ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಶ್ಯಾವಾಟಿಕೆ ಕಾನೂನುಬದ್ಧಕ್ಕೆ ವಿರೋಧ

Last Updated 1 ಅಕ್ಟೋಬರ್ 2014, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರ ವೇಶ್ಯಾವಾಟಿಕೆ­ಯನ್ನು ನಿಯಂತ್ರಿಸಬೇಕೇ ಹೊರತು ಸುರಕ್ಷಿತ ಲೈಂಗಿಕತೆಯಲ್ಲಿ ತೊಡಗಿ ಎನ್ನುವುದಲ್ಲ. ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಏಡ್ಸ್‌ ವ್ಯಾಪ­ಕ­ವಾಗಿ ಹರಡುತ್ತದೆ’ ಎಂದು ಲೇಖಕಿ ರೂಪಾ ಹಾಸನ ಎಚ್ಚರಿಸಿದರು.

ವೇಶ್ಯಾವಾಟಿಕೆ ಕಾನೂನುಬದ್ಧ­ಗೊಳಿ­ಸುವುದನ್ನು ವಿರೋಧಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ (ಎಐಎಂಎಸ್‌ಎಸ್‌) ಬೆಂಗಳೂರು ಜಿಲ್ಲಾ ಸಮಿತಿಯ ವತಿಯಿಂದ ನಗರ­ದಲ್ಲಿ ಬುಧವಾರ ನಡೆದ ಸಮಾ­ವೇಶ­ದಲ್ಲಿ ಅವರು ಮಾತನಾಡಿದರು.

‘ನ್ಯಾಯಪೀಠಗಳು ವೇಶ್ಯಾವೃತ್ತಿ ಯನ್ನು ಲೈಂಗಿಕ ಜೀತ ಎಂದು ಹೇಳಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲ ಹಂತಗಳಲ್ಲೂ ವೇಶ್ಯೆಯರ ಪುನರ್ವಸತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಎಐಎಂಎಸ್‌ಎಸ್‌ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಡಾ.ಎಚ್‌.ಜಿ.­ಜಯಲಕ್ಷ್ಮಿ ಮಾತನಾಡಿ, ‘ಇದೊಂದು ಗಾಢ ಸಮಸ್ಯೆ. ವೇಶ್ಯಾವಾಟಿಕೆ ಒಂದು ಮೋಸದ ಜಾಲ. ಅವರು ಹೆಸರು ನೋಂದಣಿ ಮಾಡಿಕೊಂಡ ಕೂಡಲೇ ಅವರ ಸಮಸ್ಯೆ ಬಗೆಹರಿಯುವುದಿಲ್ಲ. ಇಂತಹ ಗಂಭೀರ ವಿಷಯದಲ್ಲಿ ತೇಪೆ ಹಾಕುವ ಯತ್ನ ಸಲ್ಲದು’ ಎಂದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಮಾತನಾಡಿ, ‘ವೇಶ್ಯಾವಾಟಿಕೆಯನ್ನು ಕಾನೂನುಬದ್ಧ­ಗಳಿಸಿದರೆ ಮಾತ್ರ ಅವರಿಗೆ ಪರಿಹಾರ ಕೊಡಲು ಸಾಧ್ಯವೇ ? ಇಂತಹ ಹೇಳಿಕೆ ಕೊಡುವವರು ತಮ್ಮ ಮನೆಯ ಹೆಣ್ಣು­ಮಕ್ಕಳನ್ನು ಆ ಸ್ಥಾನದಲ್ಲಿ ಕಲ್ಪಿಸಿ­ಕೊಳ್ಳ­ಬೇಕು’ ಎಂದು ವ್ಯಂಗ್ಯವಾಗಿ ನುಡಿದರು.

ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್‌ನ ಅಖಿಲ ಭಾರತ ಅಧ್ಯಕ್ಷ ಡಾ. ಬಿ.ಆರ್. ಮಂಜುನಾಥ್‌, ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ  ಅಪರ್ಣಾ ಬಿ.ಆರ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT