ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿಗಳ ಘನತೆ ಉಳಿಸಿ

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆ­ದಿದೆ ಎನ್ನಲಾದ ಅವ್ಯವಹಾರ­ಗಳಲ್ಲಿ ಭಾಗಿ­ಯಾಗಿ­ರುವ ಆರೋಪದ ಮೇಲೆ ಕುಲಪತಿ ಸೇರಿದಂತೆ ನಾಲ್ವರನ್ನು ಲೋಕಾಯುಕ್ತ ಪೊಲೀಸರು ಬಂಧಿ­ಸಿದ ವರದಿ  ಆಧರಿಸಿ ಈ ಪತ್ರ (ಪ್ರ.ವಾ., ಅ.21). ಶಿಕ್ಷಣ, ಸಂಶೋಧನೆಯಲ್ಲಿ ಉನ್ನತ ಮಟ್ಟಕ್ಕೆ ಏರಬೇಕಿದ್ದ ವಿ.ವಿಗಳು ಭ್ರಷ್ಟಾಚಾರ­ದಿಂದಾಗಿ ವಿವಾದಕ್ಕೆ ಒಳಗಾಗುತ್ತಿರುವುದು  ಕಳವಳ­ಕಾರಿ. ಈ ಪ್ರಕರಣದಲ್ಲಿ ರಾಜ್ಯ­ಪಾಲರು ಸರಿಯಾದ ಕ್ರಮವನ್ನೇ ಕೈಗೊಂಡಿದ್ದಾರೆ. ಕರ್ನಾಟಕ ವಿ.ವಿ ಕಟ್ಟಿ ನಿಲ್ಲಿಸಿದ ಡಾ. ಡಿ. ಸಿ. ಪಾವಟೆ ಅವರಂಥ ಮಹಾನುಭಾವರ ಶ್ರಮ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೂ ಉಳಿಯು­ವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ.

ನಮ್ಮ ವಿಶ್ವವಿದ್ಯಾಲಯಗಳ ಘನತೆ ಎತ್ತಿಹಿಡಿಯುವಂಥ ಕೆಲಸ ಆಗಬೇಕಿದೆ. ಶೈಕ್ಷಣಿಕ ಕ್ಷೇತ್ರದ ಆಡಳಿತದಲ್ಲಿ ಪಾರದರ್ಶ­ಕತೆ ಇರಬೇಕು. ಸರ್ಕಾರದ ಒಂದು ಗುಂಡು ಸೂಜಿಯನ್ನೂ ಸ್ವಂತಕ್ಕೆ ಸರ್‌ ಎಂ.ವಿಶ್ವೇಶ್ವ­ರಯ್ಯನವರು ಬಳಸುತ್ತಿರಲಿಲ್ಲ. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಡಾ.ಎಚ್. ನರಸಿಂಹ­ಯ್ಯನವರು (ಎಚ್ಚೆನ್‌) ದಿನನಿತ್ಯ ತಾವು ವಾಸವಿದ್ದ ನ್ಯಾಷನಲ್ ಕಾಲೇಜ್ ಹಾಸ್ಟೆಲ್‌ಗೆ ಹೋಗಲು ಎಂದೂ ವಿ.ವಿ ಕಾರನ್ನು ಬಳಸುತ್ತಿರಲಿಲ್ಲ. ಅಂಥ ಪರಮ ಪ್ರಾಮಾಣಿಕರು ನಮಗೆ ಇಂದು ಆದರ್ಶವಾಗಬೇಕಿದೆ.
ತಾನು ಇಂಥ ವಿ.ವಿಯಲ್ಲಿ ಓದಿದ ವಿದ್ಯಾರ್ಥಿ ಎಂದು ನಮ್ಮ ರಾಜ್ಯದ ಯುವಕರು ಹೆಮ್ಮೆಯಿಂದ ಹೇಳಿಕೊಳ್ಳು­ವಂಥ, ಭ್ರಷ್ಟಾಚಾರಮುಕ್ತ, ಪಾರದರ್ಶಕ ಶೈಕ್ಷಣಿಕ ವಾತಾವರಣ ವಿ.ವಿಗಳಲ್ಲಿ ಮರು ಸೃಷ್ಟಿ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT