ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿಯರಿಂದ ‘ರೈಸ್‌ ಬಕೆಟ್‌ ಚಾಲೆಂಜ್’

ಬುಡಕಟ್ಟು ಸಮುದಾಯಕ್ಕೆ ನೆರವು ಉದ್ದೇಶ
Last Updated 1 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ‘ಐಸ್‌ ಬಕೆಟ್ ಚಾಲೆಂಜ್‌’ನಿಂದ ಸ್ಫೂರ್ತಿ­ಗೊಂಡ ಕೇರಳದ ಶಾಲೆಯೊಂದರ ವಿದ್ಯಾರ್ಥಿನಿಯರು ಅದಕ್ಕೆ ಪರ್ಯಾಯ­ವಾಗಿ ‘ರೈಸ್‌ ಬಕೆಟ್‌ ಚಾಲೆಂಜ್‌’ ಆಂದೋಲನವನ್ನು ಆರಂಭಿಸಿದ್ದಾರೆ.

ರಾಜ್ಯದ ಬುಡಕಟ್ಟು ಸಮುದಾಯ­ಗಳಿಗೆ ನೆರವು ನೀಡುವ ಉದ್ದೇಶದಿಂದ ನಗರದ ‘ಕಾರ್ಮೆಲ್ ಗರ್ಲ್ಸ್ ಸೆಕೆಂಡರಿ ಸ್ಕೂಲ್‌‘ನ ವಿದ್ಯಾರ್ಥಿನಿಯರು ಈ ಆಂದೋಲನವನ್ನು ಆರಂಭಿಸಿದ್ದು, ಇದುವರೆಗೂ 1,500 ಕೆ.ಜಿ ಅಕ್ಕಿ, 220 ಕೆ.ಜಿ ಕಡಲೆ ಬೇಳೆ, 150 ಕೆ.ಜಿ ಬಟಾಣಿ ಸೇರಿದಂತೆ ಇನ್ನಿತರ ಗೃಹೋಪಯೋಗಿ ಸರಕುಗಳನ್ನು ಸಂಗ್ರಹಿಸಿದ್ದಾರೆ.

‘ಸಂಗ್ರಹಿಸಲಾಗಿರುವ ಆಹಾರ ಪದಾರ್ಥ­ಗಳನ್ನು ಅಟ್ಟಾಪಾಡಿಯ ಪಾಲಕ್ಕಾಡ್, ಅಂಬೂರ್, ಕೊಟ್ಟೂರ್ ಸೇರಿದಂತೆ ಇತರ ಭಾಗಗಳಲ್ಲಿರುವ ಬುಡಕಟ್ಟು ಸಮುದಾಯಗಳ ಜನರಿಗೆ ವಿತರಿಸಲಾಗುವುದು. ವಿದ್ಯಾರ್ಥಿನಿ­ಯ­ರಲ್ಲಿ ಸಾಮಾಜಿಕ ಜವಾಬ್ದಾರಿ ಬಿತ್ತುವ ದೃಷ್ಟಿಯಿಂದ, ‘ಕುಟುಂಬಶ್ರೀ’ ಎಂಬ ಸಂಸ್ಥೆಯ ನೆರವಿ­ನಿಂದ ‘ರೈಸ್‌ ಬಕೆಟ್‌ ಚಾಲೆಂಜ್‌’ ಆಂದೋ­ಲನ ಆರಂಭಿಸಲಾಗಿದೆ’ ಎಂದು ಶಾಲೆಯ ಪಾಂಶುಪಾಲರಾದ ಸಿಸ್ಟರ್ ಹೆಲ್ಮ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT