ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿಯರಿಗೆ ಸಮರಕಲೆ: ಅಖಿಲೇಶ್‌

Last Updated 17 ಜೂನ್ 2014, 19:30 IST
ಅಕ್ಷರ ಗಾತ್ರ

ಖನೌ (ಪಿಟಿಐ):ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ತಡೆ­ಯಲು ಮುಂದಾಗಿರುವ ಉತ್ತರ­ಪ್ರದೇಶ ಸರ್ಕಾರ, ಶಾಲಾ– ಕಾಲೇಜು­ಗಳಲ್ಲಿ ವಿದ್ಯಾರ್ಥಿನಿಯರಿಗೆ ಸಮರಕಲೆ ತರಬೇತಿ ನೀಡಲು ನಿರ್ಧರಿಸಿದೆ.

ಇಲ್ಲಿ ಮಂಗಳವಾರ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಮಹಿಳಾ ಸಹಾಯವಾಣಿ ‘1090’ ಪರಿಶೀಲಿಸಿದ  ನಂತರ ಮಾತನಾಡಿದ ಮುಖ್ಯಮಂತ್ರಿ ಅಖಿಲೇಶ್‌ ಯಾದವ್,  ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿನಿಯರಿಗೆ ಸಮರಕಲೆ ತರ­ಬೇತಿ ನೀಡಲು ಕ್ರಮ ಕೈಗೊ­ಳ್ಳು­ವಂತೆ ಸರ್ಕಾರದ ಮುಖ್ಯ ಕಾರ್ಯ­ದರ್ಶಿ ಅಲೋಕ್ ರಂಜನ್ ಅವರಿಗೆ ಸೂಚಿಸಿದರು.

ಯಾವುದೇ ರೀತಿಯ ಕಿರುಕುಳ, ಅವಾಚ್ಯ ಶಬ್ದಗಳಿಂದ ಕರೆಯುವುದು ಹಾಗೂ ಯಾರಾದರೂ ತಮ್ಮನ್ನು ಅನುಮಾನಾಸ್ಪದವಾಗಿ ಹಿಂಬಾಲಿಸಿದರೆ,  ಕೂಡಲೇ ಮಹಿಳೆ­ಯರು ಸರ್ಕಾರ ಆರಂಭಿಸಿರುವ ಈ ಮಹಿಳಾ ಸಹಾಯವಾಣಿಗೆ (ಸಂಖ್ಯೆ– 1090)  ಕರೆ ಮಾಡಿ ದೂರು ದಾಖಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT