ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಶೋಧ ತಾತ್ಕಾಲಿಕ ಸ್ಥಗಿತ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಪರ್ತ್ (ಪಿಟಿಐ): ಅಪಘಾತ­ಕ್ಕೀಡಾಗಿರುವ ಮಲೇಷ್ಯಾ ಏರ್‌ಲೈನ್ಸ್‌ನ ವಿಮಾನದ ವೈಮಾನಿಕ ಶೋಧ ಕಾರ್ಯಾ­ಚರಣೆಯನ್ನು ಮಂಗಳವಾರ ಭಾರಿ ಚಂಡ­ಮಾರುತದ ಕಾರಣದಿಂದ ಸ್ಥಗಿತಗೊಳಿಸಲಾಗಿದೆ.

ಹಿಂದೂ ಮಹಾ ಸಾಗರದ ಆಳದಲ್ಲಿ ಪತ್ತೆ ಕಾರ್ಯದಲ್ಲಿ ನಿರತವಾಗಿರುವ ಮಿನಿ–ಜಲಾಂತ­ರ್ಗಾಮಿ ನೌಕೆ ‘ಬ್ಲ್ಯೂಫಿನ್‌–21’ 9ನೇ ಹಂತದ ಕಾರ್ಯಾ­ಚರಣೆಯನ್ನು ಪೂರ್ಣ­­ಗೊಳಿ­ಸಿದ್ದು, ವಿಮಾನದ ಯಾವುದೇ ಅವಶೇಷ ಪತ್ತೆಯಾಗಿಲ್ಲ.

‘ಜಾಕ್‌ ಚಂಡಮಾರುತದಿಂದ ಪ್ರತಿಕೂಲ ಹವಾಮಾನ ಉಂಟಾಗಿದ್ದು, ಉದ್ದೇಶಿತ ವೈಮಾನಿಕ ಶೋಧನೆಯನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ’ ಎಂದು ಪತ್ತೆ ಕಾರ್ಯದ ನೇತೃತ್ವ ವಹಿಸಿರುವ ಜಂಟಿ ಸಂಸ್ಥೆ ಸಹಕಾರ ಕೇಂದ್ರ ಹೇಳಿದೆ.

ನೆಲಕ್ಕಿಳಿದಿರುವ ವಿಮಾನ? (ಕ್ವಾಲಾಲಂಪುರ ವರದಿ): ಕುತೂಹಲ­ಕರ ರೀತಿ ನಾಪತ್ತೆಯಾದ ಮಲೇಷ್ಯಾ ವಿಮಾನದ ಯಾವುದೇ ಅವ­ಶೇಷಗಳು ಈವರೆಗೆ ಲಭ್ಯವಾಗದ ಹಿನ್ನೆಲೆ­ಯಲ್ಲಿ  ಯಾವುದೋ ಸ್ಥಳದಲ್ಲಿ ನೆಲಕ್ಕಿಳಿದಿರುವ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸಲಾಗು­ತ್ತಿದೆ ಎಂದು ಮಾಧ್ಯಮ ತಿಳಿಸಿದೆ.

ಮಲೇಷ್ಯಾ ಏರ್‌ಲೈನ್ಸ್‌ನ ಎಂಎಚ್‌­370 ವಿಮಾನವು ದಕ್ಷಿಣ ಹಿಂದೂ ಮಹಾ­­ಸಾಗ­ರದಲ್ಲಿ ಅಂತ್ಯವಾಗಿರುವ ಬದಲಿಗೆ ಎಲ್ಲೋ ಭೂಮಿಗೆ ಇಳಿದಿರ­ಬಹುದು ಎಂದು ಅಂತರ­ರಾಷ್ಟ್ರೀಯ ತನಿಖಾ ತಂಡ ಶಂಕಿಸಿರುವುದಾಗಿ ‘ನ್ಯೂ ಸ್ಟ್ರೇಟ್‌ ಟೈಮ್ಸ್’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT