ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಬ್ಗಯೊರ್‌: 596 ಸಿಬ್ಬಂದಿ ವಿಚಾರಣೆ

Last Updated 30 ಜುಲೈ 2014, 20:22 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದೆಲ್ಲೆಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ವಿಬ್ಗಯೊರ್‌ ಶಾಲಾ ವಿದ್ಯಾರ್ಥಿನಿ ಅತ್ಯಾಚಾರ ಪ್ರಕ­ರಣ ಭೇದಿಸಲು ಸುಮಾರು 50 ಮಂದಿ ಪೊಲೀಸ್‌ ಅಧಿಕಾರಿಗಳು ಶಾಲೆಯ 596 ಸಿಬ್ಬಂದಿಯ ವಿಚಾ­ರಣೆ ನಡೆಸಿದ್ದಾರೆ.

ಪ್ರಕರಣದ ತನಿಖೆಗಾಗಿ ಡಿಸಿಪಿ, ಇಬ್ಬರು ಎಸಿಪಿಗಳು, ಏಳು ಇನ್‌ಸ್ಪೆಕ್ಟರ್‌­ಗಳು ಸೇರಿದಂತೆ ಸುಮಾರು 50 ಮಂದಿ ಸಿಬ್ಬಂದಿಯನ್ನು ನಿಯೋಜಿಸ­ಲಾ­ಗಿತ್ತು. ಅವರು ಶಾಲೆಯ 350 ಮಂದಿ ಬೋಧನಾ ಸಿಬ್ಬಂದಿ, 76 ವಾಹನ ಚಾಲಕರು, 20 ಸೆಕ್ಯುರಿಟಿ ಗಾರ್ಡ್‌­ಗಳು, ಬೋಧಕೇತರ ಮತ್ತು ಕ್ರೀಡಾ ವಿಭಾ­ಗದ 150 ಸಿಬ್ಬಂದಿಯನ್ನು ಹಲವು ಬಾರಿ ವಿಚಾರಣೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾ­ರಿ­ಗಳು ತಿಳಿಸಿದ್ದಾರೆ.

ಶಾಲಾ ಕಟ್ಟಡ, ಪ್ರವೇಶದ್ವಾರ ಮತ್ತು ಆವರಣದಲ್ಲಿನ 48 ಸಿ.ಸಿ ಕ್ಯಾಮೆ­ರಾಗಳಲ್ಲಿ ಸೆರೆಯಾಗಿದ್ದ ಸುಮಾರು ಒಂದು ತಿಂಗಳ ದೃಶ್ಯಾ­ವ­ಳಿ­ಯನ್ನು ಪರಿಶೀಲನೆ ಮಾಡಲಾಗಿದೆ. ಅಲ್ಲದೇ, ಒಂದು ಸಾವಿರಕ್ಕೂ ಹೆಚ್ಚು ಮೊಬೈಲ್‌ ಕರೆಗಳ ವಿವರವನ್ನು ಸಂಗ್ರ­ಹಿಸಿ ಪರಿಶೀಲಿಸಲಾಗಿದೆ ಎಂದಿದ್ದಾರೆ.

ಲೋಪವಾಗಿಲ್ಲ: ಪ್ರಕರಣದ ತನಿಖೆ­ಯಲ್ಲಿ ಯಾವುದೇ ಲೋಪ ಆಗಿಲ್ಲ. ಸರ್ಕಾರ ಅಥವಾ ಪೋಷಕರ ಒತ್ತಡಕ್ಕೆ ಮಣಿದು ಮುಸ್ತಫಾನನ್ನು ತರಾತುರಿ­ಯಲ್ಲಿ ಬಂಧಿಸಿಲ್ಲ. ಮುಸ್ತಫಾ, ಲಾಲ್‌ಗಿರಿ, ವಸೀಂ ಪಾಷಾ ಸೇರಿದಂತೆ ಹಲವು ಸಿಬ್ಬಂದಿಯನ್ನು ಠಾಣೆಗೆ ಕರೆ­ತಂದು ವಿಚಾರಣೆ ನಡೆಸಿದ್ದೆವು. ಅವರಲ್ಲಿ ಮುಸ್ತಫಾನ ಹೇಳಿಕೆ ಮತ್ತು ವರ್ತ­ನೆಯ ಬಗ್ಗೆ ಸಂಶಯ ಮೂಡಿದ್ದ­ರಿಂದ ಆತನನ್ನು ಬಂಧಿಸಲಾಯಿತು. ಆ ಬಗ್ಗೆ ನ್ಯಾಯಾಲಯಕ್ಕೆ ಜು.20ರಂದು ವರದಿ­ಯೊಂದನ್ನು ಸಲ್ಲಿಸಲಾಗಿತ್ತು. ‘ಮುಸ್ತ­­ಫಾನನ್ನು ಸಂಶಯದ ಮೇಲೆ ಬಂಧಿಸಲಾಗಿದೆ’ ಎಂದು ಆ ವರದಿ­ಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆ ವೇಳೆ ಠಾಣಾಧಿಕಾರಿಗೆ ಯಾವುದೇ ವ್ಯಕ್ತಿಯ ಮೇಲೆ ಸಂಶಯ ಬಂದರೆ ಆತನನ್ನು ಬಂಧಿಸಿ ವಿಚಾರಣೆ ನಡೆ­ಸಲು ಅಪರಾಧ ಪ್ರಕ್ರಿಯಾ ಸಂಹಿತೆ­ಯಲ್ಲಿ (ಸಿಆರ್‌ಪಿಸಿ) ಅವಕಾಶವಿದೆ. ತನಿಖೆ ನಂತರ ಬಂಧಿತ ವ್ಯಕ್ತಿಯ ವಿರುದ್ಧ ಸೂಕ್ತ ಸಾಕ್ಷ್ಯ ಲಭ್ಯವಾಗದಿದ್ದರೆ ಪ್ರಕರಣದಲ್ಲಿ ಆತನ ಪಾತ್ರವಿಲ್ಲ ಅಥವಾ ಆತ ನಿರಪರಾಧಿ ಎಂದು ಠಾಣಾ­­ಧಿಕಾರಿಯು ನ್ಯಾಯಾಲಯಕ್ಕೆ ವರದಿ ಸಲ್ಲಿಸಬಹುದಾಗಿದೆ (ಸಿಆರ್‌­ಪಿಸಿ–169ನೇ ಸೆಕ್ಷನ್‌ ಪ್ರಕಾರ). ಈ ಹಿಂದೆಯೂ ವಿವಿಧ ಪ್ರಕರಣಗಳಲ್ಲಿ ಹಲ­ವರನ್ನು ಬಂಧಿಸಿ, ಸಾಕ್ಷ್ಯ ಲಭ್ಯವಾ­ಗದ ಕಾರಣ ಅವರ ಬಿಡುಗಡೆಗೆ ನ್ಯಾಯಾ­­ಲಯಕ್ಕೆ ವರದಿ ಸಲ್ಲಿಸಿರುವ ಉದಾ­ಹರಣೆಗಳಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಕರಣದ ಮುಖ್ಯ ಆರೋಪಿ­ಗ­ಳಾದ ಲಾಲ್‌ಗಿರಿ ಮತ್ತು ವಸೀಂ ಪಾಷಾ­­ನನ್ನು ಬುಧವಾರ ಬೆಳಿಗ್ಗೆ ಶಾಲೆಗೆ ಕರೆದೊಯ್ದು ಘಟನಾ ಸ್ಥಳದ ಪರಿ­­ಶೀಲನೆ ನಡೆಸಿ, ಮಾಹಿತಿ ಕಲೆ ಹಾಕ­ಲಾ­ಗಿದೆ. ಮುಸ್ತಫಾನಿಗೆ ಸುಳ್ಳು ಪತ್ತೆ ಪರೀಕ್ಷೆ (ಪಾಲಿಗ್ರಫಿ) ನಡೆಸಲು  ಅನು­ಮತಿ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸ­ಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತರಗತಿಗಳು ಪುನರಾರಂಭ
ಶಾಲೆಯ 1ರಿಂದ 4ರವ­ರೆಗಿನ ತರಗತಿಗಳು ಬುಧವಾ­ರ­ದಿಂದ ಪುನರಾರಂಭವಾದವು. ಪೋಷ­­ಕ­ರೇ ಮಕ್ಕಳನ್ನು ಶಾಲೆಗೆ ಕರೆ­ದು­ಕೊಂಡು ಬಂದು, ಆಡಳಿತ ಮಂಡ­ಳಿಯು ಕೈಗೊಂಡಿರುವ ಸುರ­ಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT