ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದಲ್ಲಿ ಮೊಬೈಲ್‌ ಬಳಕೆಗೆ ಅವಕಾಶ

Last Updated 23 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇನ್ನು ಮುಂದೆ ವಿಮಾನದಲ್ಲಿ ಪ್ರಯಾ­ಣಿಸುವಾಗ ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಸೇರಿದಂತೆ ಇತರೆ ಪೊರ್ಟೆಬಲ್‌ ಎಲೆ ಕ್ಟ್ರಾನಿಕ್‌ ಡಿವೈಸ್‌ (ಪಿಇಡಿ) ಬಳಸ­ಬಹುದು.

ಹೌದು.! ವಿಮಾನ ಹಾರಾಟದ ವೇಳೆ ‘ಫ್ಲೈಟ್‌ ಮೋಡ್‌’ನಲ್ಲಿ ಈ ಉಪಕರಣಗಳನ್ನು ಬಳಸಲು ನಾಗರಿಕ ವಿಮಾನಯಾನ ಮಹಾ­ನಿರ್ದೇಶ ನಾಲಯ (ಡಿಜಿಸಿಎ) ಒಪ್ಪಿಗೆ ನೀಡಿದೆ.

ವಿಮಾನ ಹಾರಾಟಕ್ಕೆ ಅಣಿಯಾ­ಗುತ್ತಿದ್ದಂತೆ ‘ನಿಮ್ಮ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ’ ಎಂಬ ಸೂಚನೆಯನ್ನು ಇನ್ನು ಮುಂದೆ ಗಗನಸಖಿ ನೀಡುವುದಿಲ್ಲ. ಬದಲಿಗೆ, ‘ನಿಮ್ಮ ಮೊಬೈಲನ್ನು ಫ್ಲೈಟ್‌ ಮೋಡ್‌ ಅಥವಾ ಏರೋಪ್ಲೇನ್‌ ಮೋಡ್‌ನಲ್ಲಿಟ್ಟು ಬಳಸಿರಿ’ ಎಂಬ ಘೋಷಣೆ ಹೊರಬೀಳಲಿದೆ.

ವಿಮಾನದಲ್ಲಿ ಮೊಬೈಲ್‌ ಬಳಕೆಗೆ ಇದ್ದ  ನಿರ್ಬಂಧಗಳನ್ನು ‘ಡಿಜಿಸಿಎ’ ಸಡಿಲಿ­ಸಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಜಾರಿ­ಯಲ್ಲಿದ್ದ ನಿಯಮಗಳಿಗೆ ತಿದ್ದುಪಡಿ­ಯನ್ನೂ ತಂದಿದೆ. ಇದರಿಂದ ಇನ್ನು ಮುಂದೆ ವಿಮಾನ ಪ್ರಯಾಣಿಕರು ತಮ್ಮ ಪ್ರಯಾ­ಣದ ವೇಳೆ ‘ಪಿಇಡಿ’ ಬಳಸಬಹು­ದು.

ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆ­ಟ್‌ನಲ್ಲಿ ಹಾಡು ಕೇಳಬಹುದು. ವಿಡಿಯೊ ನೋಡಬಹುದು. ಇ–ಮೇಲ್‌­­­ಗಳನ್ನು ಬರೆದಿಟ್ಟು­ಕೊಳ್ಳ­ಬಹು­ದು. ಆದರೆ, ವಿಮಾನ ಭೂಸ್ಪರ್ಶ ಮಾಡಿದ ನಂತರವೇ ಇದನ್ನು  ಕಳುಹಿ­ಸಲು ಅವಕಾಶ ಇದೆ. ಮೊಬೈಲ್‌ ‘ನಾನ್‌­ಟ್ರಾನ್ಸ್‌ಮಿಟಿಂಗ್‌ ಮೋಡ್‌’ನಲ್ಲಿರುವು­ದರಿಂದ ಕರೆ ಮಾಡಲು, ಕರೆ ಸ್ವೀಕರಿ­ಸಲು ಅಥವಾ ಇಂಟರ್‌ನೆಟ್‌ ಸೇವೆ ಪಡೆದು­ಕೊಳ್ಳಲು ಅವಕಾಶ ಇಲ್ಲ.

ವಿಮಾನ ಪ್ರಯಾಣಿಕರಿಗೆ ಹಾರಾ­ಟದ ವೇಳೆ ‘ಪಿಇಡಿ’ ಬಳಕೆಗೆ ಅವಕಾಶ ಕಲ್ಪಿಸಬೇಕು ಎನ್ನುವುದು  ಬಹುದಿನದ ಬೇಡಿಕೆ­ಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT