ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದಾಖಲೆ ಬರೆಯಲಿರುವ ಪೇಂಟಿಂಗ್

Last Updated 29 ಜನವರಿ 2015, 19:52 IST
ಅಕ್ಷರ ಗಾತ್ರ

ಶಿಗ್ಗಾಂವ (ಹಾವೇರಿ ಜಿಲ್ಲೆ): ತಾಲ್ಲೂಕಿನ ಗೊಟಗೋಡಿಯಲ್ಲಿರುವ ‘ಉತ್ಸವ ರಾಕ್ ಗಾರ್ಡನ್’ ಮತ್ತೊಂದು ವಿಶ್ವದಾಖಲೆಯತ್ತ ದಾಪುಗಾಲು ಹಾಕಿದೆ.

ವಿಶ್ವ ಭ್ರಾತೃತ್ವ ಸಂದೇಶವುಳ್ಳ ವಿಶ್ವದ ಅತಿ ಉದ್ದದ ಆಧುನಿಕ ‘ಸೀಲಿಂಗ್’ ಪೇಂಟಿಂಗ್‌ ರಚನೆಗೆ ಕಲಾವಿದ ಪ್ರೊ.ಟಿ.ಬಿ. ಸೊಲಬಕ್ಕನವರ ಚಿತ್ರ ಬಿಡಿಸುವ ಮೂಲಕ ಗುರುವಾರ ಚಾಲನೆ ನೀಡಿದರು.

ಈಗಾಗಲೇ ಎಂಟು ವಿಶ್ವ ದಾಖಲೆಗಳಲ್ಲಿ ಸೇರಿರುವ ‘ಉತ್ಸವ ರಾಕ್ ಗಾರ್ಡನ್’ ಆವರಣದಲ್ಲಿ ೧,೨೦೦ X 7 ಅಡಿ ಅಳತೆಯ ಪೇಂಟಿಂಗ್‌ ಅನ್ನು ಪಾಲಿ ಕಾರ್ಬನ್ ಯು.ವಿ. ಕೋಟೆಡ್ ಮಲ್ಟಿ ವಾಲ್ ಶೀಟ್‌ಗಳಲ್ಲಿ ಮಾಡಲಾಗುತ್ತಿದೆ. 

‘ಕಲಾವಿದರಾದ ಬಿ.ವಿ. ಹಾಲಬಾವಿ, ಎಂ.ವಿ. ಮೆಣಸಗಿ, ಟಿ.ಪಿ. ಅಕ್ಕಿ ಅವರ ಸ್ಮರಣಾರ್ಥ ‘ಉತ್ಸವ ರಾಕ್ ಗಾರ್ಡನ್‌’ನಲ್ಲಿ ನಿರ್ಮಿಸಿರುವ ಆಲದ ಮರ ಕಲಾತ್ಮಕ, ಸೃಜನಾತ್ಮಕ, ಸಂವೇದಾನಾತ್ಮಕವಾಗಿ ಮೂಡಿ ಬಂದಿದೆ. ಇದರ ಸುತ್ತ ಸೀಲಿಂಗ್ ಪೇಂಟಿಂಗ್ ಅಳವಡಿಸಲಾಗಿದೆ.

ಇದರ ಮುಂದುವರಿದ ಭಾಗವಾಗಿ ಈ ೧೨೦೦ ಅಡಿ ಉದ್ದದ ಸೀಲಿಂಗ್ ಪೇಂಟಿಂಗ್ ಅತ್ಯಂತ ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ಕಲಾವಿದರಿಂದ ನಿರ್ಮಾಣಗೊಂಡದ್ದು ಎಂಬ ಖ್ಯಾತಿಯೊಂದಿಗೆ ವಿಶ್ವದಾಖಲೆ ಪುಟಗಳಲ್ಲಿ ಸೇರ್ಪಡೆ ಆಗಲಿದೆ’ ಎಂದು ಪೇಂಟಿಂಗ್‌ ರಚನೆ ನೇತೃತ್ವ ವಹಿಸಿರುವ ಗಾರ್ಡನ್ ರೂವಾರಿ ಪ್ರೊ. ಸೊಲಬಕ್ಕನವರ ಹೇಳುತ್ತಾರೆ.

ಗೋಡೆಗಳು, ಗಾಜುಗಳಿಗೆ ಸೀಮಿತವಾಗಿದ್ದ ಪೇಂಟಿಂಗ್‌ಗೆ ಹೊಸ ರೂಪ ನೀಡುವ ಉದ್ದೇಶದೊಂದಿಗೆ ಕೈಗೆತ್ತಿಕೊಂಡಿರುವ ಈ ಕೆಲಸದಲ್ಲಿ ಹಲವಾರು ವಿಶಿಷ್ಟ ಸಮಕಾಲೀನ ಕಲಾ ಪ್ರಕಾರಗಳು ನುರಿತ 70 ಕಲಾವಿದರ ಕುಂಚಗಳಿಂದ ಅರಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT