ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಚೆಸ್‌: ಆನಂದ್‌ಗೆ ಕೈ ತಪ್ಪಿದ ಪ್ರಶಸ್ತಿ

11ನೇ ಸುತ್ತಿನಲ್ಲಿ ಗೆದ್ದ ಕಾರ್ಲ್‌ಸನ್‌ ಚಾಂಪಿಯನ್‌
Last Updated 23 ನವೆಂಬರ್ 2014, 20:07 IST
ಅಕ್ಷರ ಗಾತ್ರ

ಸೋಚಿ (ಪಿಟಿಐ): ಒಂದು ಸುತ್ತಿನ ಪಂದ್ಯ ಬಾಕಿ ಇರುವಾಗಲೇ ವಿಶ್ವ ಚೆಸ್‌ ಚಾಂಪಿಯನ್‌ ಯಾರು ಎನ್ನುವುದು ನಿರ್ಧಾರವಾಗಿದೆ. ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಹನ್ನೊಂದನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದು ಮತ್ತೊಮ್ಮೆ ವಿಶ್ವ ಚೆಸ್‌ ಚಾಂಪಿಯನ್‌ ಪಟ್ಟವನ್ನು ತಮ್ಮದಾಗಿಸಿಕೊಂಡರು.

ಭಾನುವಾರ ನಡೆದ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಸೋಲು ಕಂಡರು. ಒಟ್ಟು 12 ಸುತ್ತುಗಳ ಪಂದ್ಯ ಇದಾಗಿತ್ತು. ಆದರೆ, ಆನಂದ್ ಬಳಿ ಈಗ 4.5 ಪಾಯಿಂಟ್‌ಗಳಿವೆ. ಆದರೆ, ಕಾರ್ಲ್‌ಸನ್‌ 6.5 ಪಾಯಿಂಟ್ಸ್‌ ಹೊಂದಿದ್ದಾರೆ. ಕೊನೆಯ ಪಂದ್ಯದಲ್ಲಿ ಆನಂದ್ ಗೆಲುವು ಪಡೆದರೂ, ಅವರಿಗೆ ವಿಶ್ವ ಚೆಸ್‌ ಪಟ್ಟ ಒಲಿಯುವುದಿಲ್ಲ.

ಹೋದ ಸಲ ಚೆನ್ನೈನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲೂ ಕಾರ್ಲ್‌ಸನ್‌ ಅವರು ಆನಂದ್ ವಿರುದ್ಧವೇ ಪ್ರಶಸ್ತಿ ಗೆದ್ದಿದ್ದರು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತದ ಆಟಗಾರನಿಗೆ ಸಾಧ್ಯವಾಗಲಿಲ್ಲ.

ಹನ್ನೊಂದನೇ ಸುತ್ತಿನಲ್ಲಿ ಆನಂದ್ ಕೆಲ ತಪ್ಪುಗಳನ್ನು ಮಾಡಿದ್ದು ಅವರಿಗೆ ಮುಳುವಾಯಿತು. ‘ಮಹತ್ವದ ಪಂದ್ಯದಲ್ಲಿ ಗೆಲುವು ಪಡೆಯಲು ನನಗೆ ಅತ್ಯುತ್ತಮ ಅವಕಾಶವಿತ್ತು. ಆದರೆ, ನಾನು ಅತ್ಯಂತ ಕೆಟ್ಟದಾಗಿ ಆಡಿದೆ. ಆದ್ದರಿಂದ ನನಗೆ ಸೋಲಿನ ಶಿಕ್ಷೆ ಎದುರಾಯಿತು’ ಎಂದು ಆನಂದ್‌ ಪತ್ರಿಕಾಗೋಷ್ಠಿಯಲ್ಲಿ ಅತ್ಯಂತ ಬೇಸರದಿಂದ ನುಡಿದರು. 45 ನಡೆಗಳ ಬಳಿಕ ಪಂದ್ಯ ಅಂತ್ಯ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT