ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಯಾಸಕ್ತಿ ಕೊರತೆ

ಅಂಕುರ 65
Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಕಳೆದವಾರ ಮಹಿಳೆಯರ ವಿಷಯಾಸಕ್ತಿಯಲ್ಲಿ ಆಗಬಹುದಾದ ನ್ಯೂನ್ಯತೆಯ ಬಗ್ಗೆ ಚರ್ಚಿಸಿದ್ದೆವು. ಇದಲ್ಲದೇ ಇನ್ನಷ್ಟು ಸಮಸ್ಯೆಗಳೂ ಇವೆ. ಆದರೆ  ಅವು ಅಂಥ ಮಹತ್ವದ ಕಾರಣಗಳಲ್ಲ... ಅಥವಾ ವಿರಳವೂ ಆಗಿರುತ್ತವೆ.

ಸಾಮಾನ್ಯವಾಗಿ ಈ ಸಮಸ್ಯೆಗಳನ್ನು ಹೊಂದಿರುವವರು ನಿದ್ರಾಹೀನರೂ ಆಗಿರುತ್ತಾರೆ. ಆದರೆ ವಿಷಯಾಸಕ್ತಿಯಲ್ಲಿ ಕೊರತೆ ಉಂಟಾಗಲು ಅಥವಾ ಸಮಸ್ಯೆಯಾಗಿ ಬೆಳೆಯಲು ಕಾರಣಗಳೇನು?

ಆನುವಂಶಿಕ ಕಾರಣಗಳು: ನಮ್ಮ ಆನುವಂಶಿಕ ಕಾರಣಗಳಿಂದಾಗಿಯೂ ಲೈಂಗಿಕಾಸಕ್ತಿಯಲ್ಲಿ ಕೊರತೆ ಕಾಣಿಸಿಕೊಳ್ಳುತ್ತದೆ.

ಬಾಂಧವ್ಯದ ಸಮಸ್ಯೆಗಳು: ಬಾಂಧವ್ಯದಲ್ಲಿ ಅಭದ್ರತೆಯ ಭಾವಗಳು, ಕೆಲ ದಂಪತಿಗಳಲ್ಲಿ ತಮ್ಮ ಲೈಂಗಿಕ ಆಸಕ್ತಿಯ ಬಗ್ಗೆ ಸಂವಹನದ ಕೊರತೆಯಿಂದಲೂ ಇಂಥ ಸಮಸ್ಯೆಗಳು ಕಂಡು ಬರುತ್ತವೆ.

ಪ್ರೀತಿಯ ತಂತ್ರಗಳು: ಕೆಲವೊಮ್ಮೆ ದಾಂಪತ್ಯದಲ್ಲಿ ವಿರಸವಿದ್ದಲ್ಲಿ, ಸಂಗಾತಿಯನ್ನು ಅವಮಾನಿಸುವ ಸಮಸ್ಯೆ ಇದ್ದಲ್ಲಿ, ಮುನ್ನಲಿವಿನಲ್ಲಿ ತೊಡಗಿಕೊಳ್ಳದಿದ್ದರೆ ಸಂಗಾತಿಗಳು ಒಂದಾಗುವುದು ಕಷ್ಟವಾಗುತ್ತದೆ.

ಭಾವನಾತ್ಮಕ ಸಮಸ್ಯೆಗಳು: ಸುದೀರ್ಘಕಾಲದಿಂದ ಒತ್ತಡದಲ್ಲಿದ್ದರೆ, ಖಿನ್ನತೆಯಿಂದ ಬಳಲುತ್ತಿದ್ದರೆ, ಉದ್ವೇಗದ ಸಮಸ್ಯೆಯಿದ್ದರೆ ಲೈಂಗಿಕ ನಿರಾಸಕ್ತಿ ಹುಟ್ಟುತ್ತದೆ.

ಮಾನಸಿಕ ಸಮಸ್ಯೆಗಳು: ಲೈಂಗಿಕ ಕ್ರಿಯೆಯ ಬಗ್ಗೆ ಅರಿವಿಲ್ಲದೇ ಇರುವುದು, ಏಕಾಂತದ ಕೊರತೆ, ಸಮಯದ ಕೊರತೆ, ಸುದೀರ್ಘ ಕಾಲದಿಂದ ಲೈಂಗಿಕ ಕ್ರಿಯೆಯಿಂದ ದೂರವಿದ್ದರೆ ಲೈಂಗಿಕ ನಿರಾಸಕ್ತಿ ಮೂಡುತ್ತದೆ. ಮುನ್ನಲಿವಿನ ಕೊರತೆ, ಲೈಂಗಿಕತೆಯ ಬಗ್ಗೆ ಅರಿವಿಲ್ಲದೇ ಇರುವುದು, ಸಂಗಾತಿಗಳ ನಡುವೆ ಪರಸ್ಪರ ಮಾತುಕತೆ ಇಲ್ಲದೇ ಇರುವುದು, ಅಥವಾ ತಮ್ಮ ಭಾವನೆಗಳನ್ನು ಹಂಚಿಕೊಳ್ಳದೇ ಇರುವುದೂ ಲೈಂಗಿಕ ನಿರಾಸಕ್ತಿಗೆ ಕಾರಣಗವಾಗುತ್ತದೆ.

ಲೈಂಗಿಕ ಕ್ರಿಯೆಯ ಕುರಿತು ದೃಷ್ಟಿಕೋನ: ಬಹುತೇಕ ಜನರಿಗೆ ಲೈಂಗಿಕತೆಯ ಬಗ್ಗೆ ನಿರಾಸಕ್ತಿ ಮೂಡಲು ಅವರು ಬೆಳೆದು ಬಂದ ಪರಿಸರವೂ ಕಾರಣವಾಗುತ್ತದೆ. ಬಹುತೇಕ ಕುಟುಂಬಗಳಲ್ಲಿ ಲೈಂಗಿಕತೆಯ ಬಗ್ಗೆ ಮಾತನಾಡುವುದೇ ಅಪರಾಧವಾಗಿರುತ್ತದೆ. ಹಾಗಿದ್ದಾಗ ಲೈಂಗಿಕ ಶಿಕ್ಷಣ ದೊರೆಯುವುದಾದರೂ ಎಲ್ಲಿಂದ? ಯಾವಾಗಲೂ ನಿರ್ಬಂಧನೆಗಳಲ್ಲಿಯೇ ಬೆಳೆಯುವುದರಿಂದ ಒಂದು ಬಗೆಯ ನಿರಾಸಕ್ತಿ ಮೂಡಿರುತ್ತದೆ. ಈ ದಿನಗಳಲ್ಲಿ ಇನ್ನೊಂದು ಬೆಳವಣಿಗೆಯೂ ಗಮನೀಯವಾಗಿದೆ. ಅಂತರ್ಜಾಲ ಹಾಗೂ ಟೀವಿ ಕಾರ್ಯಕ್ರಮಗಳಿಂದ ಕೆಲವೊಮ್ಮೆ ಅತಿ ಹೆಚ್ಚು ನಿರೀಕ್ಷೆಗಳನ್ನು ಹೊತ್ತಿರುತ್ತಾರೆ. ಅದೂ ಅವರಲ್ಲಿ ಒಂದು ಬಗೆಯ ಒತ್ತಡವನ್ನು ಹುಟ್ಟುಹಾಕಿರುತ್ತದೆ.

ಇನ್ನಿತರ ದೈಹಿಕ ಕಾರಣಗಳು: ಲೈಂಗಿಕ ನಿರಾಸಕ್ತಿಯಿಂದ ಸೂಕ್ತ ಉದ್ರೇಕವಿಲ್ಲದೇ ಇರುವುದು, ಇಲ್ಲವೇ ಯೋನಿಯ ಶುಷ್ಕತನದಿಂದಾಗಿ ನೋವು ಕಾಣಿಸಿಕೊಳ್ಳುವುದು, ಇದಕ್ಕೆ ಯಾವಾಗಲೋ ಆದ ಗಾಯಗಳು ಕಾರಣವಾಗಿರುತ್ತವೆ. ಅಥವಾ ಲೈಂಗಿಕ ಕ್ರಿಯೆಯಲ್ಲಿ ಬಳಸುವ ಜೆಲ್‌ ಅಥವಾ ಕಾಂಡೋಮ್‌ನಿಂದಾಗಿ ಕಿರಿಕಿರಿಯಾಗುವುದು... ಇದಾವುದೂ ಇಲ್ಲದಿದ್ದರೆ ವಿನಾಕಾರಣದ ಆತಂಕವೂ ಲೈಂಗಿಕ ನಿರಾಸಕ್ತಿಗೆ ಕಾರಣವಾಗುತ್ತದೆ.

ಸೋಂಕು: ಲೈಂಗಿಕ ಸೋಂಕು ರೋಗಗಳಿದ್ದರೆ ಅವುಗಳ ಲಕ್ಷಣಗಳಿಂದಾಗಿ ಕಿರಿಕಿರಿಯಾಗುತ್ತದೆ. ಇದರಿಂದಲೂ ಲೈಂಗಿಕ ನಿರಾಸಕ್ತಿ ಉಂಟಾಗುತ್ತದೆ.

ಹಾರ್ಮೋನ್‌ ಏರುಪೇರು: ಕೆಲವೊಮ್ಮೆ ಹಾರ್ಮೋನುಗಳ ಬಿಡುಗಡೆಯಲ್ಲಿ ಆಗುವ ಏರುಪೇರಿನಿಂದಾಗಿಯೂ ಲೈಂಗಿಕತೆಯಲ್ಲಿ ಆಸಕ್ತಿ ಹುಟ್ಟುವುದಿಲ್ಲ. ಟೆಸ್ಟೊಸ್ಟರಾನ್‌ನಲ್ಲಿ ಆಗುವ ಕೊರತೆ ಇಲ್ಲವೇ ಪ್ರೊಲ್ಯಾಕ್ಟಿನ್‌ನಂತಹ ಇತರ ಹಾರ್ಮೋನುಗಳ ಕೊರತೆಯಿಂದಾಗಿಯೂ ಲೈಂಗಿಕತೆಯು ಆಸಕ್ತಿ ಕೆರಳಿಸದ ಸಂಗಾತಿಯಾಗುತ್ತದೆ. ಇಲ್ಲವೇ ಉದ್ರೇಕದ, ಉದ್ವೇಗದ ಕೊರತೆಯಾಗುತ್ತದೆ. 

ಎಂಡೊಮೆಟ್ರಿಯೊಸಿಸ್‌, ಡಿಂಭನಾಳದ ಸಂಕುಚನ ಇಲ್ಲವೇ ಇತರ ದೈಹಿಕ ತೊಂದರೆಗಳೂ ಲೈಂಗಿಕ ಕ್ರಿಯೆಗೆ ತೊಡಕುಂಟು ಮಾಡುತ್ತವೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆಯಿಂದಾಗಿ ನರಗಳಿಗೆ ತೊಂದರೆಯಾದರೆ, ಮಧುಮೇಹ, ರಕ್ತ ಪರಿಚಲನೆಯ ಸಮಸ್ಯೆ, ಕೆಲವು ಬಗೆಯ ಕ್ಯಾನ್ಸರ್‌ ಇವೆಲ್ಲವೂ ಲೈಂಗಿಕ ನಿರಾಸಕ್ತಿಯನ್ನು ಅಥವಾ ಅಸಾಮರ್ಥ್ಯವನ್ನು ಸೂಚಿಸಬಹುದಾಗಿದೆ.
ಮಾಹಿತಿಗೆ: 1800 208 4444

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT