ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಮೊದಲ ‘ಬಿಳಿ ಹುಲಿ ಸಫಾರಿ’

ನಾಲ್ಕು ದಶಕಗಳ ನಂತರ ಮೂಲ ಆವಾಸಕ್ಕೆ ಅಪರೂಪದ ಪ್ರಾಣಿಗಳು
Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಭೋಪಾಲ್ (ಪಿಟಿಐ): ಬಿಳಿ ಹುಲಿಗಳ ಘರ್ಜನೆ­ಯನ್ನು ಅವುಗಳ ನೈಸರ್ಗಿಕ ನೆಲೆಯಲ್ಲೇ ಕೇಳುವ ಅವಕಾಶ ಪ್ರವಾಸಿ­ಗ­ರಿಗೆ ದೊರೆಯಲಿದೆ. ಇಲ್ಲಿನ ರೇವಾ ಸಮೀಪದ ಮುಕುಂದ್‌­ಪುರ್ ಅಭಯಾ­ರ­ಣ್ಯದದಲ್ಲಿ  ವಿಶ್ವದ ಮೊದಲ ‘ಬಿಳಿ ಹುಲಿ ಸಫಾರಿ’ ಆರಂಭ­ವಾಗಲಿದೆ.

‘ಶೇ 99ರಷ್ಟು ಕಾಮ­ಗಾರಿ ಮುಗಿದಿದೆ. ಮುಂದಿನ ತಿಂಗಳಿ­ನಲ್ಲೇ ಸಫಾರಿ  ಆರಂಭವಾಗ­ಬ­ಹುದು. ಆರಂಭ­ದಲ್ಲಿ ಎರಡು ಹೆಣ್ಣು ಮತ್ತು ಒಂದು ಗಂಡು ಬಿಳಿ ಹುಲಿಗಳನ್ನು ಸಫಾರಿಯಲ್ಲಿ ಬಿಡ­ಲಾ­ಗುತ್ತದೆ. ನಂತರ ನೈಸರ್ಗಿಕ ನೆಲೆಯಲ್ಲಿ ಅವುಗಳ ಸಂತಾನಭಿವೃದ್ಧಿಗೆ ಪ್ರಯತ್ನಿಸಲಾಗುತ್ತದೆ. ಬಿಳಿ ಹುಲಿಗಳ ಇತಿಹಾಸ ತಿಳಿಸುವ ವ್ಯವಸ್ಥೆಯೂ ಸಫಾರಿಯಲ್ಲಿ ಇರಲಿದೆ’ ಎಂದು ರಾಜ್ಯದ ಸಾರ್ವಜನಿಕ ಸಂಪರ್ಕ ಸಚಿವ ರಾಜೇಂದ್ರ ಶುಕ್ಲಾ ತಿಳಿಸಿದ್ದಾರೆ.

ಮೋಹನ್ ವೈಟ್ ಟೈಗರ್ ಸಫಾರಿ: ಈ ಸಫಾರಿಗೆ ‘ಮೋಹನ್ ವೈಟ್ ಟೈಗರ್ ಸಫಾರಿ’ ಎಂದು ಹೆಸರಿಡ­ಲಾ­ಗಿದೆ. ಮುಕುಂದ್‌ಪುರ್ ಅರಣ್ಯ ಪ್ರದೇಶ­ದಲ್ಲಿ 1951ರಲ್ಲಿ ಮೊದಲ ಬಿಳಿ ಹುಲಿ ಪತ್ತೆಯಾಗಿತ್ತು. ಅದನ್ನು ಗುರುತಿಸಿದ್ದ ಮಹಾರಾಜ ಮಾರ್ತಾಂಡ ಸಿಂಗ್, ಬಿಳಿ ಹುಲಿಯನ್ನು ಹಿಡಿಸಿ ಅರಮನೆಗೆ  ತರಿಸಿದ್ದರು. ಅದಕ್ಕೆ ಮೋಹನ್ ಎಂದು ನಾಮಕರಣ ಮಾಡಲಾಗಿತ್ತು. ಆದರೆ ಮರುದಿನವೇ ಮೋಹನ್‌ ಅಲ್ಲಿಂದ ತಪ್ಪಿಸಿ­ಕೊಂಡಿತ್ತು.

ನಂತರದ ಎರಡು ದಶಕಗಳ ಕಾಲ ಅದೇ ಅರಣ್ಯ ಪ್ರದೇಶದಲ್ಲಿ ಓಡಾಡಿ­ಕೊಂ­ಡಿದ್ದ ಮೋಹನ್‌ನ ಸಂಪ­ರ್ಕಕ್ಕೆ ಬಂದ ಹೆಣ್ಣು ಬಿಳಿ ಹುಲಿಗ­ಳಿಂದ, ಬಿಳಿ ಹುಲಿಗಳ ಸಂಖ್ಯೆ ಹೆಚ್ಚಾಗಿತ್ತು. ಅವುಗಳ ಸಂತತಿ ಇತರ ಪ್ರದೇಶಗಳಿಗೂ ಹರಡಿತ್ತು.  ಇದೇ ಪ್ರದೇಶದಲ್ಲಿ ಬದುಕಿದ್ದ ಮೋಹನ್‌ನ ಸಂತತಿಯ ವಿರಾಟ್ ಎಂಬ ಗಂಡು ಹುಲಿ 1976ರಲ್ಲಿ ಮರಣ ಹೊಂದಿತ್ತು. ನಂತರ ಅಲ್ಲಿದ್ದ ಸುಖೇತಿ ಎಂಬ ಹೆಣ್ಣು ಹುಲಿಯನ್ನು ದೆಹಲಿಗೆ ಸ್ಥಳಾಂತರಿಸಲಾಗಿತ್ತು. ಆನಂತರ ಈ ಪ್ರದೇಶದಲ್ಲಿ ಬಿಳಿ ಹುಲಿಗಳೇ ಇರಲಿಲ್ಲ.

ಈಗ ವಿಶ್ವದಾದ್ಯಂತ ಬೇರೆ ಬೇರೆ ಅಭಯಾರಣ್ಯ ಮತ್ತು ಮೃಗಾಲಯ­ಗ­ಳಲ್ಲಿ 114 ಬಿಳಿ ಹುಲಿಗಳಿವೆ. ನಾಲ್ಕು ದಶಕಗಳ ನಂತರ ಬಿಳಿ ಹುಲಿಗಳ ನೈಸರ್ಗಿಕ ಆವಾಸಸ್ಥಾನಕ್ಕೆ ಅವುಗಳನ್ನು ತರಲಾಗುತ್ತಿದೆ. ಇಲ್ಲಿ ಆರಂಭವಾಗ­ಲಿ­ರುವ ಬಿಳಿ ಹುಲಿ ತಳಿ ಅಭಿವೃದ್ಧಿ ಕೇಂದ್ರಕ್ಕೆ ಮಹಾರಾಜ ಮಾರ್ತಾಂಡ ಅವರ ಹೆಸರು ಇಡಲಾಗುತ್ತದೆ ಎಂದು ರಾಜೇಂದ್ರ ಶುಕ್ಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT