ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಕ್ಕೆ ಮಾಚಿದೇವರ ಹೆಸರಿಡಿ

ಮೇಯರ್‌ಗೆ ವಾಟಾಳ್ ನಾಗರಾಜ್ ಮನವಿ
Last Updated 25 ನವೆಂಬರ್ 2014, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ಯಾವುದಾ­ದರೂ ಒಂದು ಪ್ರಮುಖ ವೃತ್ತಕ್ಕೆ ಮಡಿವಾಳ ಮಾಚಿದೇವರ ಹೆಸರು ಇಡಬೇಕು’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖಂಡ ವಾಟಾಳ್‌ ನಾಗರಾಜ್‌ ಮಂಗಳ­ವಾರ ಮೇಯರ್‌ ಎನ್‌. ಶಾಂತ­ಕುಮಾರಿ ಅವರಿಗೆ ಮನವಿ ಅರ್ಪಿಸಿದರು.

‘ಕನ್ನಡ ನಾಡಿನ ಮಹಾನ್‌ ಶರಣ­ರಲ್ಲಿ ಒಬ್ಬರಾದ ಮಡಿವಾಳ ಮಾಚಿದೇವ ಅವರ ಹೆಸರನ್ನು ನಗರದಲ್ಲಿ ಯಾವುದೇ ರಸ್ತೆ ಇಲ್ಲವೆ ವೃತ್ತಕ್ಕೆ ಇದುವರೆಗೆ ಇಡದಿರುವುದು ಲೋಪ. ಅದನ್ನು ಈಗ ಸರಿಪಡಿಸ­ಬೇಕು’ ಎಂದು ಅವರು ಹೇಳಿದರು. ಕೌನ್ಸಿಲ್‌ ಸಭೆಯಲ್ಲಿ ಈ ಸಂಬಂಧ ಪ್ರಸ್ತಾವ ಮಂಡಿಸಿ, ನಿರ್ಣಯ ಕೈಗೊಳ್ಳಲಾಗುವುದು ಎಂದು ಮೇಯರ್‌ ಶಾಂತಕುಮಾರಿ ಭರವಸೆ ನೀಡಿದರು.

ಪ್ರತಿಮೆಗಳಿಗೆ ಹಗ್ಗ: ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತ­ನಾಡಿದ ವಾಟಾಳ್‌ ನಾಗರಾಜ್‌, ರಾಜ್ಯದ ಪ್ರಮುಖ ನಗರಗಳ ಹೆಸರು­ಗಳನ್ನು ಕನ್ನಡಮಯ ಮಾಡಿದಂತೆ ಬೆಂಗಳೂರಿನ ರಸ್ತೆ, ವೃತ್ತ, ಉದ್ಯಾನ ಹಾಗೂ ಆಸ್ಪತ್ರೆಗಳ ಇಂಗ್ಲಿಷ್‌ ಹೆಸರುಗಳನ್ನು ತೆಗೆದುಹಾಕಿ ಕನ್ನಡದ ಸಾಧಕರ ಹೆಸರನ್ನು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

‘ರಾಣಿ ವಿಕ್ಟೋರಿಯಾ ಸೇರಿದಂತೆ ಇಂಗ್ಲಿಷರ ಪ್ರತಿಮೆಗಳನ್ನು ತೆಗೆದು ಯಾವುದಾದರೂ ವಸ್ತು ಸಂಗ್ರಹಾಲ­ಯದಲ್ಲಿ ಇಡಬೇಕು. ಇಲ್ಲದಿದ್ದರೆ ಆ ಪ್ರತಿಮೆಗಳಿಗೆ ಕನ್ನಡಪರ ಹೋರಾಟಗಾರರು ಹಗ್ಗ ಹಾಕಿ ಎಳೆದು ಹಾಕುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT