ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಕಾರಿ ಬೀಜ ಸೇವನೆ: ಅಸ್ವಸ್ಥ

Last Updated 2 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೋಟಾ (ರಾಜಸ್ತಾನ)(ಪಿಟಿಐ): ಬಾದಾಮಿ ಬೀಜ­ಗಳೆಂದು ಭಾವಿಸಿ ವಿಷಕಾರಿ ಬೀಜಗಳನ್ನು ಸೇವಿ­ಸಿ­ದ್ದ­ರಿಂದ 63 ಮಕ್ಕಳು ಸೇರಿ ಸುಮಾರು 90 ಜನರು ಅಸ್ವಸ್ಥ­ರಾಗಿ­ರುವ ಘಟನೆ ಈ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ಮದುವೆ ಕಾರ್ಯಕ್ರಮದಲ್ಲಿ ಭಾಗ­ವಹಿ­ಸಲು ಬಂದಿದ್ದ ಮಕ್ಕಳು ಹಾಗೂ ಮಹಿಳೆ­ಯರು ಅಲ್ಲಿದ್ದ ಹಣ್ಣುಗಳನ್ನು ಬಾದಾಮಿ­ಯೆಂದು ಅಂದಾಜು ಮಾಡಿ ಸೇವಿಸಿ­ದ್ದಾರೆ. ಆರಂಭದಲ್ಲಿ ಅಲ್ಲಿ ಆಟ ಆಡು­ತ್ತಿದ್ದ  ಮಕ್ಕಳು ಮರದಿಂದ ಕಿತ್ತು ಬೀಜ­ಗಳನ್ನು ಸೇವಿಸಿದ್ದಾರೆ. ನಂತರ ಅಲ್ಲಿದ್ದ ಮಹಿಳೆ­ಯರಿಗೆ ಸೇವಿಸುವಂತೆ ತಿಳಿಸಿ­ದ್ದಾರೆ ಎನ್ನಲಾಗಿದೆ.

ಇದರಿಂದ ಮದುವೆಗೆ ಬಂದಿದ್ದ ಅನೇ­ಕರು ಅಸ್ವಸ್ಥರಾಗಿದ್ದು, ಕೂಡಲೇ ಅವ­ರನ್ನು ಚಿಕಿತ್ಸೆ­ಗಾಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಯಿತು.
ಹೊಟ್ಟೆ­ನೋವು, ವಾಂತಿ ಹಾಗೂ ನಿರ್ಜಲೀಕರಣದಿಂದ ಮಂಗಳವಾರ ರಾತ್ರಿ  63 ಮಕ್ಕಳು ಹಾಗೂ 25 ಮಹಿಳೆ­ಯರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೋಟಾ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಆರ್‌.ಕೆ. ಅಸೇರಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT