ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಅತಿ ದೊಡ್ಡ ‘ಬಸವಧರ್ಮ ಧ್ವಜ’ ಅನಾವರಣ

Last Updated 13 ಜನವರಿ 2016, 19:30 IST
ಅಕ್ಷರ ಗಾತ್ರ

ಕೂಡಲಸಂಗಮ (ಬಾಗಲಕೋಟೆ): ಇಲ್ಲಿಯ ಬಸವಧರ್ಮ ಪೀಠದ ಆವರಣದಲ್ಲಿ ಬುಧವಾರ ವಿಶ್ವದ ಅತಿ ದೊಡ್ಡ ‘ಬಸವಧರ್ಮ ಧ್ವಜ’ ಅನಾವರಣಗೊಂಡಿತು.

ಈ ಧ್ವಜ 111 ಅಡಿ ಉದ್ದ, 11 ಅಡಿ ಅಗಲವಿದ್ದು, ಜಿಲ್ಲೆಯ ಅಮೀನಗಡದ ಯುವಕ ಮಂಜುನಾಥ ಬಂಡಿ ಸಿದ್ಧಪಡಿಸಿದ್ದಾರೆ. ಬೆಂಗಳೂರು ಬಳಿಯ ಕುಂಬಳ ಗೋಡಿನ ಬಸವಗಂಗೋತ್ರಿಯಲ್ಲಿ ನಿರ್ಮಾಣಗೊಳ್ಳಲಿರುವ 111 ಅಡಿ ಎತ್ತರದ ಬಸವಣ್ಣನವರ ಪ್ರತಿಮೆ ಕುರಿತು ಜನಜಾಗೃತಿ ಮೂಡಿಸಲು ಮತ್ತು ಯುವಕರನ್ನು ಧರ್ಮದತ್ತ ಆಕರ್ಷಿಸುವ ಉದ್ದೇಶದಿಂದ ಈ ಧ್ವಜವನ್ನು ನಿರ್ಮಿಸಲಾಗಿದೆ.

ಇದರಲ್ಲಿ 10 ಅಡಿಗೂ ದೊಡ್ಡದಾದ ‘ಶ್ರೀ ಗುರು ಬಸವ’ ಎನ್ನುವ ಧರ್ಮಲಾಂಛನವನ್ನು ಗದುಗಿನ ಕಲಾವಿದ ಪ್ರಕಾಶ ಬಂಡಿ ಬಿಡಿಸಿದ್ದಾರೆ.
ಮಾತೆ ಮಹಾದೇವಿ ಅವರು ಪೀಠಾರೋಹಣ ಮಾಡಿ 25 ವರ್ಷ ಪೂರೈಸಿದ್ದರ ನೆನಪಿಗಾಗಿ ಈ ಧ್ವಜ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT