ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ವಿಳಂಬ: ಅಧ್ಯಕ್ಷೆ, ಅಧಿಕಾರಿಗಳಿಗೆ ದಿಗ್ಬಂಧನ

Last Updated 19 ಡಿಸೆಂಬರ್ 2014, 6:56 IST
ಅಕ್ಷರ ಗಾತ್ರ

ಕುಷ್ಟಗಿ: ಕಳೆದ ಮೂರು ತಿಂಗಳಿನಿಂ­ದಲೂ ವೇತನ ಪಾವತಿಸದೇ ಸತಾಯಿ­ಸಲಾಗುತ್ತಿದೆ ಎಂದು ದೂರಿದ ಪುರಸಭೆಯ ಗುತ್ತಿಗೆ ಆಧಾರಿತ ಪೌರಕಾರ್ಮಿಕರು ಅಧ್ಯಕ್ಷೆ ಮಂಜುಳಾ ನಾಗರಾಳ ಸೇರಿದಂತೆ ಸದಸ್ಯರು, ಅಧಿಕಾರಿಗಳಿಗೆ ಕಚೇರಿಯಲ್ಲಿಯೇ ದಿಗ್ಬಂಧನ ವಿಧಿಸಿದ ಘಟನೆ ಗುರುವಾರ ನಡೆಯತು.

ಪಟ್ಟಣದ ನೈರ್ಮಲ್ಯ ವ್ಯವಸ್ಥೆ ಕಾಪಾಡುವುದಕ್ಕೆ ನಮ್ಮನ್ನು ಬಳಸಿ­ಕೊಳ್ಳುತ್ತೀರಿ ಆದರೆ ಸಂಬಳ ಪಾವತಿಸು­ವುದಕ್ಕೆ ಮೀನ ಮೇಷ ಎಣಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಪೌರಕಾರ್ಮಿಕರ ದಿಢೀರ್‌ ಪ್ರತಿಭಟನೆಯಿಂದ ವಿಚಲಿತರಾದ ಅಧ್ಯಕ್ಷೆ ಮಂಜುಳಾ ಸಮಸ್ಯೆ ಪರಿಹರಿ­ಸುವುದಾಗಿ ಹೇಳಿ­ದರು.

ಪೌರಕಾರ್ಮಿಕ­ರನ್ನು ಗುತ್ತಿಗೆ ಪಡೆಯುವುದಕ್ಕೆ ಸಂಬಂ­ಧಿಸಿದ ಟೆಂಡರ್‌ ಪ್ರಕ್ರಿಯೆ ವಿಳಂಬ­ಗೊಂಡಿತ್ತು, ವೇತನ ಪಾವತಿ ವಿಷಯ­ವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದ ನಂತರ ಪಾವತಿಗೆ ಸಮ್ಮತಿ ದೊರೆತಿದೆ. ಎರಡು ದಿನ ಅವಕಾಶ ಕೊಡಿ ಎಂದು ಮುಖ್ಯಾಧಿಕಾರಿ ಮಹಾದೇವ ಭೀಸೆ ಹೇಳಿದರು.

ಸ್ಥಳದಲ್ಲಿದ್ದ ಮುಖಂಡ ಟಿ.ಕೃಷ್ಣ­ಮೂರ್ತಿ ಮತ್ತಿತರರು, ಪೌರಕಾರ್ಮಿಕರ ವೇತನ ವಿಳಂಬ ಮುಂದುವರೆದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮುಖ್ಯಾಧಿಕಾರಿಗೆ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT