ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸ ಮೂಡಿಸಲು ಪಾಕಿಸ್ತಾನ ಯತ್ನ

ವಿದೇಶಾಂಗ ಕಾರ್ಯದರ್ಶಿಗಳ ಸಭೆ ಇಂದು
Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಗಡಿಯ ಲ್ಲಿಯ ಉದ್ವಿಗ್ನ ಪರಿಸ್ಥಿತಿಯನ್ನು ಶಮನ­ಗೊಳಿಸಲು 2003ರ ಕದನ ವಿರಾಮ ಒಪ್ಪಂದವನ್ನು ಪಾಲಿಸು­ವುದೂ ಸೇರಿ­ದಂತೆ ವಿಶ್ವಾಸ ಮೂಡಿ­ಸುವ ಕ್ರಮ­ಗಳನ್ನು ಮಂಗಳವಾರ ನಡೆ­ಯಲಿರುವ ವಿದೇಶಾಂಗ ಕಾರ್ಯದರ್ಶಿ­ಗಳ ಮಟ್ಟದ ಸಭೆಯ ಮುಂದಿಡಲು ಪಾಕಿಸ್ತಾನ ಬಯಸಿದೆ.

ಸಾರ್ಕ್ ದೇಶಗಳ ಪ್ರವಾಸದಲ್ಲಿ ಇರುವ  ಭಾರತದ ವಿದೇಶಾಂಗ ಕಾರ್ಯ­ದರ್ಶಿ ಎಸ್‌. ಜೈಶಂಕರ್ ಅವರು ಎರಡು ದಿನಗಳ ಭೇಟಿಗಾಗಿ ಮಂಗಳ­ವಾರ ಇಸ್ಲಾಮಾಬಾದ್‌ಗೆ ಆಗ­ಮಿ­ಸ­ಲಿದ್ದಾರೆ. ಥಿಂಪು ಮತ್ತು ಢಾಕಾಗೆ ಭೇಟಿ ನೀಡಿ­ರುವ ಜೈಶಂಕರ್ ಅವರು ಇಸ್ಲಾಮಾ­ಬಾದ್ ಸಭೆಯ ನಂತರ ಆಫ್ಘಾನಿಸ್ತಾನಕ್ಕೆ ತೆರಳಲಿದ್ದಾರೆ.

ಕಳೆದ ಹಲವಾರು ತಿಂಗಳಿಂದ ಗಡಿ­ಯಲ್ಲಿ ಇರುವ ದ್ವೇಷಮಯ ವಾತಾ­ವರ­ಣಕ್ಕೆ ಪೂರ್ಣವಿರಾಮ ಹಾಕಲು ಪಾಕಿಸ್ತಾನ ಬಯಸಿದೆ ಎಂದು ಹಿರಿಯ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ‘ಎಕ್ಸ್‌ಪ್ರೆಸ್‌ ಟ್ರಿಬೂನ್’ ವರದಿ ಮಾಡಿದೆ.

ಅಧಿಕಾರಿಗಳ ಮಟ್ಟದಲ್ಲಿ ಮಾಧ್ಯಮ­ಗಳಿಗೆ ಪರಸ್ಪರ ವಿರೋಧದ ಹೇಳಿಕೆ ನೀಡುವುದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಆದ್ದ­ರಿಂದ ಇಂತಹ ಹೇಳಿಕೆ ನೀಡುವುದನ್ನು ತಡೆಯಬೇಕು ಎಂಬ ಪ್ರಸ್ತಾವವನ್ನು ಪಾಕಿಸ್ತಾನ ಮಂಡಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

ಏಳು ತಿಂಗಳ ಹಿಂದೆ ದೆಹಲಿಯಲ್ಲಿ ಇರುವ ಪಾಕಿಸ್ತಾನ ರಾಯಭಾರ ಕಚೇ­ರಿಯ ಅಧಿಕಾರಿಗಳು ಕಾಶ್ಮೀರ ಪ್ರತ್ಯೇ­ಕತಾ ವಾದಿಗಳ ಜತೆ ಮಾತುಕತೆ ನಡೆಸಿ­ದ್ದ­ರಿಂದ ಭಾರತ ವಿದೇಶಾಂಗ ಕಾರ್ಯ­ದರ್ಶಿಗಳ ಮಟ್ಟದ ಮಾತುಕತೆ­ಯನ್ನು ರದ್ದುಪಡಿಸಿತ್ತು. ಜೈಶಂಕರ್ ಅವರು ಪಾಕಿ­ಸ್ತಾನಕ್ಕೆ ಭೇಟಿ ನೀಡಿದ ತಕ್ಷಣ ನಾಟಕೀಯ ಫಲಿತಾಂಶ ದೊರಕುತ್ತದೆ ಎಂಬ ನಿರೀಕ್ಷೆ ಇಲ್ಲ ಎನ್ನಲಾಗಿದೆ,

ಗುಣಾತ್ಮಕ ಬದಲಾವಣೆ: ಕಳೆದ ವರ್ಷ ಕಾಬೂಲ್‌ನಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದ್ವಿಪಕ್ಷೀಯ ಸಂಬಂಧದಲ್ಲಿ ಅದರಲ್ಲೂ ಭದ್ರತೆಯ ವಿಚಾರದಲ್ಲಿ ಗುಣಾತ್ಮಕ ಬದಲಾವಣೆ ಆಗಿದೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನದಲ್ಲಿಯ ಆಫ್ಘಾನಿಸ್ತಾ­ನದ ರಾಯಭಾರಿ ಜನಾನ ಮೊಸಾ­ಜಾಯಿ ಜತೆ ಮಾತನಾಡಿದ ಷರೀಫ್ ಅವರು, ಆಫ್ಘಾನಿಸ್ತಾನದಲ್ಲಿ ಹಿಮ­ಕುಸಿತ­­ದಿಂದ ಆಗಿರುವ ಅನಾಹುತದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT