ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದದಲ್ಲಿ ರಾಜನಾಥ ಪುತ್ರ

ತಪ್ಪು ಸಾಬೀತಾದರೆ ನಿವೃತ್ತಿ: ಗೃಹ ಸಚಿವ ಹೇಳಿಕೆ *ಎನ್‌ಡಿಎ ಸರ್ಕಾರಕ್ಕೆ ಮುಜುಗರ
Last Updated 27 ಆಗಸ್ಟ್ 2014, 19:42 IST
ಅಕ್ಷರ ಗಾತ್ರ

ನವದೆಹಲಿ: ‘ಪೊಲೀಸ್‌ ಇಲಾಖೆ ವ್ಯವ­ಹಾರದಲ್ಲಿ ಹಸ್ತಕ್ಷೇಪ ಮಾಡು­ತ್ತಿದ್ದಾರೆ­ನ್ನಲಾದ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ಮಗ ಗೃಹ ಸಚಿವರು ತಮ್ಮ ಕಚೇರಿ ಹೊರಗೆ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಗೃಹ ಸಚಿವಾಲಯದ ವ್ಯವಹಾರ­ದಲ್ಲಿ ಕೈ ಹಾಕುತ್ತಿದ್ದಾರೆನ್ನಲಾದ ಗೃಹ ಸಚಿವರ ಮಗ ಪಂಕಜ್‌ ಅವರನ್ನು ಪ್ರಧಾನಿ ಕರೆದು ತರಾಟೆಗೆ ತೆಗೆದು­ಕೊಂಡಿದ್ದಾರೆ’ ಎನ್ನುವ ಸುದ್ದಿ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಸುತ್ತು ಹೊಡೆಯುತ್ತಿದೆ.

ಆದರೆ, ಈ ಸುದ್ದಿಗೆ ಯಾವುದೇ ನಿರ್ದಿಷ್ಟ ಸಾಕ್ಷ್ಯಾ­ಧಾರ­­ಗಳಿಲ್ಲ. ‘ಇದೊಂದು ಆಧಾರರ­ಹಿತವಾದ, ದುರು­ದ್ದೇಶದಿಂದ ಕೂಡಿದ ಆರೋಪ’. ಕಳೆದ 15– 20 ದಿನಗಳಿಂದ ಇಂತಹ ವದಂತಿ ಹರಡಿ­ಸಲಾ­ಗುತ್ತಿದೆ. ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದೆ. ಇದು ಎಂದಾದರೂ ಅಂತ್ಯಗೊಳ್ಳಲೇಬೇಕು. ಅನಗತ್ಯ­ವಾಗಿ ಕೆಲವರು ತಮ್ಮ ಕುಟುಂಬದ ಸದಸ್ಯರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಪ್ರಧಾನಿಗೆ ದೂರು: ತಮ್ಮ ಹಾಗೂ ಕುಟುಂಬ ಸದಸ್ಯರ ವಿರುದ್ಧ ವದಂತಿ ಹಬ್ಬಿಸುತ್ತಿರುವ ಮುಖಂಡರ ಹೆಸರನ್ನು ಅವರು ನಾಯಕರ

ಮುಂದೆ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಮತ್ತು ಪ್ರಧಾನಿ ಅವರಿಗೂ ದೂರು ಸಲ್ಲಿ­ಸಿದ್ದಾರೆ. ಇದರ ಹಿಂದೆ ಹಿರಿಯ ಸಚಿವ ಸಹೋ­ದ್ಯೋಗಿ­ಯೊಬ್ಬರ ಕೈವಾಡವಿದೆ ಎಂದು ಅವರು ಬಹಿರಂಗ­ಪಡಿಸಿದ್ದಾರೆಂದು ಬಿಜೆಪಿ ಮೂಲಗಳು ತಿಳಿಸಿವೆ.

‘ರಾಜನಾಥ್‌ಸಿಂಗ್‌ ಮಗನ ಮೇಲೆ ಮಾಡಲಾ­ಗಿರುವ ಆರೋಪ ಮೋದಿ ಸರ್ಕಾರದಲ್ಲಿ ನಡೆಯು­ತ್ತಿರುವ ಅಧಿಕಾರ ಕಿತ್ತಾಟದ ದ್ಯೋತಕವಾಗಿದೆ. ಹೊಸ ಸರ್ಕಾರದಲ್ಲಿ ಒಗ್ಗಟ್ಟಿಲ್ಲ ಎನ್ನುವುದಕ್ಕೆ ಸಾಕ್ಷಿ­ಯಾಗಿದೆ’ ಎಂದು ರಾಜಧಾನಿ ರಾಜಕೀಯ ವಲ­ಯದಲ್ಲಿ ವ್ಯಾಖ್ಯಾನಿ­ಸಲಾಗುತ್ತಿದೆ. ರಾಜನಾಥ್‌­ಸಿಂಗ್‌ ಲೋಕಸಭೆ ಉಪ ನಾಯಕರಾಗಿ ನೇಮಕವಾದ ಬಳಿಕ ಇಂಥ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಮೂಲಗಳು ವಿವರಿಸಿವೆ.

ತಮ್ಮ ಪುತ್ರನ ವಿರುದ್ಧ ಮಾಡ­ಲಾಗಿರುವ ಆರೋಪ ಕುರಿತು ಪ್ರಧಾನಿ ಹಾಗೂ ಬಿಜೆಪಿ ಅಧ್ಯಕ್ಷರು ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದು ರಾಜನಾಥ್‌ ಸ್ಪಷ್ಟಪಡಿಸಿ­ದ್ದಾರೆ. ಈ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟ­ವಾಗು­­ತ್ತಿದ್ದಂತೆ ಪ್ರಧಾನಿ ಕಚೇರಿ ಆರೋಪವನ್ನು ಬಲವಾಗಿ ನಿರಾ­ಕ­ರಿಸಿದೆ.

‘ಇದೊಂದು ದುರುದ್ದೇಶ­ದಿಂದ ಕೂಡಿದ ಸುಳ್ಳು ಆರೋಪ. ಎನ್‌ಡಿಎ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಮಾಡುವ ಕುತಂತ್ರ­ದಿಂದ ಕೂಡಿದೆ’ ಎಂದು ಪ್ರಧಾನಿ ಕಚೇರಿ ಪ್ರತಿಕ್ರಿಯಿಸಿದೆ.
 

ಕುತಂತ್ರದ ಆರೋಪ ಇದೊಂದು ದುರುದ್ದೇಶ­ದಿಂದ ಕೂಡಿದ ಸುಳ್ಳು ಆರೋಪ. ಎನ್‌ಡಿಎ ಸರ್ಕಾ­ರದ ವರ್ಚಸ್ಸಿಗೆ ಧಕ್ಕೆ ಮಾಡುವ ಕುತಂತ್ರ­ದಿಂದ ಕೂಡಿದೆ

-ಪ್ರಧಾನಿ ಕಾರ್ಯಾಲಯ

ಸಚಿವ ಸಂಪುಟದ ಸದಸ್ಯರ ವರ್ಚಸ್ಸಿಗೆ ಧಕ್ಕೆ ಮಾಡುವ ನಡವಳಿಕೆಯನ್ನು ಸಹಿಸುವುದಿಲ್ಲ ಎಂದೂ ಪ್ರಧಾನಿ ಕಚೇರಿ ಎಚ್ಚರಿಕೆ ನೀಡಿದೆ.
ರಾಜನಾಥ್‌ಸಿಂಗ್‌ ದಕ್ಷ, ಪ್ರಾಮಾ­ಣಿಕ ಹಾಗೂ ಸಜ್ಜನ ರಾಜಕಾರಣಿ. ಅವರ ಹೆಸರಿಗೆ ಕಳಂಕ ಹಚ್ಚಲು ವದಂತಿ ಹರಡಲಾಗಿದೆ. ಇದರಿಂದ ವೈಯಕ್ತಿಕ­ವಾಗಿ ನೋವಾಗಿದೆ ಎಂದು ಅಮೀತ್‌ ಷಾ ಹೇಳಿದ್ದಾರೆ.

ಕೆಲವು ಮಾಧ್ಯಮಗಳು ಆಧಾರ­ಗಳಿಲ್ಲದ ವರದಿ ಪ್ರಕಟಿಸುತ್ತಿವೆ ಎಂದು ಬಿಜೆಪಿ ಅಧ್ಯಕ್ಷರು ಆಕ್ಷೇಪ ಎತ್ತಿದ್ದಾರೆ. ಮೋದಿ ಸಂಪುಟದ ಸದಸ್ಯರನ್ನು ಗುರಿ ಮಾಡಿಕೊಂಡು ಪತ್ರಿಕೆಗಳು ವರದಿ ಪ್ರಕಟಿಸುತ್ತಿವೆ ಎಂದೂ ಟೀಕಿಸಿದ್ದಾರೆ.

ಇದಕ್ಕೂ ಮೊದಲು ನಿತಿನ್‌ ಗಡ್ಕರಿ ಮನೆಯಲ್ಲಿ ಕದ್ದಾಲಿಕೆ ಉಪಕರಣ ಅಳವಡಿ­ಸಲಾಗಿದೆ ಎಂಬ ಸುದ್ದಿಗಳು ಪ್ರಕಟ­ವಾಗಿದ್ದವು. ಅನಂತರ ಈ ವರದಿ­ಯನ್ನು ಸರ್ಕಾರ ನಿರಾಕರಿಸಿತ್ತು.

ಗೃಹ ಸಚಿವಾಲಯದ ವ್ಯವಹಾರ­ದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ರಾಜ­ನಾಥ್‌ ಸಿಂಗ್‌ ಅವರ ಮಗ ಪಂಕಜ್‌ ಅವರನ್ನು ಪ್ರಧಾನಿ ಈಚೆಗೆ ಕರೆಸಿ­ಕೊಂಡು ತರಾಟೆಗೆ ತೆಗೆದು­ಕೊಂಡಿದ್ದಾರೆ. ಅಪ್ಪನ ವ್ಯವಹಾ­ರದಲ್ಲಿ ಮೂಗು ತೂರಿಸಿದಂತೆ ಎಚ್ಚರಿಕೆ ನೀಡಿ­ದ್ದಾರೆಂಬ ಸುದ್ದಿ ಕೆಲವು ಪತ್ರಿಕೆಗಳಲ್ಲಿ ವರದಿ­ಯಾಗಿತ್ತು. ಅಲ್ಲದೆ, ಕೆಲವು ಸಚಿವರ ನಡವಳಿಕೆ ಕುರಿತು ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನುವ ವರದಿಗಳೂ ಪ್ರಕಟವಾಗಿದ್ದವು.

ಸಂಬಂಧಿತ ಸುದ್ದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT