ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಕಾರಣದ ಉದ್ರೇಕ ತಡೆಯುವುದು ಹೇಗೆ?

ಅಂಕುರ-82
Last Updated 29 ಜನವರಿ 2016, 19:51 IST
ಅಕ್ಷರ ಗಾತ್ರ

ದುರಾದೃಷ್ಟವೆಂದರೆ ವಿನಾಕಾರಣದ ಉದ್ರೇಕವನ್ನು ತಡೆಯುವುದು ಅಸಾಧ್ಯವಾಗಿದೆ. ಸಾಮಾನ್ಯವಾಗಿ ಹುಡುಗರು ಪ್ರೌಢಾವಸ್ಥೆಗೆ ತಲುಪುವಾಗ ರಕ್ತ ಸರಬರಾಜು ಹೆಚ್ಚಾಗುವುದರಿಂದ ಈ ವಿನಾಕಾರಣದ ಉದ್ರೇಕ ಉಂಟಾಗುತ್ತದೆ. ಯಾವುದೇ ಲೈಂಗಿಕ ಯೋಚನೆಗಳು ಬಾರದೇ ಇದ್ದಾಗಲೂ ಈ ಉದ್ರೇಕವನ್ನು ಅನುಭವಿಸಬಹುದಾಗಿದೆ. ಆದರೆ ಕಾಲಕ್ರಮೇಣ ಈ ಉದ್ರೇಕದ ನಡುವಿನ ಅಂತರ ಕಡಿಮೆಯಾಗುತ್ತ ಹೋಗುತ್ತದೆ.

ಹಸ್ತಮೈಥುನವೆಂದರೇನು?
ಹಸ್ತಮೈಥುನವೆಂದರೆ ಸ್ವಸಂತೈಕೆಯ ಕ್ರಿಯೆ ಎಂದು ಹೇಳಬಹುದು. ಈ ಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಪರಮಾನಂದದ ಕ್ಷಣದಲ್ಲಿ ಸ್ಖಲನವಾಗುತ್ತದೆ. ಈ ಸ್ರಾವದಲ್ಲಿ ವೀರ್ಯ ಮತ್ತು ವೀರ್ಯಾಣುಗಳಿರುತ್ತವೆ. ಸಾಮಾನ್ಯವಾಗಿ ಬಹುತೇಕ ಯುವಕರು ಹಸ್ತಮೈಥುನದಲ್ಲಿ ತೊಡಗಿಕೊಳ್ಳುತ್ತಾರೆ. ಅಧ್ಯಯನವೊಂದರ ಪ್ರಕಾರ 15–16ವಯೋಮಾನದವರಲ್ಲಿ ಶೇ 75ರಷ್ಟು ಹುಡುಗರು ಹಸ್ತಮೈಥುನ ಮಾಡಿಕೊಳ್ಳುತ್ತಾರೆ.

ಹಸ್ತಮೈಥುನದ ಬಗ್ಗೆ ಹಲವಾರು ತಪ್ಪು ನಂಬಿಕೆಗಳಿವೆ. ಹಸ್ತಮೈಥುನದಿಂದಾಗಿ ಬೆಳವಣಿಗೆಯಾಗುವುದಿಲ್ಲ. ಆದರೆ ಹಸ್ತಮೈಥುನದಿಂದ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಅದೊಂದು ಗೀಳಾಗಿ ಪರಿವರ್ತನೆಯಾಗಬಾರದು ಅಷ್ಟೆ. ಅಭ್ಯಾಸವೇ ಬೇರೆ. ಗೀಳಾಗುವುದೇ ಬೇರೆ.

ಎಸ್‌ಟಿಡಿ ಎಂದರೇನು
ಎಸ್‌ಟಿಡಿ ಎಂದರೆ (ಸೆಕ್ಸುವಲಿ ಟ್ರಾನ್ಸ್ಮಿಟೆಡ್‌ ಡಿಸೀಸ್‌) ಅಂದರೆ ಲೈಂಗಿಕ ಕ್ರಿಯೆಯ ಮೂಲಕ ಹರಡುವ ಸೋಂಕು ಎಂದರ್ಥ. ಸೋಂಕನ್ನು ಹೊಂದಿರುವವರೊಂದಿಗೆ ಲೈಂಗಿಕಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಅಂದರೆ ಸಂಭೋಗಿಸಿದಾಗ ಸೋಂಕು ಹರಡುತ್ತದೆ. ಕೇವಲ ಸಂಭೋಗದಿಂದ ಮಾತ್ರವಲ್ಲ, ಮುಖರತಿ, ಗುದಸಂಭೋಗ ಅಥವಾ ಬೆತ್ತಲಾಗಿ ಕೇವಲ ಉಜ್ಜುವುದರಿಂದಲೂ ಸೋಂಕು ಹರಡಬಹುದು. ಒಂದುವೇಳೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಅವು ಸುದೀರ್ಘಕಾಲದ ಕಾಯಿಲೆಯಾಗುತ್ತವೆ. ಕೆಲವೊಮ್ಮೆ ಎಚ್‌ಐವಿ, ಏಯ್ಡ್ಸ್‌ ಸಹ ಆಗುವ ಸಾಧ್ಯತೆ ಇದೆ. ಕೆಲವು ಮಾರಣಾಂತಿಕ ಕಾಯಿಲೆಗಳಾಗಿಯೂ ಕಾಡುತ್ತವೆ.

ಗನೋರಿಯಾ, ಕ್ಲಾಮಿಡಿಯಾ, ಜೆನಿಟಲ್‌ ಹರ್ಪಿಸ್‌, ಎಚ್‌ಪಿವಿ, ಹೆಪಟೈಟಸ್‌ ಬಿ ಮತ್ತು ಸಿ, ಸಿಫಿಲಿಸ್‌, ಕ್ರ್ಯಾಬ್ಸ್‌, ಹೇನು, ಟ್ರೈಕೊಮೊನೈಸಿಸ್‌ ಮುಂತಾದವುಗಳ ಸೋಂಕು ಹರಡುತ್ತದೆ. ಸುರಕ್ಷಿತ ಲೈಂಗಿಕ ಜೀವನವೇ ಇದಕ್ಕೆ ಉತ್ತಮ ಚಿಕಿತ್ಸೆಯಾಗಿದೆ. ಒಂದು ವೇಳೆ ಈಗಾಗಲೇ ಸೋಂಕಿಗೆ ಒಳಗಾಗಿದ್ದಲ್ಲಿ ಇನ್ನೊಬ್ಬರಿಗೆ ಹರಡದಂತೆ ತಡೆಯಲು ವೈದ್ಯರಿಂದ ಸಮಾಲೋಚಿಸಬೇಕಾದುದು ಅತ್ಯಗತ್ಯ. ಸಕಾಲಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು ಸೂಕ್ತ.

ಸೋಂಕು ತಗುಲಿದೆ ಎಂದು ಗೊತ್ತಾಗುವುದು ಹೇಗೆ?
ಯಾವ ಸೋಂಕು ಎನ್ನುವುದನ್ನು ಆಧರಿಸಿ ಬೇರೆಬೇರೆ ಲಕ್ಷಣಗಳು ನಿಮ್ಮಲ್ಲಿ ಗೋಚರಿಸುತ್ತವೆ. ಆದರೆ ಇವು ಕೆಲವು ಸಾಮಾನ್ಯ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ನೀವು ವೈದ್ಯರನ್ನು ಕಾಣುವುದು ಒಳಿತು.
* ಮೂತ್ರವಿಸರ್ಜಿಸುವಾಗ ಉರಿತ, ಶಿಶ್ನದಿಂದ ಸ್ರಾವ.
* ಶಿಶ್ನದ ತುದಿಯಲ್ಲಿ ಉರಿ ಮತ್ತು ಕೆರೆತ.
* ಶಿಶ್ನದ ಒಳಭಾಗದಲ್ಲಿಯೂ ಉರಿತ, ವೃಷಣಗಳ ಊತ ಮತ್ತು ನೋವು, ಶಿಶ್ನದ ಮೇಲೆ ಅಥವಾ ಸುತ್ತಲೂ ಗಾಯ.
* ಜನನೇಂದ್ರಿಯ ಭಾಗದಲ್ಲಿ ಗಾಯ, ತುರಿಕೆ, ಕೆರೆತ, ಊತ, ಸೆಳೆತ, ಅಥವಾ ನೋವು ರಹಿತ ಗಂಟುಗಳು ಗೋಚರವಾಗುವುದು, ವೃಷಣಗಳಲ್ಲಿ ನೋವು ಕಾಣುವುದು ಇತರ ಲಕ್ಷಣಗಳಾಗಿವೆ.

ಮಾಹಿತಿಗೆ ಸಂಪರ್ಕಿಸಿ: 18002084444

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT