ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಯೇಸು ಪುನರುತ್ಥಾನದ ಉತ್ಸವ

Last Updated 21 ಏಪ್ರಿಲ್ 2014, 6:53 IST
ಅಕ್ಷರ ಗಾತ್ರ

ಯಾದಗಿರಿ: ಸಮೀಪದ ನಾಯ್ಕಲ್‌ ಗ್ರಾಮದ ಕ್ರೈಸ್ತ ಬಾಂಧವರು ಯೇಸು­ವಿನ ಪುನರುತ್ಥಾನ ಉತ್ಸವವನ್ನು ಭಾನು­­ವಾರ ಸಂಭ್ರಮದಿಂದ ಆಚರಿಸಿದರು.

ಬೆಳಿಗ್ಗೆ ಸಮೀಪದ ಬೆಟ್ಟದಲ್ಲಿರುವ ಶಿಲುಬೆಗೆ ತೆರಳಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಬಳಿಕ ಯೇಸುವಿನ ಭಜನೆ ಭಜಿಸುತ್ತಾ, ಏಸುವಿನ ಭಾವಚಿತ್ರದ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಮೆಥೋ­ಡಿಸ್ಟ್ ಚರ್ಚ್‌ಗೆ ತಲುಪಿತು. ಮಧ್ಯಾಹ್ನ­ದವರೆಗೆ ಆರಾಧನೆ ಮತ್ತು ಸಾಮೂ­ಹಿಕ ಪ್ರಾರ್ಥನೆ ಸಲ್ಲಿಸಿ, ಜನರಿಗೆ ಶಾಂತಿ, ನೆಮ್ಮದಿ ಲಭಿಸಲೆಂದು ಯೇಸುವಿನಲ್ಲಿ ಪ್ರಾರ್ಥಿಸಲಾಯಿತು.

ಚರ್ಚ್‌ನ ಸಭಾಪಾಲಕ ರೆ. ಜ್ಞಾನ­ಮಿತ್ರ, ಪ್ರಾರ್ಥನೆ ಸಲ್ಲಿಸಿದರು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಉಗ್ರಾಣಿಕರಾದ ರವಿ­ಕುಮಾರ ವಂದಲಿ, ಕಾರ್ಯದರ್ಶಿ ಸುಮಂತ್ ಮುಂದಿನಮನಿ, ಖಜಾಂಚಿ ಜಾನಪ್ಪ, ಮರೆಪ್ಪ ಹಳ್ಳಿ, ಪರಮಪ್ಪ, ಜಯವಂತ, ಯೇಸುಮಿತ್ರಪ್ಪ, ದೇವಿಂ­ದ್ರಪ್ಪ, ಮಲ್ಲಪ್ಪ, ಶಾಂತಪ್ಪ ಮೆಲಗಿರಿ, ಶೇಖಪ್ಪ ಯಡ್ಡಳ್ಳಿ, ದೇವಮಿತ್ರಪ್ಪ ವಂದ್ಲಿ, ಭೀಮಪ್ಪ ಮಳ್ಳಳ್ಳಿ, ಭೀಮಾ­ಶಂಕರ ಹಳ್ಳಿ, ಕ್ರೈಸ್ತ ಸಮಾಜದ ಅನೇಕರು ಪಾಲ್ಗೊಂಡಿದ್ದರು.

ಯಡ್ಡಳ್ಳಿ: ತಾಲ್ಲೂಕಿನ ಯಡ್ಡಳ್ಳಿ ಗ್ರಾಮ­ದಲ್ಲಿ ಭಾನುವಾರ ಕ್ರೈಸ್ತ ಸಮುದಾಯದ ಜನತೆ ಯೇಸು ಕ್ರಿಸ್ತನ ಪುನರುಸ್ಥಾನ ಉತ್ಸವವನ್ನು ಅದ್ದೂರಿ­ಯಾಗಿ ಆಚರಿಸಿದರು.ಯೇಸುವನ್ನು ಶಿಲುಬೆಗೇರಿಸಿದ ಶುಕ್ರ­­ವಾರವನ್ನು ಶುಭ ಶುಕ್ರವಾರ­ವೆಂದು, ನಂತರದ ಮೂರನೇ ದಿನಕ್ಕೆ ಯೇಸುವಿನ ಪುನರ್ಜನ್ಮವನ್ನು ಪುನರು­ತ್ಥಾನ ದಿನ­ವಾಗಿ ಆಚರಿಸಲಾಗುತ್ತದೆ.

ಈಸ್ಟರ್ ಸಂಡೆ ಪ್ರಯುಕ್ತ ಬೆಳಿಗ್ಗೆ ಸಿಂಗರಿಸಿದ ಎತ್ತಿನ ಬಂಡಿ ಮೇಲೆ ಏಸುಕ್ರಿಸ್ತನ ಭಾವಚಿತ್ರವನ್ನು ಇಟ್ಟು­ಕೊಂಡು ಗ್ರಾಮದ ಪ್ರಮುಖ ಬೀದಿ­ಗಳಲ್ಲಿ ಮೆರವಣಿಗೆ ನಡೆಸಿದರು.ಮೆರವಣಿಗೆಯುದ್ದಕ್ಕೂ ಮಕ್ಕಳ, ಯುವಕರ ಲೇಝಿಮ್, ಕೋಲಾಟ ಹಾಗೂ ಭಜನೆ ಗಮನ ಸೆಳೆಯಿತು.

ಪಾಸ್ಟರ್ ಪೌಲ್‌ರಾಜ್ ನೇತೃತ್ವ­ದಲ್ಲಿ ನಡೆದ ಮೆರವಣಿಗೆಯಲ್ಲಿ ಜ್ಞಾನ­ಮಿತ್ರ ಆಶನಾಳ, ಶಿರೋಮಣಿ ಕಿಲ್ಲನ­ಕೇರಿ, ರಾಜಪ್ಪ ಆರಬೋಳ, ಜಯಂ­ತಪ್ಪ ದಂಡನ್, ಎಸ್. ಸೋಸಳ್ಳಿ, ಮಿತ್ರಪ್ಪ ನರಸಣೋರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT