ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ ಚುನಾವಣೆ-2015

Last Updated 30 ಡಿಸೆಂಬರ್ 2015, 19:58 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಹಲವು ಆಸಕ್ತಿಕರ ಅಂಶಗಳು ಇಲ್ಲಿವೆ.

*ಎಂಟರಲ್ಲಿ ಒಂದೂ ಗೆಲ್ಲದ ಮಹಿಳೆಯರು

3,981- ಅಭ್ಯರ್ಥಿಯೊಬ್ಬರು (ವಿವೇಕ ರಾವ್ ಪಾಟೀಲ) ಪಡೆದ ಹೆಚ್ಚು ಮತ 

ಮುಖಂಡರು ಹೇಳಿದ್ದು...

*ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ 20 ಸ್ಥಾನಗಳಲ್ಲಿ ಜಯ ಗಳಿಸಲಿದೆ - ಸಿದ್ದರಾಮಯ್ಯ, ಮುಖ್ಯಮಂತ್ರಿ (ಚುನಾವಣೆಗೂ ಮೊದಲು)
*ಹಾಸನದಲ್ಲಿ ಪಕ್ಷಕ್ಕೆ ದೊರೆತಿರುವುದು ಐತಿಹಾಸಿಕ ಜಯ. ಅನಿರೀಕ್ಷಿತ ಫಲಿತಾಂಶ ತರುವುದಾಗಿ ಕಾರ್ಯಕರ್ತರು ಹೇಳಿದ್ದರು. ಅದನ್ನು ಮಾಡಿ ತೋರಿಸಿದ್ದಾರೆ - ಸಿದ್ದರಾಮಯ್ಯ, ಮುಖ್ಯಮಂತ್ರಿ (ಚುನಾವಣೆ ನಂತರ)
                                  ________

*20 ಸ್ಥಾನಗಳಲ್ಲಿ ಕಾಂಗ್ರೆಸ್‌ ಜಯ ಗಳಿಸಲಿದೆ. ತುಮಕೂರಿನಲ್ಲಿ ಪ್ರಚಂಡ ಗೆಲುವು ಸಾಧಿಸಲಿದೆ - ಡಾ. ಜಿ. ಪರಮೇಶ್ವರ್, ಗೃಹಸಚಿವ (ಚುನಾವಣೆಗೂ ಮೊದಲು)

*ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷ ನೀಡಿದ ಭರವಸೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ. ಇದು ಗ್ರಾಮೀಣ ಜನರಿಗೆ ತಲುಪಿದೆ ಎನ್ನುವು ದನ್ನು ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ ನಿರೂಪಿಸಿದೆ -ಡಾ. ಜಿ. ಪರಮೇಶ್ವರ್, ಗೃಹಸಚಿವ (ಚುನಾವಣೆ ನಂತರ)
                                     ________
*ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸುತ್ತದೆ ಎಂಬ ವಿಶ್ವಾಸವಿದೆ- ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ(ಚುನಾವಣೆಗೂ ಮೊದಲು)
*ಶಿವಮೊಗ್ಗದಲ್ಲಿ ಸಿದ್ದರಾಮಣ್ಣ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಸರ್ವಾನು ಮತದಿಂದ ಆಯ್ಕೆ ಮಾಡಲಾಗಿತ್ತು. ನಾನು ವಿರೋಧಿಸಿದ್ದೇನೆ  ಎನ್ನುವುದು ಸುಳ್ಳು. ಸೋಲಿನ ಬಗ್ಗೆ ಪರಾಮರ್ಶೆ ನಡೆಸುತ್ತೇವೆ -ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ (ಚುನಾವಣೆ ನಂತರ)                   
                                    ________

*ಪಕ್ಷದ ನಾಯಕರು ನನಗೆ ಟಿಕೆಟ್‌ ನೀಡುತ್ತಾರೆ ಎಂಬ ವಿಶ್ವಾಸವಿತ್ತು. ಟಿಕೆಟ್‌ ಸಿಗದಿರುವಾಗ ಬಂಡಾಯ ಅನಿ ವಾರ್ಯವಾಗಿದೆ. ಟಿಕೆಟ್‌ ಸಿಗದಿರುವ ಕಾರಣಗಳ ಬಗ್ಗೆ ಚುನಾವಣಾ ಫಲಿತಾಂಶದ ನಂತರ ಮಾತನಾಡುತ್ತೇನೆ -ಬಸವನಗೌಡ ಯತ್ನಾಳ, ಬಿಜೆಪಿ ಬಂಡಾಯ ಅಭ್ಯರ್ಥಿ(ಚುನಾವಣೆಗೂ ಮೊದಲು)

*‘ನಾನು ಎಂದೂ ದೊಡ್ಡವನಲ್ಲ, ನನ್ನನ್ನು ಬೆಳೆಸಿದ, ನಾಯಕನನ್ನಾಗಿ ರೂಪಿಸಿದ ಬಿಜೆಪಿ ದೊಡ್ಡದು. ನನ್ನ ಗೆಲುವು ಅಭಿಮಾನಿಗಳ ಗೆಲುವು. ನನಗಾಗಿ ಅಹೋರಾತ್ರಿ ಶ್ರಮಿಸಿದ ಕಾರ್ಯಕರ್ತ ಪಡೆಯ ಗೆಲುವು. ಇದು ಹಿರಿಯರು–ಹಿತೈಷಿಗಳ ಆಶೀರ್ವಾದದ ಫಲ’...-ಬಸವನಗೌಡ ಯತ್ನಾಳ, ಜಯಿಸಿದ ಬಿಜೆಪಿ ಬಂಡಾಯ ಅಭ್ಯರ್ಥಿ(ಚುನಾವಣೆ ನಂತರ)

                                ___________
*15 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ- ಜಗದೀಶ್‌ ಶೆಟ್ಟರ್, ವಿರೋಧಪಕ್ಷದ  ನಾಯಕ (ಚುನಾವಣೆಗೂ ಮೊದಲು)
*2–3 ಕ್ಷೇತ್ರದ ಫಲಿತಾಂಶ ನಿರಾಶೆ ಉಂಟು ಮಾಡಿರುವುದು ನಿಜ. ಹಣದ ಪ್ರಭಾವ, ಅಧಿಕಾರದ ದುರುಪಯೋಗ ದಿಂದ ಕೆಲವು ಕಡೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ- ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ (ಚುನಾವಣೆಯ ಬಳಿಕ)
                                
_________

*ಕಾಂಗ್ರೆಸ್‌ ಪಕ್ಷ,  ಬಿಜೆಪಿಗಿಂತ ಒಂದು ಸ್ಥಾನ ಹೆಚ್ಚಿಗೆ ಗಳಿಸಿದರೂ ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇವೆ- ಕೆ.ಎಸ್‌.ಈಶ್ವರಪ್ಪ, ವಿಧಾನಪರಿಷತ್‌ ವಿರೋಧಪಕ್ಷದ ನಾಯಕ (ಚುನಾವಣೆಗೂ ಮೊದಲು) 

*ಈಶ್ವರಪ್ಪ ಅವರು ಆಡಿದ ಮಾತಿಗೆ ಗೌರವ ಕೊಡುವುದಾದರೆ ಹೇಳಿದಂತೆ ನಡೆದುಕೊಳ್ಳಲಿ - ಸಿದ್ದರಾಮಯ್ಯ, ಮುಖ್ಯಮಂತ್ರಿ (ಚುನಾವಣೆ ನಂತರ)

ಫಲಿತಾಂಶ ಸಮಾಧಾನ ತಂದಿಲ್ಲ. ಇನ್ನೂ ನಾಲ್ಕು ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇತ್ತು.  ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಮ್ಮ ಮುಂದಿನ ಗುರಿ - ಸಿ.ಟಿ. ರವಿ, ಬಿಜೆಪಿ ಶಾಸಕ (ಚುನಾವಣೆಯ ನಂತರ)

                ______

ನಾನು ಪ್ರಧಾನಿಯಾಗಿ, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮತ್ತು ಎಚ್‌.ಡಿ. ರೇವಣ್ಣ ಮಂತ್ರಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಪರಿಗಣಿಸಿ ಜನಪ್ರತಿನಿಧಿಗಳು ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ -ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ (ಚುನಾವಣೆಗೆ ಮುನ್ನ)
*ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷದ  ಸೋಲು ಆಘಾತ ತಂದಿದೆ.          ಯಾವುದೇ ಕಾರಣಕ್ಕೂ ಈ ಎರಡು ಕ್ಷೇತ್ರಗಳಲ್ಲಿ  ಪಕ್ಷ ಸೊಲುವ ಸಾಧ್ಯತೆಯೇ ಇಲ್ಲ. ಪಕ್ಷದ ನಾಯಕರಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ - ಚೆಲುವರಾಯ ಸ್ವಾಮಿ, ಜೆಡಿಎಸ್‌ ಶಾಸಕ (ಚುನಾವಣೆಯ ಬಳಿಕ)

                             ________

*ಕಾಂಗ್ರೆಸ್‌ ಪಕ್ಷದ  ಬೆಂಬಲಿಗರು ಸೇರಿದಂತೆ ಪಕ್ಷಾತೀತವಾಗಿ ಎಲ್ಲ ಮತದಾರರೂ ನನ್ನನ್ನು ಬೆಂಬಲಿಸ ಲಿದ್ದಾರೆ. ಮುಖ್ಯಮಂತ್ರಿಗಳು ಅಂಪೈರ್‌ ನಂತೆ ಸ್ಪರ್ಧೆ ವೀಕ್ಷಿಸಿ ತೀರ್ಮಾನಿಸಲಿ- ದಯಾನಂದ ರೆಡ್ಡಿ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ (ಚುನಾವಣೆಗೂ ಮೊದಲು)

*ಇದು ಸರ್ಕಾರಕ್ಕೆ ಸಿಕ್ಕ ಗೆಲುವು. ಬಂಡಾಯ ಅಭ್ಯರ್ಥಿಗಳೆಲ್ಲ ಸೋಲುತ್ತಾರೆ ಎಂದು ಮೊದಲೇ ಗೊತ್ತಿತ್ತು. ಮತದಾರರು ಬುದ್ಧಿವಂತರು. ಯೋಚಿಸಿ ಮತದಾನ ಮಾಡಿದ್ದಾರೆ - ಸಿದ್ದರಾಮಯ್ಯ, ಮುಖ್ಯಮಂತ್ರಿ (ಚುನಾವಣೆಯ ಬಳಿಕ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT