ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಎತ್ತರದ ಸೇನಾ ನೆಲೆ ಸಿಯಾಚಿನ್‌

Last Updated 4 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ವಿವಾದ ಮತ್ತು ಆಪರೇಷನ್ ಮೇಘದೂತ
*ಮನುಷ್ಯ ವಾಸಕ್ಕೆ ಯೋಗ್ಯವಲ್ಲದ ಭೂಪ್ರದೇಶ ಎಂದು ಭಾರತ ಮತ್ತು ಪಾಕಿಸ್ತಾನ ನಡುವಣ 1949ರ ಕರಾಚಿ ಮತ್ತು 1972ರ ಶಿಮ್ಲಾ ಒಪ್ಪಂದದಲ್ಲಿ ವಿವರಿಸಲಾಗಿದೆ

*1970ರಿಂದ 1980ರ ನಡುವೆ ಸರ್ಕಾರದ ಅನುಮತಿ ಪಡೆದು ಪಾಕಿಸ್ತಾನ ಸೇನೆ ತನ್ನ ಸೈನಿಕರಿಗೆ ಸಿಯಾಚಿನ್‌ ತಪ್ಪಲಿನಲ್ಲಿ ಚಾರಣ ಆಯೋಜಿಸುತ್ತಿತ್ತು
*1984ರವರೆಗೂ ಎರಡೂ ದೇಶದ ಸೈನಿಕರು ಸಿಯಾಚಿನ್ ಪ್ರದೇಶಕ್ಕೆ ಕಾಲಿಟ್ಟಿರಲಿಲ್ಲ
*1984ರ ಏಪ್ರಿಲ್‌ನಲ್ಲಿ ಪಾಕಿಸ್ತಾನ  ಸೈನ್ಯದ ಒಂದು ತುಕಡಿ ಸಿಯಾಚಿನ್‌ ನೀರ್ಗಲ್ಲಿನತ್ತ ಚಲಿಸುತ್ತಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ಮಾಹಿತಿ
*1984 ಏಪ್ರಿಲ್ 13, ಆಪರೇಷನ್ ಮೇಘದೂತ ಆರಂಭ.  ಭಾರತೀಯ ವಾಯುಪಡೆ ಹೆಲಿಕಾಪ್ಟರ್‌ಗಳ ಮೂಲಕ ಸೇನೆಯ ಒಂದು ತುಕಡಿ ರವಾನೆ
*1984 ಏಪ್ರಿಲ್ 24, ಸಿಯಾಚಿನ್ ತಪ್ಪಲು ತಲುಪಿದ ಪಾಕಿಸ್ತಾನ ಸೇನೆ
*ಸಿಯಾ ಲಾ ಪಾಸ್, ಬಿಲಾಫೊಂಟ್ ಲಾ ಪಾಸ್‌, ಗ್ಯೋಂಗ್ ಲಾ ಪಾಸ್‌ಗಳ ಮೇಲೆ ಭಾರತದ ಹಿಡಿತ
*ಗ್ಯೋಂಗ್‌ ಲಾ ಪಾಸ್‌ನಿಂದ ಐದು ಕಿ.ಮೀ ದೂರದವರೆಗೂ ಪಾಕಿಸ್ತಾನ ಸೇನೆಯ ನಿಯಂತ್ರಣ
*2003ರ ನವೆಂಬರ್‌ನಲ್ಲಿ ಕದನ ವಿರಾಮ ಘೋಷಣೆ

ಆತ್ಮಹತ್ಯಾ ಕಾರ್ಯಾಚರಣೆ

*ಸಿಯಾಚಿನ್ ಸೇನಾ ನೆಲೆಗೆ ನಿಯೋಜನೆಗೊಳ್ಳುವುದನ್ನು ಆತ್ಮಹತ್ಯಾ ಕಾರ್ಯಾಚರಣೆ ಎಂದೇ ಪರಿಗಣಿಸಲಾಗುತ್ತದೆ
*ವಿಪರೀತ ಶೀತ ಇರುವುದರಿಂದ ಅರ್ಧ ನಿಮಿಷಕ್ಕೂ ಹೆಚ್ಚು ಕಾಲ ಶೀತಗಾಳಿಗೆ ತೆರೆದುಕೊಂಡರೆ, ದೇಹದ ಆ ಭಾಗ ಮರಗಟ್ಟಿ ಉದುರಿಹೋಗುತ್ತದೆ
* 15 ಸೆಕೆಂಡ್‌ಗಳ ಕಾಲ ರೈಫಲ್‌ನ ಟ್ರಿಗರ್‌, ಮ್ಯಾಗಝಿನ್‌ಗಳನ್ನು ಕೈಯಲಿ ಹಿಡಿದುಕೊಂಡರೆ, ಲೋಹದ ಸಂಪರ್ಕಕ್ಕೆ  ಬರುವ ಬೆರಳು ಮತ್ತು ಕೈನ ಭಾಗಗಳಲ್ಲಿ ವ್ರಣ ಆಗಲು ಆರಂಭಿಸುತ್ತದೆ. ಕೆಲವೇ ನಿಮಿಷಗಳಲ್ಲಿ ವ್ರಣ ಬಾಧಿತ ಭಾಗ ಉದುರಿಹೋಗುತ್ತದೆ
* ವಿಶಿಷ್ಟ ಕನ್ನಡಕಗಳನ್ನು ದಿನದ 24 ಗಂಟೆಗಳೂ ಧರಿಸಿರಲೇಬೇಕು. ಇಲ್ಲದಿದ್ದಲ್ಲಿ ಶೀತಗಾಳಿಗೆ ಕಣ್ಣುಗುಡ್ಡೆಗಳು ಊದಿಕೊಂಡು ಸಿಡಿಯುವ ಅಪಾಯವಿರುತ್ತದೆ
* ನಿದ್ರಾಹೀನತೆ, ಅಜೀರ್ಣ, ನೆನಪಿನ ಶಕ್ತಿ ನಷ್ಟ, ಉಸಿರಾಟದ ಸಮಸ್ಯೆ ಸಾಮಾನ್ಯ
* ಚೀತಾ/ಚೇತಕ್‌ ಲಘು ಹೆಲಿಕಾಫ್ಟರ್‌ಗಳನ್ನು ಮಾತ್ರ ಇಳಿಸಲು ಸಾಧ್ಯವಿದೆ. ಸೈನಿಕರ ಆರೋಗ್ಯ ಹದಗೆಟ್ಟಾಗ ಅವರನ್ನು ಕರೆತರಲು ಮಾತ್ರ ಇವುಗಳನ್ನು ಬಳಸಲಾಗುತ್ತಿದೆ
* ರಷ್ಯಾ ನಿರ್ಮಿತ ಎಂ–17 ಹೆಲಿಕಾಪ್ಟರ್‌ಗಳ ಮೂಲಕ ಆಹಾರ, ಬಟ್ಟೆ ಮತ್ತು ಸೇನಾ ಸಾಮಗ್ರಿಗಳನ್ನು ನೆಲಕ್ಕೆ ಇಳಿಸಲಾಗುತ್ತದೆ
* ಸೀಮೆಎಣ್ಣೆ ಸ್ಟೌವ್‌ ಉರಿಸಿ ಸೈನಿಕರು ಬಿಸಿ ಕಾಯಿಸಿಕೊಳ್ಳುತ್ತಾರೆ
* ರೈಫಲ್‌, ಮೆಷಿನ್‌ಗನ್‌ಗಳನ್ನು ಸುಸ್ಥಿತಿಯಲ್ಲಿ ಇಡಲು ಕುದಿಯುತ್ತಿರುವ ನೀರಿನಲ್ಲಿ ಇಡಲಾಗಿರುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT