ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾ ಮಸೂದೆ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ

ನಾಳೆಯಿಂದ ಚಳಿಗಾಲದ ಸಂಸತ್‌ ಅಧಿವೇಶನ
Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಹು ನಿರೀಕ್ಷಿತ ವಿಮಾ ಮಸೂದೆ ಸೇರಿದಂತೆ ಹಲವು ಸುಧಾ­ರಣಾ ಹಾಗೂ ತಿದ್ದುಪಡಿ ಮಸೂದೆಗಳನ್ನು  ಇದೇ ಸೋಮ­ವಾರ­ದಿಂದ ಆರಂಭ­ವಾಗಲಿರುವ ಸಂಸತ್‌ ಚಳಿಗಾಲ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ನ ತೀವ್ರ ವಿರೋಧದ  ನಡು­ವೆಯೂ ಸರ್ಕಾರವು  ವಿಮಾ ಮಸೂದೆ ಮಂಡಿಸಲು ಹಾಗೂ ಭೂ­ಸ್ವಾಧೀನ ಕಾಯ್ದೆ ಮತ್ತು ಕಲ್ಲಿದ್ದಲು ನಿಯಂತ್ರಣ ಪ್ರಾಧಿಕಾರ ಮಸೂದೆಗೆ ತಿದ್ದುಪಡಿ ತರಲು ಮುಂದಾಗಿದೆ.

ಅನೇಕ ಸುಧಾರಣಾ ಮಸೂದೆಗಳ ಜಾರಿಗೆ ಸರ್ಕಾರ ಬದ್ಧವಾಗಿದ್ದು ಕಾಂಗ್ರೆಸ್‌ ವಿರೋಧ  ಅಡ್ಡಿಯಾಗದು ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಸೂದೆ ಜಾರಿಗೆ ಜಂಟಿ ಅಧಿ­ವೇಶನ ಕರೆಯುವ ಕುರಿತು ಯಾವುದೇ ಸ್ಪಷ್ಟ ತೀರ್ಮಾನ ಪ್ರಕಟಿಸದ ಅವರು, ಸರ್ಕಾರದ ಸುಧಾರಣಾ ಕ್ರಮಗಳನ್ನು ವಿರೋಧಿಸುವವರು ಚುನಾವಣೆಗ­ಳಲ್ಲಿ ಪದೇಪದೇ ಸೋಲುತ್ತಲೇ ಹೋಗು­ತ್ತಾರೆ ಎಂದು ಲೇವಡಿ ಮಾಡಿದರು.   ಯುಪಿಎ ಆಡಳಿತಾವಧಿಯಲ್ಲಿ ಭೂ ಸ್ವಾ­ಧೀನ ಕಾಯ್ದೆ ಜಾರಿಯಾಗುವ ವೇಳೆ ಸುಮ್ಮನಿದ್ದ ಬಿಜೆಪಿ ಈಗೇಕೆ ಈ ಕಾಯ್ದೆಗೆ ತಿದ್ದುಪಡಿ ತರಲು ಹೊರ­ಟಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಜೇಟ್ಲಿ, ಅದರ  ಪರಿಣಾಮಗಳನ್ನು ಈಗಾಗಲೇ ಕಾಂಗ್ರೆಸ್‌ ಅನುಭವಿಸಿದೆ ಎಂದರು.

ಈ ನಡುವೆ ವಿಮಾ ಮಸೂದೆ ಹಾಗೂ ಇನ್ನಿತರ ತಿದ್ದುಪಡಿ ಮಸೂದೆಗಳ ಕುರಿತು ಕೆಲವು ಆಕ್ಷೇಪಗಳನ್ನು ಹೊಂದಿ­ರು­ವುದಾಗಿ ಕಾಂಗ್ರೆಸ್‌ ನಾಯಕ ಆನಂದ ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT