅವರನ್ನು ಗಸ್ತಿನಲ್ಲಿದ್ದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿ– ಸಾವು: ಬಾಣಸವಾಡಿ ಪಂಚಮುಖಿ ಗಣೇಶ ದೇವ­ಸ್ಥಾನದ ಬಳಿ ಗುರುವಾರ ರಾತ್ರಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ಕೆ.ಜಾಯ್ (60) ಎಂಬುವರು ಮೃತಪಟ್ಟಿದ್ದಾರೆ.

ಚಿಕ್ಕ ಬಾಣಸವಾಡಿ ನಿವಾಸಿಯಾದ ಜಾಯ್, ಊಟ ಮುಗಿಸಿ ರಾತ್ರಿ 9 ಗಂಟೆ ಸುಮಾರಿಗೆ ಪತ್ನಿ ಲಲಿತಾ ಜತೆ ವಾಯು­ವಿಹಾರ ಮಾಡುತ್ತಿದ್ದರು. ಮನೆಗೆ ವಾಪ­ಸಾ­ಗಲು ರಸ್ತೆ ದಾಟುತ್ತಿದ್ದ ಅವರಿಗೆ ಸೇವಾ­ನಗರ ಕಡೆಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆಯಿತು. ಘಟನೆ­ಯಲ್ಲಿ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಲಲಿತಾ ಪತಿಯನ್ನು ಆಟೊದಲ್ಲಿ ಸಮೀ­ಪದ ಆಸ್ಪತ್ರೆಗೆ ಕರೆದೊಯ್ದರು.

ನಂತರ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸಲಾಯಿತಾದರೂ  ಮಾರ್ಗ ಮಧ್ಯೆ ಜಾಯ್ ಕೊನೆಯುಸಿರೆಳೆದರು. ಬೈಕ್ ಸವಾರನನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಾಣಸವಾಡಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT